ನವದೆಹಲಿ : ಈ ವರ್ಷ CBSE 10 ನೇ ಮತ್ತು 12 ನೇ ಬೋರ್ಡ್ ಪರೀಕ್ಷೆ (CBSE 10th 12th Exam) ಎರಡು ಹಂತಗಳಲ್ಲಿ ನಡೆಯಲಿದೆ. ಇದರೊಂದಿಗೆ, ಪರೀಕ್ಷೆಯ ಸ್ವರೂಪವನ್ನೂ ಬದಲಾಯಿಸಲಾಗಿದೆ. ಈ ಬಾರಿ 10 ಮತ್ತು 12 ನೇ ಪರೀಕ್ಷೆಗಳಲ್ಲಿ ಯಾವುದೇ ಸಬ್ಜೆಕ್ಟ್ ವೈಸ್ ಪ್ರಶ್ನೆಗಳು ಇರುವುದಿಲ್ಲ. 90 ನಿಮಿಷಗಳ ಒಬ್ಜೆಕ್ಟ್ ವೈಸ್ ಪ್ರಶ್ನೆಗಳು ಇರುತ್ತವೆ. ಅಲ್ಲದೆ, ಪರೀಕ್ಷೆಯು ಆಫ್‌ಲೈನ್‌ನಲ್ಲಿರುತ್ತದೆ.
ಆಫ್‌ಲೈನ್‌ನಲ್ಲಿರುತ್ತದೆ ಪರೀಕ್ಷೆ :
ಸಿಬಿಎಸ್‌ಇ (CBSE) ನೀಡಿದ ಮಾಹಿತಿಯ ಪ್ರಕಾರ, 10 ನೇ ಮತ್ತು 12 ನೇ ತರಗತಿಯ ಮೊದಲ ಹಂತದ ಬೋರ್ಡ್ ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ (offline) ನಡೆಸಲಾಗುತ್ತದೆ. ಪರೀಕ್ಷೆಯ ದಿನಾಂಕವನ್ನು ಅಕ್ಟೋಬರ್ 18 ರಂದು ಘೋಷಿಸಲಾಗುವುದು. 10 ನೇ ಮತ್ತು 12 ನೇ ತರಗತಿಯ ಟರ್ಮ್ -1 ಬೋರ್ಡ್ ಪರೀಕ್ಷೆಯಲ್ಲಿ (borad exam) ಒಬ್ಜೆಕ್ಟ್ ವೈಸ್ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದಕ್ಕಾಗಿ 90 ನಿಮಿಷಗಳ ಸಮಯಾವಕಾಶ ನೀಡಲಾಗುತ್ತದೆ.
ಇದನ್ನೂ ಓದಿ : Corona Vaccine : 100 ಕೋಟಿ ಕರೋನಾ ಲಸಿಕೆಯ ಡೋಸ್ ಪೂರೈಸಲಿರುವ ಭಾರತ, ನಡೆದಿದೆ ಸಂಭ್ರಮಕ್ಕೆ ಸಿದ್ದತೆ
ಶೀಘ್ರವೇ ದಿನಾಂಕ ಪ್ರಕಟ :
ಸಿಬಿಎಸ್‌ಇ ಪ್ರಸ್ತುತ ಮೊದಲ ಹಂತದ ಪರೀಕ್ಷೆಗಳಿಗೆ ದಿನಾಂಕವನ್ನು ನಿಗದಿಪಡಿಸುತ್ತಿದ್ದು, ಅದನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ವಿದ್ಯಾರ್ಥಿಗಳ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, ಸಿಬಿಎಸ್‌ಇ ಮೊದಲ ಅವಧಿಯ ಪರೀಕ್ಷೆಗಳಿಗಾಗಿ ದೇಶಾದ್ಯಂತದ ವಿದ್ಯಾರ್ಥಿಗಳಿಗೆ ಹೊಂದಿಕೊಳ್ಳುವ ವೇಳಾಪಟ್ಟಿಯನ್ನು ನೀಡುತ್ತದೆ. ಮೊದಲ ಅವಧಿಯ ಬೋರ್ಡ್ ಪರೀಕ್ಷೆಗಳನ್ನು 8 ವಾರಗಳ ದೀರ್ಘ ವೇಳಾಪಟ್ಟಿಯಲ್ಲಿ ನಡೆಸಬಹುದು. ಶೀಘ್ರದಲ್ಲೇ ಸಿಬಿಎಸ್‌ಇ ಮಂಡಳಿಯು (CBSE Board) ಮೊದಲ ಅವಧಿಯ ಬೋರ್ಡ್ ಪರೀಕ್ಷೆಗಳ ದಿನಾಂಕವನ್ನು ಘೋಷಿಸಲಿದೆ.
ಮಾರ್ಕಿಂಗ್ ಸ್ಕೀಮ್ ಜಾರಿ :
ಎರಡು ಹಂತಗಳಲ್ಲಿನ ಬೋರ್ಡ್ ಪರೀಕ್ಷೆಯೊಂದಿಗೆ, ಈ ಬಾರಿ 10 ಮತ್ತು 12 ನೇ ತರಗತಿಯ ಇಂಟರ್ನಲ್ ಮಾರ್ಕಿಂಗ್ (internal marking) ಮತ್ತು ಪ್ರಾಕ್ಟಿಕಲ್ ಅನ್ನು ಎರಡು ಭಾಗಗಳಲ್ಲಿ ನಡೆಸಲಾಗುತ್ತದೆ. ಮಂಡಳಿಯು ಈಗಾಗಲೇ ಮಾರ್ಕಿಂಗ್ ಸ್ಕೀಮ್ ಮತ್ತು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 10 ನೇ ತರಗತಿಗೆ 20 ಅಂಕಗಳ ಇಂಟರ್ನಲ್ ಮಾರ್ಕಿಂಗ್ ಅನ್ನು 10-10 ಅಂಕಗಳಂತೆ ಎರಡು ಭಾಗಗಳಲ್ಲಿ ಹಂಚಲಾಗುವುದು. 12 ನೇ ತರಗತಿಗೆ ತಲಾ 15 ಅಂಕಗಳಂತೆ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. 12 ನೇ ತರಗತಿಗೆ ಒಟ್ಟು 30 ಅಂಕಗಳ ಪ್ರಾಕ್ಟಿಕಲ್ ಅನ್ನು ತಲಾ 15 ಅಂಕಗಳ ಎರಡು ಹಂತಗಳಲ್ಲಿ ತೆಗೆದುಕೊಳ್ಳಲಾಗುತ್ತದೆ.
ಇದನ್ನೂ ಓದಿ : PM Awas ಯೋಜನೆ ಅಡಿಯಲ್ಲಿ ಮನೆ ಕಟ್ಟಲು ಸಿಗಲಿದೆ ₹4 ಲಕ್ಷ! ನೀವುಈ ಲಾಭ ಪಡೆಯಬಹುದು ಹೇಗೆ? ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ