ಹಿಂಸಾಚಾರಕ್ಕೆ ತಿರುಗಿದ ಭಾರತ್ ಬಂದ್; 6 ಮಂದಿ ಸಾವು

ಎಸ್ ಸಿ/ಎಸ್ ಟಿ ಕಾಯ್ದೆಯ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ನಡೆಸುತ್ತಿದ್ದ ಭಾರತ್ ಬಂದ್ ಹಿಂಸಾಚಾರಕ್ಕೆ ತಿರುಗಿದ್ದು, ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ. 

Last Updated : Apr 2, 2018, 07:30 PM IST
ಹಿಂಸಾಚಾರಕ್ಕೆ ತಿರುಗಿದ ಭಾರತ್ ಬಂದ್; 6 ಮಂದಿ ಸಾವು title=

ನವದೆಹಲಿ : ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಎಸ್ ಸಿ/ಎಸ್ ಟಿ ಕಾಯ್ದೆಯ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ನಡೆಸುತ್ತಿದ್ದ ಭಾರತ್ ಬಂದ್ ಹಿಂಸಾಚಾರಕ್ಕೆ ತಿರುಗಿದ್ದು, ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಮಧ್ಯಪ್ರದೇಶಲ್ಲಿ ನಾಲ್ವರು, ಉತ್ತರಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ವರದಿಯಾಗಿದೆ. 

ಸುಪ್ರೀಂ ಕೋರ್ಟ್ 2018 ರ ಮಾರ್ಚ್ 20 ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ನಿಷೇಧವನ್ನು ತಡೆಗಟ್ಟುವಿಕೆ) ಕಾಯಿದೆಯ ಕೆಲವು ಅಂಶಗಳಿಗೆ ನಿಬಂಧನೆ ಹೇರಿ, ತಿದ್ದುಪಡಿಯನ್ನು ಹಿಂಪಡೆಯುವಂತೆ  ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು. ಇದರಲ್ಲಿ "ಪ್ರಾಮಾಣಿಕ" ಸರ್ಕಾರಿ ಕೆಲಸಗಾರರ ವಿರುದ್ಧ ಸುಳ್ಳು ಮೊಕದ್ದಮೆ ಹೂಡಿ ಬ್ಲಾಕ್ ಮೇಲ್ ಮಾಡುವವರಿಂದ ರಕ್ಷಿಸುವ ಪ್ರಯತ್ನದಲ್ಲಿ ಈ ಕಾಯ್ದೆಯನ್ನು ರಚಿಸಲಾಗಿತ್ತು. 

ಸುಪ್ರೀಂ ಕೋರ್ಟ್'ನ ತೀರ್ಪುನ್ನು ದಲಿತರು ಮಾತ್ತು ವಿರೋಧ ಪಕ್ಷಗಳು ವ್ಯಾಪಕವಾಗಿ ಟೀಕಿಸಿದ್ದವು. ಅಲ್ಲದೆ, ಈ ಕಾಯಿದೆಯ ತಿದ್ದುಪಡಿಯಿಂದ ಹಿಂದುಳಿದ ವರ್ಗಗಳ ವಿರುದ್ಧ ಮತ್ತಷ್ಟು ತಾರತಮ್ಯಕ್ಕೆ ಮತ್ತು  ಅಪರಾಧಗಳಿಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಂಜಾಬ್ ನಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆಯನ್ನು ನಿಯೋಜಿಸಿದೆ. ಅಲ್ಲದೇ ಕೆಲವು ರಾಜ್ಯಗಳಲ್ಲಿ ರೈಲು ಸೇರಿದಂತೆ ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಕೆಲವು ರಾಜ್ಯಗಳು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದ್ದು, ಸಂವಹನ ಮತ್ತು ಸಾರಿಗೆ ಸೇವೆಗಳನ್ನು ಮೊಟಕುಗೊಳಿಸಲಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ್ ಮತ್ತು ಪಂಜಾಬ್ ರಾಜ್ಯಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. 

ಮಧ್ಯಪ್ರದೇಶದ ಮೊರೆನಾ, ಗ್ವಾಲಿಯರ್ ಮತ್ತು ಭಿಂಡ್ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 

ಮೊರೆನಾದಲ್ಲಿ, ರಾಹುಲ್ ಪಾಠಕ್ ಎಂಬವರು ಅವರ ಮನೆಯ ಬಾಲ್ಕನಿಯಲ್ಲಿ ನಿಂತಿರುವಾಗ ಪ್ರತಿಭಟನಾಕಾರರು ಮತ್ತು ಪೋಲೀಸರ ನಡುವೆ ಗಲಭೆ ಉಂಟಾಗಿ, ಪೊಲೀಸರು ಹಾರಿಸಿದ ಗುಂಡು ಅಚಾನಕ್ ಆಗಿ ರಾಹುಲ್ ವರಿಗೆ ತಗುಲಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ.

ಭಿಂಡ್ ಮೂಲದ ಮಹಾವೀರ್ ರಾಜವತ್ ಎಂಬುವರು ಗಲಭೆ ಸಮಯದಲ್ಲಿ ಗುಂಡು ತಗುಲಿ ಸಾವನ್ನಪ್ಪಿದ್ದಾರೆ. ಗ್ವಾಲಿಯರ್ನಲ್ಲಿನ ಮತ್ತು ಉತ್ತರಪ್ರದೇಶದ ಮುಜಾಫರ್ನಗರ ಮತ್ತು ರಾಜಸ್ತಾನದ ಅಲ್ವಾರ್ನಲ್ಲಿ ತಲಾ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

Trending News