Video:ವರ ಸಿಹಿ ತಿನ್ನಿಸಿದ ಎಂದು ಕೋಪ ನೆತ್ತಿಗೆರಿಸಿಕೊಂಡ ವಧು!ಮದುವೆ ಮಂಟಪದಲ್ಲಿನ ವಧುವಿನ ವರ್ತನೆ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ !

Funny Video : ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಆ ಮದುವೆ  ವಿಡಿಯೋ ಇಷ್ಟಿ ವೈರಲ್ ಆಗಿರುವುದಕ್ಕೆ ಕಾರಣ ವಧು.ಮದುವೆ ಮಂಟಪದಲ್ಲಿ ವಧು ನಡೆದುಕೊಂಡ ರೀತಿ. ಇಲ್ಲಿ ವಧು ನಡೆದುಕೊಂಡ ರೀತಿ ನಿಜಕ್ಕೂ ಬಹಳ ವಿಚಿತ್ರವಾಗಿದೆ.  

Written by - Ranjitha R K | Last Updated : May 1, 2024, 12:22 PM IST
  • ಇದೀಗ ಮದುವೆಯ ಸೀಸನ್ ನಡೆಯುತ್ತಿದೆ.
  • ಎಲ್ಲಿ ನೋಡಿದರೂ ಮದುವೆಯ ಸಂಭ್ರಮವೇ ಮನೆ ಮಾಡಿದೆ.
  • ಇಲ್ಲೊಂದು ವಿಡಿಯೋ ವೈರಲ್ ಆಗಿದೆ.
Video:ವರ ಸಿಹಿ ತಿನ್ನಿಸಿದ ಎಂದು ಕೋಪ ನೆತ್ತಿಗೆರಿಸಿಕೊಂಡ ವಧು!ಮದುವೆ ಮಂಟಪದಲ್ಲಿನ ವಧುವಿನ ವರ್ತನೆ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ ! title=

Funny Video : ಇದೀಗ ಮದುವೆಯ ಸೀಸನ್ ನಡೆಯುತ್ತಿದೆ.ಎಲ್ಲಿ ನೋಡಿದರೂ ಮದುವೆಯ ಸಂಭ್ರಮವೇ ಮನೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಸಮಾರಂಭವಿರಲಿ ಅದನ್ನು ವಿಶೇಷ ರೀತಿಯಲ್ಲಿ ಆಯೋಜಿಸಲಾಗಿರುತ್ತದೆ. ಪ್ರತಿ ಸಮಾರಂಭವೂ ಒಂದಲ್ಲ ಒಂದು ಥೀಮ್ ಪ್ರಕಾರವೇ ನಡೆಯುವುದು. ಅದರಲ್ಲಿಯೂ ಮದುವೆ ಎಂದರೆ ಅದರ ತಯಾರಿ ಸ್ವಲ್ಪ ಹೆಚ್ಚೇ ಇರುತ್ತದೆ. ವಧು ವರರ ಧಿರಿಸು, ಅವರ ಎಂಟ್ರಿ, ಮಂಟಪದ ಡೆಕರೆಶನ್ ಹೀಗೆ ಎಲ್ಲಾ ರೀತಿಯ ಸಿದ್ದತೆಗಳು ಮೊದಲೇ ನಡೆದಿರುತ್ತದೆ. ಹಾಗಾಗಿ ಮದುವೆ ಮನೆಗಳ ಕೆಲವು ವಿಡಿಯೋಗಳು ಭಾರೀ ಸದ್ದು ಕೂಡಾ ಮಾಡುತ್ತಿರುತ್ತದೆ.   

ಆದರೆ ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಆ ಮದುವೆ  ವಿಡಿಯೋ ಇಷ್ಟಿ ವೈರಲ್ ಆಗಿರುವುದಕ್ಕೆ ಕಾರಣ ವಧು.ಮದುವೆ ಮಂಟಪದಲ್ಲಿ ವಧು ನಡೆದುಕೊಂಡ ರೀತಿ. ಇಲ್ಲಿ ವಧು ನಡೆದುಕೊಂಡ ರೀತಿ ನಿಜಕ್ಕೂ ಬಹಳ ವಿಚಿತ್ರವಾಗಿದೆ. 

ಇದನ್ನೂ ಓದಿ : ಸಮುದ್ರದ ಮಧ್ಯೆ ತಮಿಳುನಾಡು ಮೀನುಗಾರರ ಮೇಲೆ ಶ್ರೀಲಂಕಾ ಕಡಲ್ಗಳ್ಳರ ದಾಳಿ

ಸಾಮಾನ್ಯವಾಗಿ  ಹೆಣ್ಣಾಗಲಿ ಗಂಡಾಗಲಿ ಅವರ ಗುಣ ಸ್ವಭಾವ ಏನೇ ಇರಲಿ. ಮದುವೆ ಮನೆಯಲ್ಲಿ ನಯ, ನಾಜೂಕು, ಗಾಂಭೀರ್ಯ ಇದ್ದೇ ಇರುತ್ತದೆ. ಆದರೆ  ಇಲ್ಲಿ ಅದ್ಯಾವುದೂ ಇಲ್ಲ. ಮದುವೆ ಮಂಟಪದಲ್ಲಿಯೇ ವಧು ಕಾಳಿ ರೂಪ ತಳೆದು ಬಿಟ್ಟಿದ್ದಾಳೆ. ಅದು ಕೂಡಾ ಕ್ಷುಲ್ಲಕ ಕಾರಣಕ್ಕೆ. ಈ ವೀಡಿಯೋ ನೋದೊದವರಿಗೆ ನಗು ತಡೆಯುವುದು ಕೂಡಾ ಸಾಧ್ಯವಾಗುವುದಿಲ್ಲ. 

ಇಷ್ಟಕ್ಕೂ ಅಲ್ಲಿ ನಡೆದಿದ್ದೇನು ?:
ಮದುವೆ ಸಮಾರಂಭದಲ್ಲಿ ವರ ವಧುವಿಗೆ ರಸಗುಲ್ಲಾ ತಿನ್ನಿಸಲು ಹೋಗಿದ್ದಾನೆ. ವಧು ಬೇಡ ಎನ್ನುತ್ತಾಳೆ, ಆದ್ರೆ ವರ ಬಲವಂತವಾಗಿ ರಸಗುಲ್ಲಾವನ್ನು ವಧುವಿನ ಬಾಯಿಗೆ ತುರುಕಿದ್ದಾನೆ. ಇದು ವಧುವಿಗೆ ಇಷ್ಟವಾಗುವುದಿಲ್ಲ. ಮದುವೆ ಮಂಟಪದಲ್ಲಿಯೇ ವರನಿಗೆ ಮನ ಬಂದಂತೆ ಹೊಡೆದು ಒದ್ದು ಕಿರುಚಾಡಿದ್ದಾಳೆ.  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

 

ಇದನ್ನೂ ಓದಿ : ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಬಳಿಕ ಮೊದಲ ಭೇಟಿ ನೀಡುತ್ತಿರುವ ರಾಷ್ಟ್ರಪತಿ ಮುರ್ಮು

ವೈರಲ್ ಆಗುತ್ತಿರುವ ಈ ವಿಡಿಯೋಗೆ ಪ್ರತಿಕ್ರಿಯೆ : 
ಈ ವಿಡಿಯೋ ನೋಡಿ ಜನ ನಗುತ್ತಿದ್ದರೆ ಮತ್ತೊಂದೆಡೆ ವಧುವಿನ ಈ ವರ್ತನೆಗೆ ಜನ ಛೀಮಾರಿ ಕೂಡಾ ಹಾಕುತ್ತಿದ್ದಾರೆ.ಈ ವೀಡಿಯೊವನ್ನು ಮೊದಲು X ನಲ್ಲಿ ಹಂಚಿಕೊಳ್ಳಲಾಗಿದೆ.ಇಲ್ಲಿಯವರೆಗೆ ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

 

Trending News