ಮನೋಹರ್ ಪರಿಕ್ಕರ್ ಹೋಗೋದನ್ನೇ ಬಿಜೆಪಿ ಕಾಯುತ್ತಿತ್ತು: ಸಂಜಯ್ ನಿರುಪಮ್

ಗೋವಾ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ ಸಮಯದ ಬಗ್ಗೆ ಪ್ರಶ್ನಿಸಿದ್ದು, ಮನೋಹರ್ ಪರಿಕ್ಕರ್ ಹೋಗೋದನ್ನೇ ಬಿಜೆಪಿ ಕಾಯುತ್ತಿತ್ತು ಎನಿಸುತ್ತದೆ ಎಂದು ಹೇಳಿದ್ದಾರೆ.

Last Updated : Mar 19, 2019, 10:46 AM IST
ಮನೋಹರ್ ಪರಿಕ್ಕರ್ ಹೋಗೋದನ್ನೇ ಬಿಜೆಪಿ ಕಾಯುತ್ತಿತ್ತು: ಸಂಜಯ್ ನಿರುಪಮ್ title=

ನವದೆಹಲಿ: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಮುಂಬೈ ಕಾಂಗ್ರೆಸ್ ಸಮಿತಿ ಅಧ್ಯಕ್ಷ  ಸಂಜಯ್ ನಿರುಪಮ್, ಇದೀಗ ಗೋವಾ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ ಸಮಯದ ಬಗ್ಗೆ ಪ್ರಶ್ನಿಸಿದ್ದು, ಮನೋಹರ್ ಪರಿಕ್ಕರ್ ಸಾಯುವುದನ್ನೇ ಬಿಜೆಪಿ ಕಾಯುತ್ತಿತ್ತು ಎನಿಸುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಗೋವಾ ಮುಖ್ಯಮಂತ್ರಿ ಪ್ರಮಾಣವಚನ ಸಮಯ ಬಹಳ ಮಧ್ಯರಾತ್ರಿ ನಡೆದಿದೆ. ಈ ಸಮಯ ನೋಡಿದ್ರೆ ಸ್ವಲ್ಪ ವಿಚಿತ್ರ ಅನಿಸುತ್ತೆ. ಇದನ್ನ ನೋಡಿದ್ರೆ, ಪರಿಕ್ಕರ್ ಜೀ ಹೋಗೋದನ್ನೇ ಬಿಜೆಪಿ ಕಾಯುತ್ತಿತ್ತು ಅಂತ ಅನಿಸುತ್ತೆ. ಪರಿಕ್ಕರ್ ಅವರ ಅಸ್ತಿ ಬಿಡುವವರೆಗಾದರೂ ಕಾಯುವ ಪರಿಜ್ಞಾನ ಬಿಜೆಪಿಗೆ ಇಲ್ಲದಾಯಿಯೇ" ಎಂದು ಟೀಕಿಸಿದ್ದಾರೆ.

ಹಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮನೋಹರ್ ಪರಿಕ್ಕರ್ ಅವರು, ಭಾನುವಾರ ರಾತ್ರಿ 8 ಗಂಟೆ ಸಮಯದಲ್ಲಿ ಕೊನೆಯುಸಿರೆಳೆದರು. ಇವರ ಅಂತ್ಯಸಂಸ್ಕಾರ ಸೋಮವಾರ ಸಂಜೆ ನೆರವೇರಿತ್ತು. ಈ ಬೆನ್ನಲ್ಲೇ ಸೋಮವಾರ ತಡರಾತ್ರಿ 1.30ರ ಸಮಯದಲ್ಲಿ ಗೋವಾದ ನೂತನ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಪ್ರಮಾಣವಚನ ಸ್ವೀಕರಿಸಿದರು. ಸದ್ಯ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಯ ಭಾರೀ ಚರ್ಚೆಗೆ ಗ್ರಾಸವಾಗಿದೆ. 

Trending News