ಲಾಕ್​ಡೌನ್‌ನಿಂದಾಗಿ ಅಮೆರಿಕದಲ್ಲಿ ಸಿಲುಕಿದ ಮುಖ್ಯ ಚುನಾವಣಾ ಆಯುಕ್ತರು

ವೈಯಕ್ತಿಕ ಕಾರಣದಿಂದಾಗಿ ಅಮೆರಿಕಕ್ಕೆ ತೆರಳಿದ್ದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ  ಏಪ್ರಿಲ್ ಮೊದಲ ವಾರದಲ್ಲಿ ಮರಳಬೇಕಿತ್ತು.  

Last Updated : Apr 22, 2020, 11:41 AM IST
ಲಾಕ್​ಡೌನ್‌ನಿಂದಾಗಿ ಅಮೆರಿಕದಲ್ಲಿ ಸಿಲುಕಿದ ಮುಖ್ಯ ಚುನಾವಣಾ ಆಯುಕ್ತರು title=

ನವದೆಹಲಿ: ಕೊರೊನಾವೈರಸ್‌(Coronavirus) ನಿಂದಾಗಿ ಜಗತ್ತು ಸ್ಥಗಿತಗೊಂಡಿದೆ. ಕಳೆದ ಒಂದು ತಿಂಗಳಿನಿಂದ ಭಾರತ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಏತನ್ಮಧ್ಯೆ ಭಾರತದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ (Sunil Arora) ಅಮೆರಿಕದಲ್ಲಿ ಸಿಲುಕಿದ್ದಾರೆ. ವೈಯಕ್ತಿಕ ಕಾರಣಕ್ಕೆ ಅಮೆರಿಕ ಪ್ರವಾಸ ಕೈಗೊಂಡಿದ್ದ ಮುಖ್ಯ ಚುನಾವಣಾ ಆಯುಕ್ತರು ಎಪ್ರಿಲ್ ಮೊದಲ ವಾರದಲ್ಲಿ ಭಾರತಕ್ಕೆ ಹಿಂದಿರುಗಬೇಕಿತ್ತು.  ಆದರೆ ಮಾರ್ಚ್ 23ರಿಂದ ಅಂತಾರಾಷ್ಟ್ರೀಯ ವಿಮಾನಯಾನ ನಿಷೇಧದಿಂದಾಗಿ ಅವರು ಅಮೆರಿಕದಲ್ಲಿ ಸಿಲುಕಿಕೊಂಡಿದ್ದಾರೆ.

ಈಗ ಮುಖ್ಯ ಚುನಾವಣಾ ಆಯುಕ್ತ  (Chief Election Commissioner) ಅರೋರಾ ಅಮೆರಿಕದಿಂದಲೇ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚುನಾವಣಾ ಆಯೋಗದ ಪ್ರಮುಖ ನಿರ್ಧಾರಗಳಲ್ಲಿ ಭಾಗವಹಿಸುತ್ತಿದ್ದಾರೆ. ಭಾರತಕ್ಕೆ ಮರಳಲು  ಲಾಕ್‌ಡೌನ್ (Lockdown) ತೆರೆಯುವುದನ್ನೇ ಕಾಯುತ್ತಿರುವ ಸುನೀಲ್ ಆರೋರಾ ಸದ್ಯ ಅಮೆರಿಕ (America)ದಿಂದಲೇ ಪ್ರಮುಖ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

ಮಾಹಿತಿಯ ಪ್ರಕಾರ ಸುನೀಲ್ ಅರೋರಾ ಮಾರ್ಚ್ 10ರಂದು ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಹೋದರು. ಅವರು ಏಪ್ರಿಲ್ 4ರಂದು ಭಾರತಕ್ಕೆ ಮರಳಬೇಕಿತ್ತು. ಮುಖ್ಯ ಚುನಾವಣಾ ಆಯುಕ್ತರು ಪ್ರಮುಖ ನಿರ್ಧಾರಗಳಲ್ಲಿ ಅಮೆರಿಕದೊಂದಿಗೆ ಸಂಪರ್ಕದಲ್ಲಿರುತ್ತಾರೆ ಎಂದು ಚುನಾವಣಾ ಆಯೋಗ ಹೇಳುತ್ತದೆ. ಚುನಾವಣಾ ಆಯೋಗದ ಉಳಿದ ಇಬ್ಬರು ಸದಸ್ಯರಾದ ಅಶೋಕ್ ಲವಾಸಾ ಮತ್ತು ಸುಶೀಲ್ ಚಂದ್ರ ಅವರೊಂದಿಗೆ ಅವರು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.

ಕರೋನಾ ವೈರಸ್ ಬಿಕ್ಕಟ್ಟಿನ ದೃಷ್ಟಿಯಿಂದ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು ಚುನಾವಣಾ ಆಯೋಗದ ಸಿಬ್ಬಂದಿಗಳ ಸಂಬಳ ಕಡಿತಗೊಳಿಸಲಾಗುವುದು ಎಂದು ಇತ್ತೀಚೆಗೆ ಘೋಷಿಸಿದ್ದರು. 

Trending News