ಯುವಕನ ಕೊಲೆ ಶಂಕೆ; ಮಹಿಳೆಯನ್ನು ನಗ್ನಗೊಳಿಸಿ ಮೆರವಣಿಗೆ

ಉದ್ರಿಕ್ತರ ಗುಂಪೊಂದು ಮಹಿಳೆಯನ್ನು ಥಳಿಸಿ, ನಗ್ನಗೊಳಿಸಿ ಮೆರವಣಿಗೆ ಮಾಡಿದ ಧಾರುಣ ಘಟನೆ ಬಿಹಾರದ ಬಿಹಿಯಾ ಎಂಬಲ್ಲಿ ಸೋಮವಾರ ನಡೆದಿದೆ. 

Last Updated : Aug 21, 2018, 03:25 PM IST
ಯುವಕನ ಕೊಲೆ ಶಂಕೆ; ಮಹಿಳೆಯನ್ನು ನಗ್ನಗೊಳಿಸಿ ಮೆರವಣಿಗೆ title=

ಭೋಜ್‌ಪುರ್‌: ಯುವಕನೋರ್ವನನ್ನು ಕೊಲೆ ಮಾಡಿರುವ ಶಂಕೆಯ ಹಿನ್ನೆಲೆಯಲ್ಲಿ ಉದ್ರಿಕ್ತರ ಗುಂಪೊಂದು ಮಹಿಳೆಯನ್ನು ಥಳಿಸಿ, ನಗ್ನಗೊಳಿಸಿ ಮೆರವಣಿಗೆ ಮಾಡಿದ ಧಾರುಣ ಘಟನೆ ಬಿಹಾರದ ಬಿಹಿಯಾ ಎಂಬಲ್ಲಿ ಸೋಮವಾರ ನಡೆದಿದೆ. 

ಬಿಹಿಯಾ ಪ್ರದೇಶದ ರೈಲ್ವೆ ನಿಲ್ದಾಣದ ಬಳಿ ಲೈಂಗಿಕ ಕಾರ್ಯಕರ್ತೆಯರು ಹೆಚ್ಚಾಗಿದ್ದು, 19 ವರ್ಷದ ಯುವಕನೊಬ್ಬ ಆ ಸ್ಥಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇದರಿಂದ ಉದ್ರಿಕ್ತಗೊಂಡ ಜನರ ಗುಂಪೊಂದು ಅಲ್ಲಿ ಸುತ್ತಮುತ್ತಲಿನ ಅಂಗಡಿಗಳಿಗೆ ಬೆಂಕಿಯಿಟ್ಟು ದಾಂಧಲೆ ನಡೆಸಿದ್ದಾರೆ. ಅಲ್ಲದೆ,  ಭಾನುವಾರ ರಾತ್ರಿ ಆತ, ಈ ಮಹಿಳೆಯೊಂದಿಗೆ ಇದ್ದುದನ್ನು ಕಂಡಿದ್ದ ಕೆಲವರು, ಆತನ ಸಾವಿಗೆ ಮಹಿಳೆಯೇ ಕಾರಣ ಎಂದು ಶಂಕಿಸಿ, ಆಕೆಯನ್ನು ಸಾರ್ವಜನಿಕವಾಗಿ ಥಳಿಸಿದ್ದಲ್ಲದೆ, ಆಕೆಯನ್ನು ನಗ್ನಗೊಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ. ಇದರಿಂದ ಬಿಹಿಯಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಬಿಗೆ ಪೋಲಿಸ್ ಭದ್ರತೆ ಒದಗಿಸಲಾಗಿದೆ. 

ಈ ಘಟನೆ ಸಂಬಂಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಹಿಂಸಾಚಾರ ಮಿತಿಮೀರುವವರೆಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ 8 ಪೋಲಿಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

Trending News