ನವದೆಹಲಿ: ಸಿಬಿಎಸ್ಇ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಹಾರದ ಇಬ್ಬರು ಹಾಗೂ ಜಾರ್ಖಂಡ್ ನ ಓರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಬಂಧಿತರನ್ನು ಸ್ಟಡಿ ವಿಷನ್ ಎಂಬ ತರಬೇತಿಯ ಇನ್ಸ್ಟಿಟ್ಯೂಟ್ನ ಭಾಗವೆಂದು ಹೇಳಲಾಗಿದೆ.
"ಐಪಿಸಿಯ ನಿಬಂಧನೆಗಳ ಅಡಿಯಲ್ಲಿ ಮೂರು ಜನರನ್ನು ಬಂಧಿಸಲಾಗಿದೆ, ಜುವೆನೈಲ್ ಕಾಯ್ದೆಯಡಿ ಬಂಧಿತರಾಗಿರುವ ಒಂಬತ್ತು ಮಂದಿ ನಮ್ಮ ಸಿಐಟಿಯು ತನಿಖೆ ನಡೆಯುತ್ತಿದೆ" ಎಂದು ಛಾತ್ರಾದ ಪೊಲೀಸ್ ಅಧೀಕ್ಷಕ ತಿಳಿಸಿದ್ದಾರೆ.
Three people have been arrested under provisions of IPC; Nine who are underage have been detained under Juvenile Act. Probe by our SIT is still underway: Superintendent of Police Chatra, #Jharkhand on #CBSEPaperLeak pic.twitter.com/gAg1TrmALP
— ANI (@ANI) March 31, 2018
ಈ ಸಂಬಂಧ ದೆಹಲಿ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ.