ಮೋದಿ ಸರ್ಕಾರದಲ್ಲಿ ಯಾರಿಗೆ ಯಾವ ಮಂತ್ರಿ ಪದವಿ? ಇಲ್ಲಿದೆ ಲಿಸ್ಟ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಂತ್ರಿಮಂಡಲದಲ್ಲಿ 24 ಕ್ಯಾಬಿನೆಟ್ ಮಂತ್ರಿಗಳು, 9 ರಾಜ್ಯ ಸಚಿವರು(ಸ್ವತಂತ್ರ ನಿರ್ವಹಣೆ) ಮತ್ತು 24 ರಾಜ್ಯ ಸಚಿವರು ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

Last Updated : May 31, 2019, 01:47 PM IST
ಮೋದಿ ಸರ್ಕಾರದಲ್ಲಿ ಯಾರಿಗೆ ಯಾವ ಮಂತ್ರಿ ಪದವಿ? ಇಲ್ಲಿದೆ ಲಿಸ್ಟ್ title=

ನವದೆಹಲಿ: ಸತತ ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಗುರುವಾರ ಸಂಜೆ 7 ಗಂಟೆಗೆ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಮೋದಿ ಮಂತ್ರಿ ಮಂಡಲದ 24 ಕ್ಯಾಬಿನೆಟ್ ಮಂತ್ರಿಗಳು, 9 ರಾಜ್ಯ ಸಚಿವರು(ಸ್ವತಂತ್ರ ನಿರ್ವಹಣೆ) ಮತ್ತು 24 ರಾಜ್ಯ ಸಚಿವರು ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

ಇದೀಗ ಮೋದಿ ತಮ್ಮ ಸಚಿವ ಸಂಪುಟದ ಸದಸ್ಯರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಅಮಿತ್ ಶಾ ಅವರಿಗೆ ಗೃಹಖಾತೆ, ನಿರ್ಮಲ ಸೀತಾರಾಮನ್ ಅವರಿಗೆ ಹಣಕಾಸು ಖಾತೆ ಹಾಗೂ ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆಯ ಜವಾಬ್ದಾರಿ ವಹಿಸಿದ್ದಾರೆ.

24 ಕ್ಯಾಬಿನೆಟ್ ಮಂತ್ರಿಗಳಲ್ಲಿ ಯಾರಿಗೆ ಯಾವ ಖಾತೆ ಎಂಬುದರ ಫುಲ್ ಲಿಸ್ಟ್ ಇಲ್ಲಿದೆ ನೋಡಿ:
1. ಅಮಿತ್ ಶಾ- ಗೃಹ ಖಾತೆ

2. ರಾಜನಾಥ್ ಸಿಂಗ್- ರಕ್ಷಣಾ ಖಾತೆ

3. ನಿತಿನ್ ಗಡ್ಕರಿ - ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮ ಖಾತೆ

4. ಡಿ.ವಿ. ಸದಾನಂದ ಗೌಡ - ರಾಸಾಯನಿಕ ಮತ್ತು ರಸಗೊಬ್ಬರ ಖಾತೆ

5. ನಿರ್ಮಲ ಸೀತಾರಾಮನ್ - ಹಣಕಾಸು ಖಾತೆ ಮತ್ತು ಕಾರ್ಪೊರೇಟ್ ವ್ಯವಹಾರ

6. ರಾಮ್ ವಿಲಾಸ್ ಪಾಸ್ವಾನ್ - ಗ್ರಾಹಕ ವ್ಯವಹಾರಗಳ ಸಚಿವ, ಆಹಾರ ಮತ್ತು ಸಾರ್ವಜನಿಕ ವಿತರಣೆ

7. ನರೇಂದ್ರ ಸಿಂಗ್ ತೋಮರ್ - ಕೃಷಿ ಮತ್ತು ರೈತ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ

8. ರವಿ ಶಂಕರ್ ಪ್ರಸಾದ್ - ಕಾನೂನು ಸಚಿವ, ಸಂಪರ್ಕ ಮತ್ತು ಸಚಿವ ಇಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ

9. ಹರ್ಸಿಮ್ರತ್ ಕೌರ್ ಬಾದಲ್ - ಆಹಾರ ಸಂಸ್ಕರಣಾ ಸಚಿವ

10. ತವಾರ್ ಚಂದ್ ಗೆಹ್ಲೋಟ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ

11. ಎಸ್. ಜಯಶಂಕರ್ - ವಿದೇಶಾಂಗ ಸಚಿವ

12. ರಮೇಶ್ ಪೊಖ್ರಿಯಾಲ್ 'ನಿಶಾಂಕ್' - ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ

13. ಅರ್ಜುನ್ ಮುಂಡಾ - ಬುಡಕಟ್ಟು ವ್ಯವಹಾರಗಳ ಸಚಿವ

14. ಸ್ಮೃತಿ ಇರಾನಿ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಜವಳಿ ಖಾತೆ

15. ಡಾ. ಹರ್ಷವರ್ಧನ್- ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ, ಆರೋಗ್ಯ ವಿಜ್ಞಾನ ಸಚಿವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

16. ಪ್ರಕಾಶ್ ಜಾವಡೇಕರ್- ಮಾಹಿತಿ ಮತ್ತು ಪ್ರಸಾರ ಸಚಿವ, ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆ

17. ಪಿಯೂಶ್ ಗೋಯಲ್ - ರೈಲ್ವೆ ಸಚಿವ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ

18. ಧರ್ಮೇಂದ್ರ ಪ್ರಧಾನ್ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಮತ್ತು ಉಕ್ಕು ಸಚಿವ

19. ಮುಖ್ತರ್ ಅಬ್ಬಾಸ್ ನಖ್ವಿ - ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ

20. ಪ್ರಹ್ಲಾದ್ ಜೋಶಿ - ಸಂಸದೀಯ ವ್ಯವಹಾರಗಳ ಸಚಿವ, ಕಲ್ಲಿದ್ದಲು ಸಚಿವ

21. ಮಹೇಂದ್ರ ನಾಥ್ ಪಾಂಡೆ - ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ

22. ಅರವಿಂದ ಸಾವಂತ್ - ಹೆವಿ ಇಂಡಸ್ಟ್ರೀಸ್ ಮತ್ತು ಪಬ್ಲಿಕ್ ಎಂಟರ್ಪ್ರೈಸಸ್ ಸಚಿವ

23. ಗಿರೀರಾಜ್ ಸಿಂಗ್ - ಪಶು ಸಂಗೋಪನೆ, ಡೈರಿ ಮತ್ತು ಮೀನುಗಾರಿಕೆ ಇಲಾಖೆ

24. ಗಜೇಂದ್ರ ಸಿಂಗ್ ಶೇಖಾವತ್ - ಜಲ ಸಂಪನ್ಮೂಲ 
 

Trending News