ಮೀಸಲಾತಿ ವಿಚಾರ: ನಿತೀಶ್ ಕುಮಾರ್ ಮತ್ತು ಬಿಜೆಪಿ ಮಧ್ಯೆ ಭಿನ್ನರಾಗ ..!

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಪ್ರಮುಖ ಮಿತ್ರಪಕ್ಷ  ಬಿಜೆಪಿ ನಡುವೆ ಮೀಸಲಾತಿ ವಿಚಾರವಾಗಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.

Last Updated : Oct 31, 2020, 12:36 PM IST
ಮೀಸಲಾತಿ ವಿಚಾರ: ನಿತೀಶ್ ಕುಮಾರ್ ಮತ್ತು ಬಿಜೆಪಿ ಮಧ್ಯೆ ಭಿನ್ನರಾಗ ..! title=
Photo Courtesy: PTI

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಪ್ರಮುಖ ಮಿತ್ರಪಕ್ಷ  ಬಿಜೆಪಿ ನಡುವೆ ಮೀಸಲಾತಿ ವಿಚಾರವಾಗಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.

ಗುರುವಾರ, ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಉದ್ಯೋಗ ಮತ್ತು ಶಿಕ್ಷಣದ ಅವಕಾಶಗಳಲ್ಲಿ ಜನಸಂಖ್ಯೆ ಆಧಾರಿತ ಮೀಸಲಾತಿ ಕುರಿತು ಮಾತನಾಡುತ್ತಿದ್ದಂತೆ, ತಮ್ಮ ಸರ್ಕಾರವು ಇಂತಹ ಉಪಕ್ರಮದ ಪರವಾಗಿದ್ದರೂ ಅದನ್ನು ಹೊಸ ಜನಗಣತಿಯ ಮಾಹಿತಿಯೊಂದಿಗೆ ಮಾತ್ರ ಕಾರ್ಯಗತಗೊಳಿಸಬಹುದು ಎಂದು ಹೇಳಿದರು. ನಿತೀಶ್ ಕುಮಾರ್ ಅವರ ಹೇಳಿಕೆಗಳನ್ನು ಹಿಂದುಳಿದಿರುವ ಸಮುದಾಯಗಳಿಂದ ಮತಗಳನ್ನು ಕ್ರೂಡಿಕರಿಸುವ ಪ್ರಯತ್ನವಾಗಿ ನೋಡಲಾಗುತ್ತಿದೆ.

ನ.9 ರಂದು ಲಾಲೂಜಿ ಜೈಲಿನಿಂದ ಬಿಡುಗಡೆಯಾಗುತ್ತಾರೆ, ಮರುದಿನವೇ ನಿತೀಶ್ ಜಿಗೆ ವಿದಾಯ-ತೇಜಸ್ವಿ ಯಾದವ್

ಇನ್ನೊಂದೆಡೆಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಮ್ಮ ಪಕ್ಷವು ಮೀಸಲಾತಿಯನ್ನು ಬೆಂಬಲಿಸಿದರೆ ಅದು ಅಸಂವಿಧಾನಿಕವಾದ ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು ಸೂಚಿಸುವ ಮೂಲಕ ಅಂತಹ ಹೇಳಿಕೆಗಳನ್ನು ತಣ್ಣಗೆಗೊಳಿಸುವ ಪ್ರಯತ್ನ ಮಾಡಿದರು.

ಜನಸಂಖ್ಯೆಯ ಆಧಾರಿತ ಮೀಸಲಾತಿ ಪ್ರಶ್ನೆಗೆ ಸಂಬಂಧಿಸಿದಂತೆ, ಇದನ್ನು ಜನಗಣತಿಯ ನಂತರವೇ ನಿರ್ಧರಿಸಬಹುದು ಮತ್ತು ಜನಗಣತಿಯನ್ನು ನಡೆಸುವ ನಿರ್ಧಾರ ನಮ್ಮ ಕೈಯಲ್ಲಿಲ್ಲ. ಮೀಸಲಾತಿ ಜಾತಿಗಳ ಜನಸಂಖ್ಯೆಯ ಅನುಪಾತದಲ್ಲಿರಬೇಕು ಎಂದು ನಾವು ಬಯಸುತ್ತೇವೆ ಎಂದು ನಿತೀಶ್ ಕುಮಾರ್ ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮತ್ತೆ ಗೆದ್ದರೆ ಬಿಹಾರ ಸೋತಂತೆ-ಚಿರಾಗ್ ಪಾಸ್ವಾನ್

ಆದರೆ ನಿತೀಶ್ ಕುಮಾರ್ ಅವರು ಜಾತಿ ಆಧಾರಿತ ಜನಗಣತಿ ಡೇಟಾವನ್ನು ಉಲ್ಲೇಖಿಸುತ್ತಿದ್ದಾರೆಯೇ ಎಂದು ಸ್ಪಷ್ಟಪಡಿಸಲಿಲ್ಲ. ಅಂತಹ ಅಂಕಿ-ಅಂಶಗಳು ಜನಗಣತಿಯಿಂದ ಸಂಗ್ರಹಿಸಲ್ಪಟ್ಟ ಭಾಗವಾಗಬೇಕೆಂದು ಮುಖ್ಯಮಂತ್ರಿ ಪದೇ ಪದೇ ಒತ್ತಾಯಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30 ರವರೆಗೆ ನಿಗದಿಯಾಗಿದ್ದ ಜನಗಣತಿ 2021 ರ ಮೊದಲ ಹಂತವನ್ನು ಕೇಂದ್ರವು ಮುಂದೂಡಿದೆ. ಅದು ಯಾವಾಗ ನಡೆಯುತ್ತದೆ ಎಂಬ ಬಗ್ಗೆ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗಿಲ್ಲ ಆದರೆ ಅದು ಈ ವರ್ಷ ನಡೆಯುವ ಸಾಧ್ಯತೆಯಿಲ್ಲ.

ನಿತೀಶ್ ಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ- ಬಿಜೆಪಿ ನಾಯಕ ಸುಶಿಲ್ ಮೋದಿ

ಫೆಬ್ರವರಿಯಲ್ಲಿ, ಬಿಹಾರ ವಿಧಾನಸಭೆಯು ಜನಗಣತಿ 2021 ರಲ್ಲಿ ಜಾತಿ ಆಧಾರಿತ ದತ್ತಾಂಶವನ್ನು ಸೇರಿಸಬೇಕೆಂದು ಶಿಫಾರಸು ಮಾಡುವ ನಿರ್ಣಯವನ್ನು ಅಂಗೀಕರಿಸಿತು. ಆ ಸಮಯದಲ್ಲಿ ನಿತೀಶ್ ಕುಮಾರ್ ಅವರು  "ದೇಶದಲ್ಲಿ ಜಾತಿ ಆಧಾರಿತ ಗಣತಿಯನ್ನು ನಡೆಸಬೇಕು ಎಂಬುದು ನಮ್ಮ ಬೇಡಿಕೆ' ಎಂದು ಹೇಳಿದರು. ಬಿಹಾರ ವಿಧಾನಸಭೆ ಕೂಡ ಇದೇ ರೀತಿಯ ನಿರ್ಣಯವನ್ನು ಸುಮಾರು 12 ತಿಂಗಳ ಹಿಂದೆಯೇ ಅಂಗೀಕರಿಸಿತು.

ಇನ್ನೊಂದೆಡೆಗೆ ಬಿಜೆಪಿಯ ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿ"ನೋಡಿ...ಮೀಸಲಾತಿಗೆ ಸಂಬಂಧಿಸಿದಂತೆ, ನಾವು ತುಂಬಾ ಸ್ಪಷ್ಟವಾಗಿದ್ದೇವೆ. ನಾವು ಸಾಂವಿಧಾನಿಕ ಮೀಸಲಾತಿಯನ್ನು ಬೆಂಬಲಿಸುತ್ತೇವೆ. ಬಿಜೆಪಿ ಹಿಂದುಳಿದವರಿಗೆ ಭರವಸೆ ನೀಡಿದ್ದಷ್ಟೇ ಅಲ್ಲದೆ ಅದನ್ನು ತಲುಪಿಸುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದ್ದಾರೆ. 

 

Trending News