ನವದೆಹಲಿ: ಕರೋನಾ ವೈರಸ್ ಇಡೀ ದೇಶದಲ್ಲಿ ಭೀತಿ ಉಂಟುಮಾಡಿದೆ. ಈ ವೈರಸ್‌ನಿಂದ ದೇಶಾದ್ಯಂತ 3 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ವೈರಸ್‌ಗೆ ತುತ್ತಾದವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ, ಈ ಸಂಖ್ಯೆ 137ಕ್ಕೆ ತಲುಪಿದೆ. ಆದರೆ ಈಗ ಭಾರತೀಯ ಸೇನೆಯ ಸೈನಿಕನಲ್ಲೂ ಕರೋನಾ ವೈರಸ್ ಪಾಸಿಟಿವ್ ಕಂಡುಬಂದಿದೆ.
ಯೋಧರೋಬ್ಬರಲ್ಲಿ ಕರೋನಾ ವೈರಸ್ (CoronaVirus) ಪಾಸಿಟಿವ್ ಕಂಡುಬಂದಿದೆ ಎಂದು ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಈ ಯುವಕನ ತಂದೆ ಫೆಬ್ರವರಿ 27 ರಂದು ಇರಾನ್‌ನಿಂದ ಭಾರತಕ್ಕೆ ಮರಳಿದರು. ಯುವಕನಿಗೆ 34 ವರ್ಷ ವಯಸ್ಸಾಗಿದ್ದು, ಅವರನ್ನು ಲಡಾಖ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಫೆಬ್ರವರಿ 29 ರಂದು ಜವಾನ್ ಅವರ ತಂದೆಯನ್ನು ಕ್ಯಾರೆಂಟೈನ್ಗೆ ಕಳುಹಿಸಲಾಯಿತು ಮತ್ತು ಮಾರ್ಚ್ 6 ರಂದು ಅವರಲ್ಲಿ ಕರೋನಾ ಪಾಸಿಟಿವ್ ಎಂದು ಕಂಡುಬಂದಿದೆ. ಸೈನಿಕ ಫೆಬ್ರವರಿ 25 ರಿಂದ ಮಾರ್ಚ್ 1 ರವರೆಗೆ ರಜೆಯಲ್ಲಿದ್ದನು ಮತ್ತು ಅವನು ಮಾರ್ಚ್ 2 ರಂದು ಕರ್ತವ್ಯಕ್ಕೆ ಮರಳಿದ್ದರು.
ಕ್ಯಾರೆಂಟೈನ್ ಸಮಯದಲ್ಲಿ ಜವಾನ್ ಅವರ ಕುಟುಂಬಕ್ಕೆ ಸಹಾಯ ಮಾಡಿದರು ಎಂದು ಮೂಲಗಳು ತಿಳಿಸಿವೆ. ಜವಾನ್ ಅವರ ತಂದೆಯಲ್ಲಿ ವೈರಸ್ ಪತ್ತೆಯಾದಾಗ, ಮಾರ್ಚ್ 7 ರವರೆಗೆ ಜವಾನ್ ಅನ್ನು ಕ್ಯಾರೆಂಟೈನ್‌ನಲ್ಲಿ ಇರಿಸಲಾಗಿತ್ತು. ಮಾರ್ಚ್ 16 ರಂದು, ಅವರಲ್ಲಿ ಕರೋನಾ ಪಾಸಿಟಿವ್ ಎಂದು ಕಂಡುಬಂದಿದೆ. ನಂತರ ಜವಾನ್ ಅವರನ್ನು ಎಸ್‌ಎನ್‌ಎಂ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.