ರಾಜಸ್ಥಾನದಲ್ಲಿನ ದಲಿತ ವ್ಯಕ್ತಿ ಹತ್ಯೆ ವಿಚಾರದಲ್ಲಿ ಕಾಂಗ್ರೆಸ್ ಮೌನ ತಾಳಿರುವುದೇಕೆ?-ಮಾಯಾವತಿ

ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಭಾನುವಾರ ರಾಜಸ್ಥಾನದ ಹನುಮಾನ್‌ಗಡದಲ್ಲಿ ದಲಿತ ವ್ಯಕ್ತಿಯನ್ನು ಹೊಡೆದು ಸಾಯಿಸಿರುವ ವಿಚಾರದಲ್ಲಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಏಕೆ ಮೌನವಾಗಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಪ್ರಶ್ನಿಸಿದ್ದಾರೆ.ಇದೆ ವೇಳೆ ಅವರು ಲಖಿಂಪುರ್ ಖೇರಿಯ ಹಿಂಸಾಚಾರದ ಘಟನೆ ವಿಚಾರದಲ್ಲಿ  ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಕಾರ್ಯಶೈಲಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ.

Written by - Zee Kannada News Desk | Last Updated : Oct 10, 2021, 11:09 PM IST
  • ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಭಾನುವಾರ ರಾಜಸ್ಥಾನದ ಹನುಮಾನ್‌ಗಡದಲ್ಲಿ ದಲಿತ ವ್ಯಕ್ತಿಯನ್ನು ಹೊಡೆದು ಸಾಯಿಸಿರುವ ವಿಚಾರದಲ್ಲಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಏಕೆ ಮೌನವಾಗಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಪ್ರಶ್ನಿಸಿದ್ದಾರೆ.ಇದೆ ವೇಳೆ ಅವರು ಲಖಿಂಪುರ್ ಖೇರಿಯ ಹಿಂಸಾಚಾರದ ಘಟನೆ ವಿಚಾರದಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಕಾರ್ಯಶೈಲಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ.
ರಾಜಸ್ಥಾನದಲ್ಲಿನ ದಲಿತ ವ್ಯಕ್ತಿ ಹತ್ಯೆ ವಿಚಾರದಲ್ಲಿ ಕಾಂಗ್ರೆಸ್ ಮೌನ ತಾಳಿರುವುದೇಕೆ?-ಮಾಯಾವತಿ  title=
file photo

ನವದೆಹಲಿ: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಭಾನುವಾರ ರಾಜಸ್ಥಾನದ ಹನುಮಾನ್‌ಗಡದಲ್ಲಿ ದಲಿತ ವ್ಯಕ್ತಿಯನ್ನು ಹೊಡೆದು ಸಾಯಿಸಿರುವ ವಿಚಾರದಲ್ಲಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಏಕೆ ಮೌನವಾಗಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಪ್ರಶ್ನಿಸಿದ್ದಾರೆ.ಇದೆ ವೇಳೆ ಅವರು ಲಖಿಂಪುರ್ ಖೇರಿಯ ಹಿಂಸಾಚಾರದ ಘಟನೆ ವಿಚಾರದಲ್ಲಿ  ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಕಾರ್ಯಶೈಲಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ.

ಪಂಜಾಬ್ ಮತ್ತು ಛತ್ತೀಸ್‌ಗಡದ ಮುಖ್ಯಮಂತ್ರಿಗಳು ದಲಿತ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಲು ಹನುಮನ್‌ಗಡಕ್ಕೆ ಭೇಟಿ ನೀಡುತ್ತಾರೆಯೇ ಎಂದು ಮಾಯಾವತಿ ಟ್ವಿಟರ್‌ ನಲ್ಲಿ ಪ್ರಶ್ನಿಸಿದ್ದಾರೆ.'ರಾಜಸ್ಥಾನದ ಹನುಮಾನ್ ಗಡ್ ಜಿಲ್ಲೆಯಲ್ಲಿ ದಲಿತನೊಬ್ಬನನ್ನು ಹತ್ಯೆಗೈದ ಘಟನೆ ದುಃಖಕರ ಮತ್ತು ಖಂಡನೀಯ, ಆದರೆ ಕಾಂಗ್ರೆಸ್ ಹೈಕಮಾಂಡ್ ಏಕೆ ಮೌನವಾಗಿದೆ? ಚತ್ತೀಸ್ ಗಡ ಮತ್ತು ಪಂಜಾಬ್ ಮುಖ್ಯಮಂತ್ರಿಗಳು ಅಲ್ಲಿಗೆ ಹೋಗಿ ಸಂತ್ರಸ್ತರ ಕುಟುಂಬಕ್ಕೆ 50-50 ಲಕ್ಷ ರೂ ಪರಿಹಾರವನ್ನು ನೀಡುತ್ತಾರೆಯೇ? ಇಲ್ಲದಿದ್ದರೆ ಅವರು ದಲಿತರ ಹೆಸರಿನಲ್ಲಿ ಮೊಸಳೆ ಕಣ್ಣೀರು ಹಾಕುವುದನ್ನು ನಿಲ್ಲಿಸಬೇಕು "ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Lakhimpur Kheri violence: ಎರಡನೇ ಎಫ್‌ಐಆರ್‌ನಲ್ಲಿ ರೈತರ ಹತ್ಯೆ ಉಲ್ಲೇಖಿಸದ ಪೊಲೀಸರು

ಇದೇ ವೇಳೆ ಲಖಿಂಪುರ್ ಖೇರಿ ಘಟನೆಗೆ ಸಂಬಂಧಿಸಿದಂತೆ, ಮಾಯಾವತಿ ಅವರು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ರಾಜೀನಾಮೆಗೆ ಒತ್ತಾಯಿಸಿದರು, ಅವರ ಮಗ ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬ. "ಹಾಗೆಯೇ, ಕೇಂದ್ರ ಸಚಿವರ ಮಗನ ಹೆಸರು ಲಖಿಂಪುರ್ ಖೇರಿ ಪ್ರಕರಣ (Lakhimpur Kheri Violence) ದಲ್ಲಿನ ಮುಖ್ಯಾಂಶಗಳಲ್ಲಿ ಬರುತ್ತಿದ್ದು, ಬಿಜೆಪಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಬಿಜೆಪಿ ತನ್ನ ಸಚಿವರನ್ನು ರಾಜೀನಾಮೆ ನೀಡುವಂತೆ ಕೇಳಬೇಕು. ಆಗ ಮಾತ್ರ ಸಂಕಷ್ಟದಲ್ಲಿರುವ ರೈತರಿಗೆ ನ್ಯಾಯ ಸಿಗಬಹುದು ಎಂಬ ಭರವಸೆ ಇದೆ. ಇದು ಬಿಎಸ್‌ಪಿಯ ಬೇಡಿಕೆಯಾಗಿದೆ' ಎಂದು ಮಾಯಾವತಿ ಹೇಳಿದ್ದಾರೆ.

ಇದನ್ನೂ ಓದಿ: "ಲಡಾಖ್ ವಿವಾದದಿಂದಾಗಿ ಭಾರತ ಮತ್ತು ಚೀನಾ ನಡುವಿನ ಸಂಬಂಧಕ್ಕೆ ತೊಂದರೆಯಾಗಿದೆ"

ಲಖಿಂಪುರ್ ಖೇರಿ ಘಟನೆಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಶನಿವಾರ ರಾತ್ರಿ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ.

ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರ ಅಪರಾಧ ವಿಭಾಗದ 12 ಗಂಟೆಗಳ ವಿಚಾರಣೆಯ ನಂತರ ಆಶಿಶ್ ಮಿಶ್ರಾ ಅವರನ್ನು ಶನಿವಾರ ಬಂಧಿಸಲಾಗಿದೆ. ಆದಾಗ್ಯೂ, ಆಶಿಶ್ ಮಿಶ್ರಾ ಎಸ್‌ಕೆಎಂ ಆರೋಪಗಳನ್ನು ಅಲ್ಲಗಳೆದರು ಮತ್ತು ಘಟನೆ ನಡೆದ ಸ್ಥಳದಲ್ಲಿ ತಾನು ಇರಲಿಲ್ಲ ಎಂದು ಹೇಳಿದರು. ಅಕ್ಟೋಬರ್ 3 ರಂದು ನಡೆದ ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ನಾಲ್ಕು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News