WATCH:ಸಿಂಹಿಣಿಗಳನ್ನೇ ಬೆದರಿಸಿ ಓಡಿಸಿ, ಜೀವ ಉಳಿಸಿಕೊಂಡ ಗೂಳಿ.. ವಿಡಿಯೋ ವೈರಲ್

Viral Video: ಗುಜರಾತ್ ಗ್ರಾಮದಲ್ಲಿ ಎರಡು ಸಿಂಹಿಣಿಗಳನ್ನು ಓಡಿಸಿದ ಗೂಳಿಯ ವಿಡಿಯೋ ವೈರಲ್ ಆಗಿದೆ.

Edited by - Zee Kannada News Desk | Last Updated : Dec 26, 2021, 09:54 AM IST
  • ಗುಜರಾತ್ ಗ್ರಾಮದಲ್ಲಿ ಎರಡು ಸಿಂಹಿಣಿಗಳನ್ನು ಓಡಿಸಿದ ಗೂಳಿ
  • ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ
  • ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆದ ವಿಡಿಯೋ
WATCH:ಸಿಂಹಿಣಿಗಳನ್ನೇ ಬೆದರಿಸಿ ಓಡಿಸಿ, ಜೀವ ಉಳಿಸಿಕೊಂಡ ಗೂಳಿ.. ವಿಡಿಯೋ ವೈರಲ್   title=
ವೈರಲ್ ವಿಡಿಯೋ

ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ನುಗ್ಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಪ್ರಾಣಿ-ಮನುಷ್ಯರ ನಡುವಿನ ಸಂಘರ್ಷ ಹೆಚ್ಚಾಗಿದೆ. ಕಾಡು ಪ್ರಾಣಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನವನ್ನು ಕಳೆದುಕೊಳ್ಳುತ್ತಿರುವುದು ಇದಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಇತ್ತೀಚೆಗಷ್ಟೇ ವಿಡಿಯೋ ಒಂದರಲ್ಲಿ ಎರಡು ಸಿಂಹಿಣಿಗಳನ್ನು ಗೂಳಿಯೊಂದು ಹಿಮ್ಮೆಟ್ಟಿಸಿದೆ.

ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯದಲ್ಲಿ ಬೀದಿಗಳಲ್ಲಿ ಎರಡು ಸಿಂಹಿಣಿಗಳು ಅಲೆದಾಡುತ್ತಿರುವುದು ಕಂಡುಬಂದಿದ್ದು, ಸಿಂಹಿಣಿಯರು ಸಾಗುತ್ತಿದ್ದಂತೆಯೇ ಅಲ್ಲೊಂದು ಕಡೆ ಇವುಗಳಿಗೆ ಮನೆಯ ಆಚೆ ಕಟ್ಟಿ ಹಾಕಿರುವ ಗೂಳಿ ಕಾಣಿಸುತ್ತದೆ.  ಗೂಳಿ ಕಂಡ ತಕ್ಷಣ ಅದರ ಮೇಲೆ ದಾಳಿ ಮಾಡಲು ಸಿಂಹಿಣಿಗಳು ಪ್ಲ್ಯಾನ್ ಮಾಡಿದ್ದವು. 

 

 
 
 
 

 
 
 
 
 
 
 
 
 
 
 

A post shared by Meme wala (@memewalanews)

 

ಆದರೆ, ಸಿಂಹಿಣಿಯರನ್ನು ಕಂಡ ತಕ್ಷಣ ಹೆದರದೆ ಧೈರ್ಯ ಪ್ರದರ್ಶಿಸಿದ ಗೂಳಿ ಕೊಂಬಿನಿಂದ ತಿವಿಯುವುದಕ್ಕೆ ಪ್ರಯತ್ನಿಸಿದೆ.  ಸಿಂಹಿಣಿಗಳು ಅನೇಕ ಬಾರಿ ದಾಳಿ ಮಾಡಲು ಪ್ರಯತ್ನಿಸಿದರೂ,  ಗೂಳಿಯು ತನ್ನ ಜಾಣ್ಮೆ ಮತ್ತು ಧೈರ್ಯದಿಂದ ಸಿಂಹಿಣಿಗಳನ್ನೂ ಹಿಮ್ಮೆಟ್ಟಿಸಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದೆ.

ಗುಜರಾತ್‌ನ ಜುನಾಗಡ್‌ನ ವಿಸ್ವದರ್ ತಾಲೂಕಿನ ಮೋಟಾ ಹದ್ಮತಿಯಾ ಗ್ರಾಮದಲ್ಲಿ ನಡೆದ ಘಟನೆ ಇದು ಎಂದು ಹೇಳಲಾಗುತ್ತಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.   

ಇದನ್ನೂ ಓದಿ: ಫ್ರಾನ್ಸ್, ಬ್ರಿಟನ್ ಹಿಂದಿಕ್ಕಿ ವಿಶ್ವದ 6 ನೇ ಅತಿದೊಡ್ಡ ಆರ್ಥಿಕತೆಯಾಗಿ ಸ್ಥಾನ ಪಡೆಯಲಿದೆ ಭಾರತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News