Central Govt Employees : ಸರ್ಕಾರಿ ನೌಕರರ ಈ ಸೌಲಭ್ಯ ನಾಳೆಯಿಂದ ಬಂದ್ : ಹೊಸ ಮಾರ್ಗಸೂಚಿ ಗೊತ್ತಾ?

ಕೋವಿಡ್ ಸಮಯದಲ್ಲಿ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ ಎಲ್ಲಾ ಸೌಲಭ್ಯಗಳನ್ನು ಈಗ ರದ್ದುಗೊಳಿಸಲಾಗುತ್ತಿದೆ. ಈ ಎಲ್ಲಾ ರಿಯಾಯಿತಿಗಳು 8 ನವೆಂಬರ್ 2021 ರಿಂದ ಮುಕ್ತಾಯಗೊಳ್ಳಲಿವೆ. ಇನ್ನು ಸರ್ಕಾರಿ ನೌಕರರು ಪೂರ್ಣಾವಧಿ ಹಾಜರಾತಿಯನ್ನು ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು.

Written by - Channabasava A Kashinakunti | Last Updated : Nov 7, 2021, 03:00 PM IST
  • ನಾಳೆಯಿಂದ ಸರ್ಕಾರಿ ನೌಕರರ ಸೌಲಭ್ಯ ಬಂದ್
  • ಈಗ ಪೂರ್ಣಾವಧಿ ಹಾಜರಾತಿಯನ್ನು ಕಚೇರಿಯಲ್ಲಿ ನೀಡಬೇಕಾಗುತ್ತದೆ
  • ಸರ್ಕಾರಿ ನೌಕರರಿಗೆ ಸರ್ಕಾರ ಆದೇಶ ಹೊರಡಿಸಿದೆ
Central Govt Employees : ಸರ್ಕಾರಿ ನೌಕರರ ಈ ಸೌಲಭ್ಯ ನಾಳೆಯಿಂದ ಬಂದ್ : ಹೊಸ ಮಾರ್ಗಸೂಚಿ ಗೊತ್ತಾ? title=

ನವದೆಹಲಿ : ಸರ್ಕಾರಿ ನೌಕರರಿಗೆ ಒಂದು ಬಿಗ್ ನ್ಯೂಸ್ ಇದೆ. ಕೋವಿಡ್ ಸಮಯದಲ್ಲಿ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ ಎಲ್ಲಾ ಸೌಲಭ್ಯಗಳನ್ನು ಈಗ ರದ್ದುಗೊಳಿಸಲಾಗುತ್ತಿದೆ. ಈ ಎಲ್ಲಾ ರಿಯಾಯಿತಿಗಳು 8 ನವೆಂಬರ್ 2021 ರಿಂದ ಮುಕ್ತಾಯಗೊಳ್ಳಲಿವೆ. ಇನ್ನು ಸರ್ಕಾರಿ ನೌಕರರು ಪೂರ್ಣಾವಧಿ ಹಾಜರಾತಿಯನ್ನು ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಹಾಜರಾತಿ ದಾಖಲಿಸಲು ಬಯೋಮೆಟ್ರಿಕ್ ಹಾಜರಾತಿಯನ್ನು ನಾಳೆ ಅಂದರೆ ಸೋಮವಾರದಿಂದ ಮತ್ತೆ ಜಾರಿಗೊಳಿಸಲಾಗುತ್ತಿದೆ.

ಸರ್ಕಾರದ ಹೊರಡಿಸಿದೆ ಆದೇಶ 

ಬಯೋಮೆಟ್ರಿಕ್ ಹಾಜರಾತಿ(Biometric Attendance) ಕುರಿತು ಎಲ್ಲಾ ಕೇಂದ್ರ ಕಚೇರಿಗಳಲ್ಲಿಯೂ ಅಧಿಸೂಚನೆ ಹೊರಡಿಸಲಾಗಿದೆ. ಭಾರತ ಸರ್ಕಾರದ ಉಪ ಕಾರ್ಯದರ್ಶಿ ಉಮೇಶ್ ಕುಮಾರ್ ಭಾಟಿಯಾ ಅವರ ಪ್ರಕಾರ, 'ಕೊರೊನಾ ಸಾಂಕ್ರಾಮಿಕದ ದೃಷ್ಟಿಯಿಂದ, ಕಚೇರಿಗಳಲ್ಲಿ ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ಕರೆಯುವುದು ಮತ್ತು ಕೆಲಸದ ಸಮಯವನ್ನು ಕಡಿಮೆ ಮಾಡುವುದು ಮುಂತಾದ ರಿಯಾಯಿತಿಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ಈಗ ನವೆಂಬರ್ 8 ರಿಂದ, ಪ್ರತಿಯೊಬ್ಬ ಉದ್ಯೋಗಿ ಬಯೋಮೆಟ್ರಿಕ್ ಹಾಜರಾತಿಯನ್ನು ನೋಂದಾಯಿಸಬೇಕು.

ಇದನ್ನೂ ಓದಿ : Free Ration : ಪಡಿತರದಾರರಿಗೆ ಬಿಗ್ ನ್ಯೂಸ್ : ಉಚಿತ ಪಡಿತರ 6 ತಿಂಗಳು ವಿಸ್ತರಣೆ, ಆಹಾರ ಧಾನ್ಯ ಪಡೆಯಲು ಈ ಕೆಲಸ ಮಾಡಿ

ಸರ್ಕಾರದ ಆದೇಶದಲ್ಲಿ ಏನಿದೆ ಗೊತ್ತಾ?

- ಇದಕ್ಕಾಗಿ ಸಂಪೂರ್ಣ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ.
- ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಬಯೋಮೆಟ್ರಿಕ್ ಯಂತ್ರದ ಬಳಿ ಸ್ಯಾನಿಟೈಸರ್ ಹೊಂದಿರುವುದು ಕಡ್ಡಾಯವಾಗಿದೆ.
- ಹಾಜರಾತಿಯನ್ನು ನೋಂದಾಯಿಸುವ ಮೊದಲು ಮತ್ತು ನಂತರ ಎಲ್ಲಾ ಉದ್ಯೋಗಿಗಳು(Central Govt Employees) ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು.
- ಬಯೋಮೆಟ್ರಿಕ್ ಹಾಜರಾತಿಯನ್ನು ನೋಂದಾಯಿಸುವಾಗ ನೌಕರರು ತಮ್ಮ ನಡುವೆ ಆರು ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು.
- ಎಲ್ಲಾ ಉದ್ಯೋಗಿಗಳು ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸುವುದು ಅಥವಾ ಮುಖ ಕವಚವನ್ನು ಧರಿಸುವುದು ಕಡ್ಡಾಯವಾಗಿದೆ.
- ಬಯೋಮೆಟ್ರಿಕ್ ಯಂತ್ರದ ಟಚ್‌ಪ್ಯಾಡ್ ಅನ್ನು ಆಗಾಗ್ಗೆ ಸ್ವಚ್ಛಗೊಳಿಸಲು ಗೊತ್ತುಪಡಿಸಿದ ಸಿಬ್ಬಂದಿಯನ್ನು ನಿಯೋಜಿಸಬೇಕು.
- ಈ ಉದ್ಯೋಗಿಗಳು ತಮ್ಮ ಹಾಜರಾತಿಯನ್ನು ನೋಂದಾಯಿಸಲು ಬರುವ ಉದ್ಯೋಗಿಗಳಿಗೆ ಕೋವಿಡ್ ಮಾರ್ಗಸೂಚಿಗಳನ್ನು ತಿಳಿಸುತ್ತಾರೆ.
- ಬಯೋಮೆಟ್ರಿಕ್ ಯಂತ್ರವನ್ನು ತೆರೆದ ವಾತಾವರಣದಲ್ಲಿ ಇಡಬೇಕು.
- ಯಂತ್ರವು ಒಳಗಿದ್ದರೆ, ಸಾಕಷ್ಟು ನೈಸರ್ಗಿಕ ವಾತಾಯನ ಇರಬೇಕು.

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಮತ್ತೆ ಸಿಹಿ ಸುದ್ದಿ! ಮತ್ತೊಂದು ಭತ್ಯೆಯ ಬಗ್ಗೆ ಲೆಕ್ಕಾಚಾರ, ಹೊಸ ಅಪ್‌ಡೇಟ್ ಬಗ್ಗೆ ತಿಳಿಯಿರಿ

ಕೇಂದ್ರ ಉದ್ಯೋಗಿಗಳಿಗೆ ಸಿಹಿಸುದ್ದಿ

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು(Central Govt Employees DA Hike) ಶೇ.3ರಷ್ಟು ಹೆಚ್ಚಿಸುವುದರ ಜತೆಗೆ ಜುಲೈ ತಿಂಗಳ ಬೋನಸ್ ಕೂಡ ನೀಡಲಾಗಿದೆ. ಜುಲೈನಿಂದ ಡಿಸೆಂಬರ್‌ವರೆಗಿನ ಅವಧಿಗೆ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಲಾಗಿದೆ. ಅಂದರೆ, ಈಗ ಕೇಂದ್ರ ನೌಕರರ ಮೂಲ ವೇತನದಲ್ಲಿ ಡಿಎ ಶೇ.31ಕ್ಕೆ ಏರಿಕೆಯಾಗಿದೆ. ಹೆಚ್ಚಿದ ಭತ್ಯೆ ಜುಲೈ 1, 2021 ರಿಂದ ಅನ್ವಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News