Arunachal Pradesh: ಗಡಿರೇಖೆಯಲ್ಲಿ ಸಂಘರ್ಷ; ಭಾರತ-ಚೀನಾ ಸೈನಿಕರಿಗೆ ಗಾಯ!

ಘಟನೆ ಹಿನ್ನೆಲೆ ತವಾಂಗ್‌ನ ಭಾರತದ ಸೇನಾ ಕಮಾಂಡರ್ ಚೀನಾದ ಸೇನಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಂಘರ್ಷ ನಡೆದ ಪ್ರದೇಶದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯವಿಧಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಹೇಳಲಾಗಿದೆ.

Written by - Puttaraj K Alur | Last Updated : Dec 12, 2022, 08:34 PM IST
  • ಅರುಣಾಚಲ ಪ್ರದೇಶದ ಗಡಿರೇಖೆ ಬಳಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ಕಾದಾಟ
  • ತವಾಂಗ್ ಸೆಕ್ಟರ್ ಬಳಿಯ ಯಾಂಗ್‌ಸ್ಟೆ ಪ್ರದೇಶದಲ್ಲಿ ಡಿಸೆಂಬರ್ 9ರಂದು ನಡೆದಿರುವ ಘಟನೆ
  • ಘಟನೆಯಲ್ಲಿ ಚೀನಾ ಮತ್ತು ಭಾರತದ ಹಲವಾರು ಸೈನಿಕರಿಗೆ ಸಣ್ಣಪುಟ್ಟ ಗಾಯ
Arunachal Pradesh: ಗಡಿರೇಖೆಯಲ್ಲಿ ಸಂಘರ್ಷ; ಭಾರತ-ಚೀನಾ ಸೈನಿಕರಿಗೆ ಗಾಯ! title=
ಭಾರತ-ಚೀನಾ ಸೈನಿಕರ ನಡುವೆ ಕಾದಾಟ!

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನ ವಾಸ್ತವ ಗಡಿ ರೇಖೆ(LAC)ಯ ಬಳಿ ಚೀನಾ ಸೈನಿಕರು ಮತ್ತು ಭಾರತೀಯ ಯೋಧರ ನಡುವೆ ಕಾದಾಟ ನಡೆದಿದೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.

ಡಿಸೆಂಬರ್ 9ರಂದೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ ತವಾಂಗ್ ಸೆಕ್ಟರ್ ಬಳಿಯ ಯಾಂಗ್‌ಸ್ಟೆ ಪ್ರದೇಶದಲ್ಲಿ ಚೀನಾದ ಸೈನಿಕರು ಭಾರತೀಯ ಸೈನಿಕರೊಂದಿಗೆ ಕಾದಾಟ ನಡೆಸಿದ್ದಾರೆ. ಪರಿಣಾಮ ಎರಡೂ ಕಡೆಯ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಿಗೆ ಎಂದು ವರದಿಯಾಗಿದೆ.

ಇದನ್ನೂ ಓದಿGujarat: ಗುಜರಾತ್‌ನಲ್ಲಿ ನೂತನ ಸರ್ಕಾರ ರಚನೆ, ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ

ಈ ಸಂಘರ್ಷದ ಬಳಿಕ ಕೂಡಲೇ ಭಾರತ ಮತ್ತು ಚೀನಾದ ಪೀಪಲ್‌ ಲಿಬರೇಷನ್‌ ಆರ್ಮಿಯ ಸೈನಿಕರೂ ಸ್ಥಳದಿಂದ ನಿರ್ಗಮಿಸಿದ್ದಾರೆ. ಘಟನೆ ಹಿನ್ನೆಲೆ ತವಾಂಗ್‌ನ ಭಾರತದ ಸೇನಾ ಕಮಾಂಡರ್ ಚೀನಾದ ಸೇನಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಂಘರ್ಷ ನಡೆದ ಪ್ರದೇಶದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯವಿಧಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಹೇಳಲಾಗಿದೆ.

ತವಾಂಗ್ ಸೆಕ್ಟರ್‌ನ ವಾಸ್ತವ ಗಡಿ ರೇಖೆಯುದ್ಧಕ್ಕೂ ಕೆಲವು ವಿವಾದಿತ ಪ್ರದೇಶಗಳಿವೆ. ಎರಡೂ ಕಡೆಯವರು ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳ ಅಂಚಿನವರೆಗೆ ಗಸ್ತು ತಿರುಗುತ್ತಿರುತ್ತಾರೆ. 2006ರಿಂದಲೂ ಇದೇ ರೀತಿ ನಡೆಯುತ್ತಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದೇ ಪ್ರದೇಶದಲ್ಲಿ ಭಾರತೀಯ ಪಡೆಗಳು ಚೀನಾ ಸೈನಿಕರನ್ನು ತಡೆದಿದ್ದವು. ಸುಮಾರು 200 ಚೀನೀ ಸೈನಿಕರನ್ನು ಅರುಣಾಚಲ ಪ್ರದೇಶದ ವಾಸ್ತವ ಗಡಿ ರೇಖೆ(LAC)ಯ ಸಮೀಪ ತಡೆಹಿಡಿಯಲಾಗಿತ್ತು.

ಇದನ್ನೂ ಓದಿ: RS 2000 Note: ‘3 ವರ್ಷಗಳ ಹಿಂದೆಯೇ 2 ಸಾವಿರ ರೂ. ನೋಟುಗಳ ಪ್ರಿಂಟಿಂಗ್ ಸ್ಥಗಿತ’!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News