ಮುಂಬೈ: ಮುಂಬಯಿ ಮಹಾನಗರದಲ್ಲಿ ಕರೋನ ವೈರಸ್ (Coronavirus) ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ (Uddhav Thackeray) ಸರ್ಕಾರ ಕಟ್ಟುನಿಟ್ಟಿನ ಆದೇಶಗಳನ್ನು ನೀಡಿದೆ. ವಾರ್ಧಾ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ 8 ರಿಂದ ಸೋಮವಾರ ಬೆಳಿಗ್ಗೆ 8 ರವರೆಗೆ ಕರ್ಫ್ಯೂ (Curfew) ಹೇರಲಾಗಿದೆ.
ಮುಂದಿನ ಆದೇಶದವರೆಗೆ ಶಾಲಾ-ಕಾಲೇಜು ಬಂದ್ :
ಆದೇಶದ ಪ್ರಕಾರ, ವೈದ್ಯಕೀಯ ಮಳಿಗೆಗಳು ಮತ್ತು ತುರ್ತು ಸೇವೆಗಳಿಗೆ ಸಂಬಂಧ ಪಟ್ಟವರು ಮಾತ್ರ ಹೊರ ಬರಲು ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ, ಎಲ್ಲಾ ಮಳಿಗೆಗಳನ್ನು ಮುಚ್ಚಲಾಗುವುದು. ಈ ಬಾರಿ ಪೆಟ್ರೋಲ್ ಪಂಪನ್ನು (Petrol pump) ಕೂಡಾ ಮುಚ್ಚುವಂತೆ ಸರ್ಕಾರ ಆದೇಶಿಸಿದೆ. ಹೆಚ್ಚುತ್ತಿರುವ ಕರೋನಾ ವೈರಸ್ (Coronavirus) ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಸೂಚನೆ ಬರುವವರೆಗೂ ಶಾಲೆಗಳು (School)ಮತ್ತು ಕಾಲೇಜುಗಳನ್ನು (college) ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ : Alert! ಭಾರತಕ್ಕೆ ಬ್ರೆಜಿಲ್-ದ.ಆಫ್ರಿಕಾದ ಕೊರೊನಾ ವೈರಸ್ ಗಳ ಪ್ರವೇಶ, ಕೇಂದ್ರ ಹೇಳಿದ್ದೇನು?
24 ಗಂಟೆಗಳಲ್ಲಿ 5427 ಸೋಂಕಿತರು:
ವರದಿಯ ಪ್ರಕಾರ, ಮಹಾರಾಷ್ಟ್ರದ (Maharastra) 8 ಜಿಲ್ಲೆಗಳಲ್ಲಿ ಕರೋನಾ ಸೋಂಕಿತರ (COVID-19) ಸಂಖ್ಯೆಯಲ್ಲಿ ಹಠಾತ್ ಹೆಚ್ಚಳ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 5,427 ಹೊಸ ಕರೋನಾ ಪ್ರಕರಣಗಳು ವರದಿಯಾಗಿವೆ. ಕರೋನಾ ಸಾಂಕ್ರಾಮಿಕ ರೋಗವು ವೇಗವಾಗಿ ಹರಡುವುದನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅಲ್ಲದೆ, ಅಮರಾವತಿಯಲ್ಲಿ ವಾರಾಂತ್ಯದಲ್ಲಿ ಮತ್ತು ಯವತ್ಮಾಲ್‌ನಲ್ಲಿ ರಾತ್ರಿ ಕರ್ಫ್ಯೂ (Curfew) ಘೋಷಿಸಲಾಗಿದೆ.
90 ಜನರು ರೂಪಾಂತರಿತ ಸೋಂಕು ಹೊಂದಿರುವ ಸಾಧ್ಯತೆ :
90 ಜನರ ಮಾದರಿಗಳನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ಗೆ ಕಳುಹಿಸಲಾಗಿದೆ. ಇವರಲ್ಲಿ ರೂಪಾಂತರಿ ಕರೋನಾ ವೈರಸ್ ಇರುವ ಸಾಧ್ಯತೆಯಿದೆ . ವರದಿ 7-10 ದಿನಗಳಲ್ಲಿ ಬರಲಿದೆ. ಅಲ್ಲಿಯವರೆಗೆ, ಕರೋನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಮಾರ್ಗಸೂಚಿಯನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಎಂಸಿ (BMC)ಆದೇಶಿಸಿದೆ.
ಇದನ್ನೂ ಓದಿ : ಇಡೀ ವಿಶ್ವಾದ್ಯಂತ ಬಳಕೆಯಾಗಲಿದೆ ಭಾರತದ ಈ Corona Vaccine, ಸಿಕ್ತು WHO ಅನುಮತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.