ಚಿರಾಗ್ ಪಾಸ್ವಾನ್ ಬಿಜೆಪಿ ನಾಯಕರ ಹೆಸರನ್ನು ತೆಗೆದುಕೊಂಡು ಜನರ ದಾರಿ ತಪ್ಪಿಸುತ್ತಿದ್ದಾರೆ -ಪ್ರಕಾಶ್ ಜಾವಡೇಕರ್

2020 ರ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ವಿರುದ್ಧ ವಾಗ್ದಾಳಿ ನಡೆಸಿದರು. ಹಿರಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರ ಹೆಸರನ್ನು ತೆಗೆದುಕೊಂಡು ಬಿಹಾರದ ಜನರನ್ನು ದಾರಿ ತಪ್ಪಿಸಲು ಚಿರಾಗ್ ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.

Last Updated : Oct 16, 2020, 06:21 PM IST
ಚಿರಾಗ್ ಪಾಸ್ವಾನ್ ಬಿಜೆಪಿ ನಾಯಕರ ಹೆಸರನ್ನು ತೆಗೆದುಕೊಂಡು ಜನರ ದಾರಿ ತಪ್ಪಿಸುತ್ತಿದ್ದಾರೆ -ಪ್ರಕಾಶ್ ಜಾವಡೇಕರ್ title=
file photo

ನವದೆಹಲಿ: 2020 ರ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ವಿರುದ್ಧ ವಾಗ್ದಾಳಿ ನಡೆಸಿದರು. ಹಿರಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರ ಹೆಸರನ್ನು ತೆಗೆದುಕೊಂಡು ಬಿಹಾರದ ಜನರನ್ನು ದಾರಿ ತಪ್ಪಿಸಲು ಚಿರಾಗ್ ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.

ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಜಾವಡೇಕರ್, ಚಿರಾಗ್ ಬಿಹಾರದಲ್ಲಿ ಪ್ರತ್ಯೇಕ ಮಾರ್ಗವನ್ನು ಆರಿಸಿಕೊಂಡಿದ್ದಾರೆ, ಎಲ್‌ಜೆಪಿ ಮತಕ್ಕೆ ಕತ್ತರಿ ಹಾಕುವ ಪಾರ್ಟಿ ಎಂದು ಹೇಳಿದರು. ಬಿಜೆಪಿಗೆ ಯಾವುದೇ ಬಿ ಅಥವಾ ಸಿ ತಂಡವಿಲ್ಲ ಎಂದು ಅವರು ಒತ್ತಿ ಹೇಳಿದರು. ಬಿಹಾರ ಚುನಾವಣೆಯಲ್ಲಿ ಎನ್‌ಡಿಎಗೆ 3/4  ರಷ್ಟು ಬಹುಮತ ಸಿಗಲಿದೆ ಎಂದು ಜಾವಡೇಕರ್ ಹೇಳಿದ್ದಾರೆ.

ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರ ಚುನಾವಣೆ ಎದುರಿಸಲು ಪಾಸ್ವಾನ್ ನಿರಾಕರಣೆ

ಅಕ್ಟೋಬರ್ 15 ರಂದು, ಬಿಹಾರ ವಿಧಾನಸಭಾ ಚುನಾವಣೆಗೆ ಸ್ಥಾನ ಹಂಚಿಕೆ ಬಗ್ಗೆ ಭಿನ್ನಾಭಿಪ್ರಾಯಗಳಿದ್ದ ಕಾರಣ ನಿತೀಶ್ ಕುಮಾರ್ ಅವರ ಜೆಡಿಯು ಜೊತೆಗಿನ ಸಂಬಂಧ ಕಡಿದುಕೊಂಡರು ಮತ್ತು ಮಹಾ ದಲಿತ್‌ಗಳ ಉಪ-ಗುಂಪನ್ನು ರಚಿಸುವ ಮೂಲಕ ಮುಖ್ಯಮಂತ್ರಿ ದಲಿತ ಸಮುದಾಯಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ನಿತೀಶ್ ಕುಮಾರ್‌ ಎನ್‌ಡಿಎಗೆ ಮರಳುವ ಮೂಲಕ "ಕೆಲವು ಅನಿವಾರ್ಯತೆಗಳು ಉಂಟಾಗಿದ್ದರಿಂದಾಗಿ ಕಳೆದ ವರ್ಷ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡು ತಮ್ಮ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಹೋರಾಡಿದೆ ಎಂದು ಪಾಸ್ವಾನ್ ಹೇಳಿದ್ದಾರೆ, ಸಾರ್ವತ್ರಿಕ ಚುನಾವಣೆಯಲ್ಲಿ ಎಲ್‌ಜೆಪಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡುವ ಮೂಲಕ ಸಮ್ಮಿಶ್ರ ಧರ್ಮವನ್ನು ಉಲ್ಲಂಘಿಸಿದ್ದಾರೆ ಎಂದು ಚಿರಾಗ್ ಆರೋಪಿಸಿದ್ದರು.
 

Trending News