ಶಾಕಿಂಗ್! ನಿಮ್ಮ ಸ್ಯಾನಿಟೈಜರ್ ವಿಷಕಾರಿಯಾಗಿರಬಹುದು, ಮೊದಲ ಬಾರಿಗೆ ಸಿಬಿಐ ನೀಡಿದೆ ಈ ಎಚ್ಚರಿಕೆ

ಕೋವಿಡ್ -19 ಸಮಯದಲ್ಲಿ ವಿಷಕಾರಿ ಹ್ಯಾಂಡ್ ಸ್ಯಾನಿಟೈಜರ್ ಬಳಕೆಯ ಬಗ್ಗೆ ಇತರ ದೇಶಗಳಿಂದಲೂ ಮಾಹಿತಿ ಬಂದಿದೆ. ಅಧಿಕಾರಿಯೊಬ್ಬರು ಮೆಥನಾಲ್ ತುಂಬಾ ವಿಷಕಾರಿಯಾಗಿದೆ ಮತ್ತು ಇದು ಮಾನವ ದೇಹಕ್ಕೆ ಅಪಾಯಕಾರಿ ಎಂದು ಸಾಬೀತುಪಡಿಸುತ್ತದೆ ಎಂದು ಹೇಳಿದರು.

Last Updated : Jun 16, 2020, 09:34 AM IST
ಶಾಕಿಂಗ್! ನಿಮ್ಮ ಸ್ಯಾನಿಟೈಜರ್ ವಿಷಕಾರಿಯಾಗಿರಬಹುದು, ಮೊದಲ ಬಾರಿಗೆ ಸಿಬಿಐ ನೀಡಿದೆ ಈ ಎಚ್ಚರಿಕೆ title=

ನವದೆಹಲಿ: ಕರೋನವೈರಸ್ ಕೋವಿಡ್ -19 (Covid-19) ತಡೆಗಟ್ಟಲು ಹ್ಯಾಂಡ್ ಸ್ಯಾನಿಟೈಜರ್ ಬಳಸಲು ಹೆಚ್ಚಿನ ವೈದ್ಯರು ಶಿಫಾರಸು ಮಾಡುತ್ತಿದ್ದಾರೆ. ಆದರೆ ಈ ಸ್ಯಾನಿಟೈಜರ್ ನಿಮ್ಮನ್ನು ರಕ್ಷಿಸುವ ಬದಲಿಗೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಇಂತಹ ಸ್ಯಾನಿಟೈಜರ್‌ಗಳನ್ನು ದೇಶದಲ್ಲಿಯೂ ಮಾರಾಟ ಮಾಡಲಾಗುತ್ತಿದೆ ಎಂದು ಕೇಂದ್ರೀಯ ತನಿಖಾ ದಳ (CBI) ಮೊದಲ ಬಾರಿಗೆ ಎಚ್ಚರಿಕೆ ನೀಡಿದೆ. ಇದು ಜನರ ಜೀವಕ್ಕೆ ಅಪಾಯವನ್ನುಂಟುಮಾಡಬಹುದು ಎಂಬ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದೆ.

ಸ್ಯಾನಿಟೈಜರ್ನಲ್ಲಿ ಮೆಥನಾಲ್ ಬಳಕೆ:
ಹಲವಾರು ಗ್ಯಾಂಗ್‌ಗಳು ತುಂಬಾ ವಿಷಕಾರಿ ಮೆಥನಾಲ್ ಬಳಸಿ ತಯಾರಿಸಿದ ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ಮಾರಾಟ ಮಾಡುತ್ತಿವೆ ಮತ್ತು ಇನ್ನೊಂದು ರೀತಿಯ ಗ್ಯಾಂಗ್ ಸಹ ಕಾರ್ಯನಿರ್ವಹಿಸುತ್ತಿದೆ ಎಂದು ಇಂಟರ್‌ಪೋಲ್‌ನಿಂದ ಬಂದ ಮಾಹಿತಿಯ ಆಧಾರದ ಮೇಲೆ ಸಿಬಿಐ ದೇಶಾದ್ಯಂತದ ಪೊಲೀಸ್ ಮತ್ತು ಕಾನೂನು ಜಾರಿ ಸಂಸ್ಥೆಗಳನ್ನು ಎಚ್ಚರಿಸಿದೆ. ಪಿಪಿಇ (PPE) ಮತ್ತು  ಕೊರೊನಾವೈರಸ್ (Coronavirus)  ಕೋವಿಡ್ -19 (Covid-19) ಗೆ ಸಂಬಂಧಿಸಿದ ವೈದ್ಯಕೀಯ ಪೂರೈಕೆದಾರ ಎಂದು ಸ್ವತಃ ವಿವರಿಸುತ್ತಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.

ಅಂತಹ ಸ್ಯಾನಿಟೈಜರ್ ಬಳಕೆ ತುಂಬಾ ಅಪಾಯಕಾರಿ:
ಮೆಥನಾಲ್ ಬಳಸಿ ನಕಲಿ ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ತಯಾರಿಸಲಾಗುತ್ತಿದೆ ಎಂದು ಜಾಗತಿಕ ಪೊಲೀಸ್ ಸಹಕಾರ ಸಂಸ್ಥೆ ಇಂಟರ್‌ಪೋಲ್ ತಿಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೆಥನಾಲ್ ಬಹಳ ವಿಷಕಾರಿ ವಸ್ತುವಾಗಿದೆ. ಕೋವಿಡ್ -19 ಸಮಯದಲ್ಲಿ ವಿಷಕಾರಿ ಹ್ಯಾಂಡ್ ಸ್ಯಾನಿಟೈಜರ್ (Hand Sanitizer) ಬಳಕೆಯ ಬಗ್ಗೆ ಇತರ ದೇಶಗಳಿಂದಲೂ ಮಾಹಿತಿ ಬಂದಿದೆ ಎಂದು ಅವರು ಹೇಳಿದರು. ಅಧಿಕಾರಿಯೊಬ್ಬರು ಮೆಥನಾಲ್ ತುಂಬಾ ವಿಷಕಾರಿಯಾಗಿದೆ ಮತ್ತು ಇದು ಮಾನವ ದೇಹಕ್ಕೆ ಅಪಾಯಕಾರಿ ಎಂದು ಸಾಬೀತುಪಡಿಸುತ್ತದೆ ಎಂದಿದ್ದಾರೆ.

ಇಂಟರ್‌ಪೋಲ್‌ನಿಂದ ಮಾಹಿತಿ ಪಡೆದ ನಂತರ ಕೇಂದ್ರೀಯ ತನಿಖಾ ದಳ (ಸಿಬಿಐ) ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ಈ ರೀತಿ ತಕ್ಷಣ ಹಣ ಸಂಪಾದನೆಯಲ್ಲಿ ತೊಡಗಿರುವ ಗ್ಯಾಂಗ್ ಬಗ್ಗೆ ಎಚ್ಚರಿಕೆ ವಹಿಸುವಂತೆ  ಸೂಚನೆ ನೀಡಿದ್ದಾರೆ. ಇಂಟರ್ಪೋಲ್ ತನ್ನ ಪ್ರಧಾನ ಕಛೇರಿ ಅದನ್ನು ನಿಗ್ರಹಿಸುವ ಕಾರ್ಯಾಚರನೆಯಲ್ಲಿದ್ದು ಭಾರತದಲ್ಲಿ ಅದರೊಂದಿಗೆ ಸಮನ್ವಯಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ.

ಜಗತ್ತು ಕರೋನಾ ವೈರಸ್ ಸಾಂಕ್ರಾಮಿಕದ ಹಿಡಿತಕ್ಕೆ ಬರುತ್ತಿದ್ದಂತೆ ಮತ್ತು ವಿಶ್ವದ ಆರ್ಥಿಕತೆಯು ಉಸಿರುಗಟ್ಟಿಸುತ್ತಿದ್ದಂತೆ ಅನೇಕ ಸಂಘಟಿತ ಅಪರಾಧ ಗುಂಪುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊರಹೊಮ್ಮಿವೆ. ಅಕ್ರಮ ಚಟುವಟಿಕೆಗಳಿಂದ ಮತ್ತು ಕೋವಿಡ್ -19 ಉಪಕರಣ ಕಂಪನಿಗಳ ಪ್ರತಿನಿಧಿಗಳಿಂದ ಹಣ ಸಂಪಾದಿಸಿವೆ ಎಂದು ಅವರು ಹೇಳಿದರು.

ಕೆಲವು ಅಪರಾಧಿಗಳು ಆಸ್ಪತ್ರೆಗಳು ಮತ್ತು ಆರೋಗ್ಯ ಅಧಿಕಾರಿಗಳನ್ನು ಪಿಪಿಇ ಕಿಟ್‌ಗಳು ಮತ್ತು ಕೋವಿಡ್ -19 ಗೆ ಸಂಬಂಧಿಸಿದ ಉಪಕರಣಗಳ ತಯಾರಕರ ಪ್ರತಿನಿಧಿಯಾಗಿ ಸಂಪರ್ಕಿಸುತ್ತಿದ್ದಾರೆ ಎಂದು ಏಜೆನ್ಸಿಯ ಮೂಲಗಳು ತಿಳಿಸಿವೆ. ಅಂತಹ ಸರಕುಗಳ ಕೊರತೆಯ ಲಾಭವನ್ನು ಪಡೆದುಕೊಂಡು ಅವರು ಅಧಿಕಾರಿಗಳು ಮತ್ತು ಆಸ್ಪತ್ರೆಗಳಿಂದ ಆನ್‌ಲೈನ್‌ನಲ್ಲಿ ಮುಂಗಡ ಹಣವನ್ನು ಪಡೆಯುತ್ತಾರೆ ಎಂದು ಆರೋಪಿಸಲಾಗಿದೆ.
 

Trending News