BJP Master Stroke: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಸಂಜೆ 7.30ಕ್ಕೆ ಏಕನಾಥ್ ಸಿಂಧೆ ಪ್ರಮಾಣವಚನ ಸ್ವೀಕಾರ

Maharashtra New CM Eknath Shinde: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಐತಿಹಾಸಿಕ ಅಂತ್ಯ ಕಂಡಿದೆ. ಶಿವಸೇನಾ ಮುಖಂಡ ಏಕನಾಥ್ ಸಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಇಂದು ಸಂಜೆ 7.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕುರಿತು ಖುದ್ದು ಮಹಾರಾಷ್ಟ್ರದ ಬಿಜೆಪಿ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಘೋಷಣೆ ಮಾಡಿದ್ದಾರೆ.   

Written by - Nitin Tabib | Last Updated : Jun 30, 2022, 06:13 PM IST
  • ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನಲ್ಲಿ ಮಹತ್ವದ ತಿರುವು
  • ಏಕನಾಥ್ ಶಿಂಧೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ
  • ಸಂಜೆ 7.30ಕ್ಕೆ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದ ಫಡ್ನವಿಸ್
BJP Master Stroke: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಸಂಜೆ 7.30ಕ್ಕೆ ಏಕನಾಥ್ ಸಿಂಧೆ ಪ್ರಮಾಣವಚನ ಸ್ವೀಕಾರ title=
Maharashtra Political Crisis

Maharashtra CM Eknath Shinde: ನೆರೆ ರಾಜ್ಯ ಮಹಾರಾಷ್ಟ್ರದ ರಾಜಕೀಯದ ಬಗ್ಗೆ ಮಹತ್ವದ ಅಪ್ಡೇಟ್ ವೊಂದು ಪ್ರಕಟವಾಗಿದೆ. ಕಳೆದ ಹಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಮುಂದುವರೆದಿದ್ದ ಬಿಕ್ಕಟ್ಟು ಐತಿಹಾಸಿಕ ಅಂತ್ಯ ಕಂಡಿದೆ. ಹೌದು, ಇಂದು ಸಂಜೆ 7.30ಕ್ಕೆ ಶಿವಸೇನಾ ಮುಖಂಡ ಏಕನಾಥ್ ಸಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕುರಿತು ಖುದ್ದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ಘೋಷಣೆ ಮಾಡಿದ್ದಾರೆ. 
ಬೆಜೆಪಿ ಬೆಂಬಲದೊಂದಿಗೆ ಸರ್ಕಾರ ರಚೆನೆಗೆ ಮುಂದಾದ ಬಂಡಾಯ ಮುಖಂಡರು
ಈ ಕುರಿತು ನಡೆದ ಸುದ್ದಿಗೋಷ್ಠಿ ಮಾತನಾಡಿರುವ ದೇವೇಂದ್ರ ಫಡ್ನವಿಸ್, ಶಿಂಧೆ ಗುಂಪಿಗೆ ತಾವು ತಮ್ಮೆಲ್ಲಾ ಶಾಷಕರ ವತಿಯಿಂದ ಬೆಂಬಲ ನೀಡುವ ಪತ್ರವನ್ನು ರಾಜ್ಯಪಾಲರಿಗೆ ನೀಡಿರುವುದಾಗಿ ಹೇಳಿದ್ದಾರೆ. ಇದರರ್ಥ ಏಕನಾಥ್ ಶಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಜ್ಯ ಬಿಜೆಪಿ ಅವರಿಗೆ ತನ್ನ ಬೆಂಬಲ ಸೂಚಿಸಿದೆ. 

ಇಂದೇ ನಡೆಯಲಿದೆ ನೂತನ ಮುಖ್ಯಮಂತ್ರಿಯ ಶಪಥ ಗ್ರಹಣ ಸಮಾರಂಭ
ಇಂದು ಸಂಜೆ 7.30ಕ್ಕೆ  ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಏಕನಾಥ್ ಸಿಂಧೆ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಮತ್ತು ಬಿಜೆಪಿ ಅವರನ್ನು ಬೆಂಬಲಿಸಲಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಶಿಂಧೆ ಬಣ-ಹಾಗೂ ಬಿಜೆಪಿ ಶಾಸಕರ ಬೆಂಬಲ ಇರುವ ಪತ್ರವನ್ನು ತಾವು ರಾಜ್ಯಪಾಲರಿಗೆ ನೀಡಿರುವುದಾಗಿ ಫಡ್ನವಿಸ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಏಕನಾಥ್ ಶಿಂಧೆ ಅವರಿಗೆ ಫಡ್ನವಿಸ್ ಅಭಿನಂದಿಸಿದ್ದಾರೆ. 

ಇದನ್ನೂ ಓದಿ-ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಉದ್ಧವ್ ಠಾಕ್ರೆ

ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ ಏಕನಾಥ್ ಶಿಂಧೆ
ಈ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಏಕನಾಥ್ ಶಿಂಧೆ, ಹಿಂದೂ ಹೃದಯ ಸಾಮ್ರಾಟ ಬಾಳಾಸಾಹೇಬ್ ಠಾಕ್ರೆ ಹಾಗೂ ಅವರ ಹಿಂದುತ್ವದ ವಿಚಾರಧಾರೆಯ ಮೇಲೆ ಮುಂದುವರೆಯುವ ಉದ್ದೇಶದಿಂದ ತಾವು ಮಹಾ ವಿಕಾಸ್ ಅಘಾಡಿ ಸರ್ಕಾರದಿಂದ ಹೊರಬರಲು ನಿರ್ಧಾರ ಕೈಗೊಂಡಿರುವುದಾಗಿ ಪುನರುಚ್ಚರಿಸಿದ್ದಾರೆ. ಇನ್ನು ಮುಂದೆ ಮಹಾರಾಷ್ಟ್ರದ ಹಾಗೂ ತಮ್ಮ ತಮ್ಮ ಕ್ಷೇತ್ರಗಳ ಅಭ್ವ್ರುದ್ಧಿಗಾಗಿ ಕೆಲಸ ಮಾಡಲಾಗುವುದು ಎಂದು ಶಿಂಧೆ ಹೇಳಿದ್ದಾರೆ. ಇನ್ನೊಂದೆಡೆ, ಯಾವುದೇ ಸ್ಥಾನ-ಮಾನದ ಅಪೇಕ್ಷೆ ಇಲ್ಲದೆ ಕೇವಲ ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ಮುಂದುವರೆಸುವ ಉದ್ದೇಶದಿಂದ ಅಘಾಡಿ ಸರ್ಕಾರದಿಂದ ಹೊರಬಂದ ತಮ್ಮನ್ನು ಮುಖ್ಯಮಂತ್ರಿ ಸ್ಥಾನ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ದಾ ಹಾಗೂ ದೇವೇಂದ್ರ ಫಡ್ನವಿಸ್ ಅವರಿಗೆ ಶಿಂಧೆ ಧನ್ಯವಾದ ಅರ್ಪಿಸಿದ್ದಾರೆ. ಸಂಖ್ಯಾಬಲದ ಆಧಾರದ ಮೇಲೆ ಫಡ್ನವಿಸ್ ಅವರು ಮುಖ್ಯಮಂತ್ರಿ ಸ್ಥಾನವನ್ನು ತಮ್ಮ ಬಳಿಯೇ ಇಟ್ಟುಕೊಳ್ಳಬಹುದಿತ್ತು, ಆದರೆ, ಅವರು ಆ ರೀತಿ ಮಾಡದೆ ಮಹಾರಾಷ್ಟ್ರದ ಅಭಿವೃದ್ಧಿಗಾಗಿ ತಮ್ಮನ್ನು ಬೆಂಬಲಿಸಿದ್ದಾರೆ ಎಂದು ಶಿಂಧೆ ಹೇಳಿದ್ದಾರೆ. 

ಇದನ್ನೂ ಓದಿ-Maharashtra Political Crisis : ಮಹಾ ನೂತನ ಸಿಎಂ ಆಗಿ ಫಡ್ನವಿಸ್, ಉಪಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ!

ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದ ಫಡ್ನವಿಸ್
ರಾಜ್ಯಪಾಲರ ಭೇಟಿ ಬಳಿಕ ನಡೆಸಲಾಗಿರುವ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಂದ್ರ ಫಡ್ನವಿಸ್ ಉದ್ಧವ್ ಠಾಕ್ರೆ  ನೇತೃತ್ವದ ಮಹಾ ಅಘಾಡಿ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ಹಲವು ಚಾಲ್ತಿ ಯೋಜನೆಗಳನ್ನು ನಿಲ್ಲಿಸಲಾಯಿತು ಮತ್ತು ರಾಜ್ಯದ ಅಭಿವೃದ್ಧಿಯ ಕೆಲಸಗಳು ನಿಂತುಹೋಗಿದ್ದವು ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News