ಕಲರ್‌ ಬಗ್ಗೆ ಲೇವಡಿ ಮಾಡಿದ ಕಪಿಲ್‌ಗೆ ಅಟ್ಲೀ ಕೊಟ್ಟ ಉತ್ತರ ಸೂಪರ್‌ ಗುರು...! ಮುಖ ಬಾಡಿ ಹೋಯ್ತು..

Atlee on Kapil Sharma : ಅಟ್ಲಿ ನಿರ್ದೇಶನದ ಮತ್ತು ವಿಜಯ್ ಅಭಿನಯದ 'ತೇರಿ' ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಈ ಚಿತ್ರ ಈಗ ಹಿಂದಿಯಲ್ಲಿ ‘ಬೇಬಿ ಜಾನ್’ ಆಗಿ ರಿಮೇಕ್ ಆಗಿದೆ. ವರುಣ್ ಧವನ್, ಕೀರ್ತಿ ಸುರೇಶ್ ಮುಂತಾದವರು ನಟಿಸಿರುವ ಈ ಚಿತ್ರವನ್ನು ನಿರ್ದೇಶಕ ಅಟ್ಲಿ ನಿರ್ಮಿಸಿದ್ದಾರೆ. ಖಲೀಸ್ ನಿರ್ದೇಶಿಸಿದ್ದಾರೆ. 

Written by - Krishna N K | Last Updated : Dec 19, 2024, 02:42 PM IST
    • ಅಟ್ಲಿ ನಿರ್ದೇಶನದ ಮತ್ತು ವಿಜಯ್ ಅಭಿನಯದ 'ತೇರಿ'
    • ಈ ಚಿತ್ರ ಈಗ ಹಿಂದಿಯಲ್ಲಿ ‘ಬೇಬಿ ಜಾನ್’ ಆಗಿ ರಿಮೇಕ್ ಆಗಿದೆ.
    • ಈ ಚಿತ್ರವನ್ನು ನಿರ್ದೇಶಕ ಅಟ್ಲಿ ನಿರ್ಮಿಸಿದ್ದಾರೆ. ಖಲೀಸ್ ನಿರ್ದೇಶಿಸಿದ್ದಾರೆ.
ಕಲರ್‌ ಬಗ್ಗೆ ಲೇವಡಿ ಮಾಡಿದ ಕಪಿಲ್‌ಗೆ ಅಟ್ಲೀ ಕೊಟ್ಟ ಉತ್ತರ ಸೂಪರ್‌ ಗುರು...! ಮುಖ ಬಾಡಿ ಹೋಯ್ತು..   title=

Atlee Kapil sharma show : ಇದೇ ತಿಂಗಳ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಪ್ರಚಾರದಲ್ಲಿ ಚಿತ್ರತಂಡ ನಿರತವಾಗಿದೆ. ಅದರಂತೆ, ಅಟ್ಲೀ ಸೇರಿದಂತೆ ಚಿತ್ರತಂಡವು ಪ್ರಸಿದ್ಧ ಭಾರತೀಯ ಟಿವಿ ಕಾರ್ಯಕ್ರಮ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ನಲ್ಲಿ ಭಾಗವಹಿಸಿತು.

ಕಾರ್ಯಕ್ರಮದಲ್ಲಿ ನಿರೂಪಕ ಕಪಿಲ್ ಶರ್ಮಾ ಅವರು ನಿರ್ದೇಶಕ ಅಟ್ಲೀ ಅವರನ್ನು ನೋಡಿ, "ನೀವು ದೊಡ್ಡ ನಟರನ್ನು ಭೇಟಿ ಮಾಡಲು ಹೋದಾಗ ಅವರು, ನಿಮ್ಮನ್ನ ನೋಡಿಯೂ ಅಟ್ಲೀ ಎಲ್ಲಿ ಅಂತ ಕೇಳಿದ್ದಾರಾ?" ಎಂದು ಅಟ್ಲೀಯ ಮೈಬಣ್ಣವನ್ನು ಸೂಚ್ಯವಾಗಿ ಅಣಕಿಸುತ್ತಾ ಪ್ರಶ್ನೆ ಮಾಡಿದರು.. 

ಇದನ್ನೂ ಓದಿ: PV Sindhu : ನಿಶ್ಚಿತಾರ್ಥ ಮಾಡಿಕೊಂಡ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು..! ಫೊಟೋಸ್‌ ವೈರಲ್‌

ಇದಕ್ಕೆ ಅಟ್ಲಿ ನೀಡಿರುವ ಪ್ರತಿಕ್ರಿಯೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. “ನಿಮ್ಮ ಪ್ರಶ್ನೆ ನನಗೆ ಅರ್ಥವಾಯಿತು.. ಅದಕ್ಕೆ ನಾನು ಉತ್ತರಿಸುತ್ತೇನೆ. ಈ ಸಮಯದಲ್ಲಿ ನಾನು ಮೊದಲ ಈ ಚಿತ್ರವನ್ನು ನಿರ್ಮಿಸಿದ್ದಕ್ಕಾಗಿ ಎಆರ್ ಮುರುಗದಾಸ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.

ಎಆರ್ ಮುರುಗದಾಸ್ ನನ್ನ ಬಳಿ ಸ್ಕ್ರಿಪ್ಟ್ ಕೇಳಿದರು. ಅವನು ನನ್ನ ನೋಟದ ಬಗ್ಗೆ ಯೋಚಿಸಲಿಲ್ಲ. ನಾನು ಕಥೆ ಹೇಳಿದ ರೀತಿ ಅವರಿಗೆ ಇಷ್ಟವಾಯಿತು. ನಾವು ಯಾರನ್ನಾದರೂ ಅವರ ನೋಟದ ಆಧಾರದ ಮೇಲೆ ನಿರ್ಣಯಿಸಬಾರದು ಎಂದು ಕಪಿಲ್ ಶರ್ಮಾಗೆ ಮುಟ್ಟಿ ನೋಡಿಕೊಳ್ಳುವಂತೆ ಅಟ್ಲೀ ಉತ್ತರಿಸಿದರು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News