ದೇಶದಲ್ಲಿ ವೇಗವಾಗಿ ಹರಡುತ್ತಿದೆ ಕೊರೊನಾ: ದೆಹಲಿಯಲ್ಲಿ ಹೊಸ ರೂಪಾಂತರಿ ಪತ್ತೆ!

ಕೇಂದ್ರ ಆರೋಗ್ಯ ಇಲಾಖೆಯ ಪ್ರಕಾರ, ದೇಶದಲ್ಲಿ ಕೋವಿಡ್ -19 ಸಕ್ರಿಯ ಪ್ರಕರಣಗಳು 1,28,690 ಕ್ಕೆ ಏರಿದೆ. ಕಳೆದ ದಿನಕ್ಕೆ ಹೋಲಿಸಿದರೆ ದೇಶದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆಯಾಗಿದೆ. ಶನಿವಾರ ದೇಶದಲ್ಲಿ 18,840 ಹೊಸ ಪ್ರಕರಣಗಳು ದಾಖಲಾಗಿವೆ.

Written by - Bhavishya Shetty | Last Updated : Jul 10, 2022, 10:32 AM IST
  • ಕಳೆದ 24 ಗಂಟೆಗಳಲ್ಲಿ 18,257 ಕೋವಿಡ್-19 ಪ್ರಕರಣಗಳು ವರದಿ
  • ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಸ್ಥಿತಿ
  • ರಾಷ್ಟ್ರ ರಾಜಧಾನಿಯಲ್ಲಿ ಕಂಡುಬಂದ ರೂಪಾಂತರಿ ಪ್ರಕರಣ
ದೇಶದಲ್ಲಿ ವೇಗವಾಗಿ ಹರಡುತ್ತಿದೆ ಕೊರೊನಾ: ದೆಹಲಿಯಲ್ಲಿ ಹೊಸ ರೂಪಾಂತರಿ ಪತ್ತೆ!  title=
Corona

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಒಟ್ಟು 18,257 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಅಷ್ಟೇ ಅಲ್ಲದೆ, ಈ ಅಪಾಯಕಾರಿ ವೈರಸ್‌ನಿಂದ 42 ಜನರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ, ದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 4,36,22,651 ಕ್ಕೆ ಏರಿದೆ.

ಕೇಂದ್ರ ಆರೋಗ್ಯ ಇಲಾಖೆಯ ಪ್ರಕಾರ, ದೇಶದಲ್ಲಿ ಕೋವಿಡ್ -19 ಸಕ್ರಿಯ ಪ್ರಕರಣಗಳು 1,28,690 ಕ್ಕೆ ಏರಿದೆ. ಕಳೆದ ದಿನಕ್ಕೆ ಹೋಲಿಸಿದರೆ ದೇಶದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆಯಾಗಿದೆ. ಶನಿವಾರ ದೇಶದಲ್ಲಿ 18,840 ಹೊಸ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: Gold-Sliver Price: ಇಂದು ದೇಶದಲ್ಲಿ ಹೇಗಿದೆ ಚಿನ್ನ-ಬೆಳ್ಳಿ ದರ? ಇಲ್ಲಿದೆ ನೋಡಿ ಸಂಪೂರ್ಣ ವಿವರ

ದೆಹಲಿ-ಮಹಾರಾಷ್ಟ್ರದಲ್ಲಿ ಕೋವಿಡ್ ಸ್ಥಿತಿ: 
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಕಳೆದ 24 ಗಂಟೆಗಳಲ್ಲಿ 544 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ. ಜೊತೆಗೆ ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 2760 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಐದು ಜನರು ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿನ ಬಗ್ಗೆ ಎರಡೂ ರಾಜ್ಯಗಳ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ದೆಹಲಿಯ ಆರೋಗ್ಯ ಇಲಾಖೆಯ ಪ್ರಕಾರ, ಸತತ ಮೂರನೇ ದಿನ, ದೆಹಲಿಯಲ್ಲಿ 500 ರಿಂದ 600 ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: ಧುಮ್ಮುಕ್ಕಿ ಹರಿಯುತ್ತಿದೆ ಗೋಕಾಕ್‌ ಫಾಲ್ಸ್‌: ಜನಮನ ಸೆಳೆಯುತ್ತಿದೆ ಜಲಪಾತದ ವೈಯಾರ

ದೆಹಲಿಯಲ್ಲಿ ಕಂಡುಬಂದ ರೂಪಾಂತರಿ ಪ್ರಕರಣ: 
ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರದ ಹೊಸ ಉಪ-ವೇರಿಯಂಟ್ BA.2.75 ಭಾರತದಲ್ಲಿ ಪತ್ತೆಯಾಗಿದೆ ಎಂದು ಡಬ್ಲ್ಯೂಹೆಚ್‌ಒ ಹೇಳಿದೆ. ದೆಹಲಿಯಲ್ಲಿ ಓಮಿಕ್ರಾನ್‌ನ ಹೆಚ್ಚು ಸಾಂಕ್ರಾಮಿಕ ಉಪವಿಭಾಗಗಳಾದ BA-4 ಮತ್ತು BA.5 ಪ್ರಕರಣಗಳು ಕಂಡುಬಂದಿವೆ. ಆದರೆ ಇದು ಗಂಭೀರವಾದ ಸೋಂಕುಗಳಿಗೆ ಕಾರಣವಾಗದ ಕಾರಣ ಭಯಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News