Benefit of Banana : ಈ ಸಮಯದಲ್ಲಿ ಪ್ರತಿನಿತ್ಯ ಕೇವಲ 1 ಬಾಳೆಹಣ್ಣು ಸೇವಿಸಿ, ನೀವು ಅದ್ಭುತ ಪ್ರಯೋಜನಗಳನ್ನು ಪಡೆಯುತ್ತೀರಿ

ನೀವು ದೈಹಿಕ ದೌರ್ಬಲ್ಯದಿಂದ ಬಳಲುತ್ತಿದ್ದರೆ, ನಿಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಸೇರಿಸಿ ಸೇವಿಸಿ, ಅದು ನಿಮ್ಮ ಆರೋಗ್ಯಕ್ಕೆ  ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ.

Written by - Channabasava A Kashinakunti | Last Updated : Oct 7, 2021, 09:40 PM IST
  • ಬಾಳೆಹಣ್ಣು ಅತ್ಯಂತ ಶಕ್ತಿ ನೀಡುವ ಹಣ್ಣು
  • ನಿಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಸೇರಿಸಿ ಸೇವಿಸಿ
  • ಬಾಳೆಹಣ್ಣಿನಲ್ಲಿ ಟ್ರಿಪ್ಟೊಫಾನ್ ಎಂಬ ಅಂಶ ಕಂಡುಬರುತ್ತದೆ
Benefit of Banana : ಈ ಸಮಯದಲ್ಲಿ ಪ್ರತಿನಿತ್ಯ ಕೇವಲ 1 ಬಾಳೆಹಣ್ಣು ಸೇವಿಸಿ, ನೀವು ಅದ್ಭುತ ಪ್ರಯೋಜನಗಳನ್ನು ಪಡೆಯುತ್ತೀರಿ title=

ಬಾಳೆಹಣ್ಣು ಅತ್ಯಂತ ಶಕ್ತಿ ನೀಡುವ ಹಣ್ಣು. ಬಾಳೆಹಣ್ಣಿನಲ್ಲಿರುವ ಜೀವಸತ್ವಗಳು, ಪ್ರೋಟೀನ್ ಮತ್ತು ಇತರ ಪೋಷಕಾಂಶಗಳು ಆರೋಗ್ಯಕರ ದೇಹಕ್ಕೆ ಬಹಳ ಮುಖ್ಯವಾಗಿವೆ. ನೀವು ದೈಹಿಕ ದೌರ್ಬಲ್ಯದಿಂದ ಬಳಲುತ್ತಿದ್ದರೆ, ನಿಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಸೇರಿಸಿ ಸೇವಿಸಿ, ಅದು ನಿಮ್ಮ ಆರೋಗ್ಯಕ್ಕೆ  ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ.

ಬಾಳೆಹಣ್ಣಿನಲ್ಲಿ ಕಂಡುಬರುವ ಪೋಷಕಾಂಶಗಳು

ಬಾಳೆಹಣ್ಣಿ(Banana)ನಲ್ಲಿ ಕಂಡುಬರುವ ಪೋಷಕಾಂಶಗಳನ್ನು ನೋಡಿದರೆ, ಇದರಲ್ಲಿ ವಿಟಮಿನ್-ಎ, ವಿಟಮಿನ್-ಬಿ ಮತ್ತು ಮೆಗ್ನೀಸಿಯಮ್, ವಿಟಮಿನ್-ಸಿ, ಪೊಟ್ಯಾಸಿಯಮ್ ಮತ್ತು ವಿಟಮಿನ್-ಬಿ 6, ಥಯಾಮಿನ್, ರಿಬೋಫ್ಲಾವಿನ್ ಇರುತ್ತದೆ. ಬಾಳೆಹಣ್ಣಿನಲ್ಲಿ ಶೇ.64.3  ನೀರು, ಶೇ.3 ರಷ್ಟು ಪ್ರೋಟೀನ್, ಶೇ. 24.7 ರಷ್ಟು ಕಾರ್ಬೋಹೈಡ್ರೇಟ್ ಇದೆ. ಈ ಎಲ್ಲಾ ಅಂಶಗಳು ಆರೋಗ್ಯಕರ ದೇಹಕ್ಕೆ ಅವಶ್ಯಕವಾಗಿದೆ.

ಇದನ್ನೂ ಓದಿ : ಈ ಹೊತ್ತಿನೊಳಗೆ ಮುಗಿಸಿಕೊಳ್ಳಿ ಬೆಳಗಿನ ಉಪಹಾರ, ಇಲ್ಲವಾದರೆ ಶುಗರ್ ಸಮಸ್ಯೆ ತಪ್ಪಿದ್ದಲ್ಲ

ದೇಹಕ್ಕೆ ಬಾಳೆಹಣ್ಣು ಹಲವು ಪ್ರಯೋಜನ ನೀಡುತ್ತದೆ

ಆಹಾರ ತಜ್ಞೆ ಡಾ.ರಂಜನಾ ಸಿಂಗ್ ಪ್ರಕಾರ, ಪೊಟ್ಯಾಸಿಯಮ್ ಬಾಳೆಹಣ್ಣಿನಲ್ಲಿ(Benefit of Banana) ಕಂಡುಬರುತ್ತದೆ, ಇದು ನಮ್ಮ ಸ್ನಾಯುಗಳಲ್ಲಿ ಸೆಳೆತವನ್ನು ಉಂಟುಮಾಡುವುದಿಲ್ಲ. ಕಾರ್ಬೋಹೈಡ್ರೇಟ್ ಬಾಳೆಹಣ್ಣಿನಲ್ಲಿ ಕಂಡುಬರುತ್ತದೆ, ಇದು ನಮ್ಮ ದೇಹವನ್ನು ಶಕ್ತಿಯುತವಾಗಿರಿಸುತ್ತದೆ ಮತ್ತು ನಿಮಗೆ  ಕಡಿಮೆ ಆಯಾಸವನ್ನು ಅನುಭವಿಸುತ್ತೇವೆ. ನೀವು ಬೆಳಿಗ್ಗೆ ವ್ಯಾಯಾಮ ಮಾಡುವ ಮೊದಲು ಎರಡು ಬಾಳೆಹಣ್ಣುಗಳನ್ನು ತಿಂದರೆ, ವ್ಯಾಯಾಮದ ಸಮಯದಲ್ಲಿ ನಿಮಗೆ ಹೆಚ್ಚು ಆಯಾಸವಾಗುವುದಿಲ್ಲ.

ಪ್ರತಿನಿತ್ಯ ಒಂದು ಬಾಳೆಹಣ್ಣು ತಿನ್ನುವುದರಿಂದಾಗುವ ಲಾಭಗಳು

1. ದುರ್ಬಲತೆ ಬರುವುದಿಲ್ಲ

ಬಾಳೆಹಣ್ಣಿನಲ್ಲಿ ಬಹಳಷ್ಟು ಕಾರ್ಬೋಹೈಡ್ರೇಟ್‌ಗಳಿವೆ. ಇದನ್ನು ತಿನ್ನುವುದರಿಂದ ಹೊಟ್ಟೆ ಬೇಗನೆ ತುಂಬುತ್ತದೆ. ಬೆಳಿಗ್ಗೆ ಆಫೀಸ್ ಅಥವಾ ಕಾಲೇಜಿಗೆ ಹೋಗುವುದರಿಂದ ಬೆಳಗಿನ ಉಪಾಹಾರ ತಪ್ಪಿದರೆ, ಆಗ ನೀವು ಬಾಳೆಹಣ್ಣು ಸೇವಿಸ ಹೋಗಿ, ಏಕೆಂದರೆ ಬಾಳೆಹಣ್ಣು ತಿನ್ನುವುದರಿಂದ ತ್ವರಿತ ಶಕ್ತಿ(Stamina) ಸಿಗುತ್ತದೆ. ಇದು ನಿಮಗೆ ಇಡೀ ದಿನ ಶಕ್ತಿಯನ್ನು ನೀಡುತ್ತದೆ.

2. ಒತ್ತಡ ದೂರವಾಗುತ್ತದೆ

ಬಾಳೆಹಣ್ಣಿನಲ್ಲಿ ಟ್ರಿಪ್ಟೊಫಾನ್ ಎಂಬ ಅಂಶ ಕಂಡುಬರುತ್ತದೆ. ಈ ಟ್ರಿಪ್ಟೊಫಾನ್ ನಿಂದಾಗಿ ನಮ್ಮ ದೇಹದಲ್ಲಿ ಸಿರೊಟೋನಿನ್ ಉತ್ಪತ್ತಿಯಾಗುತ್ತದೆ. ಸಿರೊಟೋನಿನ್ ಅನ್ನು ಸಂತೋಷದ ಹಾರ್ಮೋನ್ ಎಂದೂ ಕರೆಯುತ್ತಾರೆ. ಇದು ಒತ್ತಡವನ್ನು ದೂರವಿರಿಸುತ್ತದೆ.

3. ಜೀರ್ಣಕ್ರಿಯೆ ಚೆನ್ನಾಗಿರುತ್ತದೆ

ಬಾಳೆಹಣ್ಣು ಸೇವನೆಯಿಂದ ಜೀರ್ಣಕಾರಿ ಸಮಸ್ಯೆಗಳು ದೂರವಾಗುತ್ತವೆ. ಆರೋಗ್ಯ ತಜ್ಞರ ಪ್ರಕಾರ, ಬಾಳೆಹಣ್ಣಿನಲ್ಲಿರುವ ಪಿಷ್ಟವು ನಮ್ಮ ಜೀರ್ಣಾಂಗ ವ್ಯವಸ್ಥೆಗೆ(Digestion) ಮುಖ್ಯವಾದ ಉತ್ತಮ ಬ್ಯಾಕ್ಟೀರಿಯಾಗಳಿಗೆ ಪ್ರಯೋಜನಕಾರಿ. ಬಾಳೆಹಣ್ಣುಗಳು ಕೂಡ ಆಸಿಡ್ ವಿರೋಧಿ, ಆದ್ದರಿಂದ ನಿಮಗೆ ಎದೆಯುರಿ ಸಮಸ್ಯೆ ಇದ್ದರೆ, ಬಾಳೆಹಣ್ಣನ್ನು ಸೇವಿಸುವುದರಿಂದ ನಿಮಗೆ ಪ್ರಯೋಜನವಾಗುತ್ತದೆ.

ಇದನ್ನೂ ಓದಿ : Raw Papaya Paratha: ಆರೋಗ್ಯಕ್ಕೆ ಸಂಜೀವಿನಿಯಂತೆ ಕೆಲಸ ಮಾಡುತ್ತೆ ಪರಂಗಿ ಕಾಯಿ ಪರಾಠ

4. ತೂಕ ನಿಯಂತ್ರಣದಲ್ಲಿರುತ್ತದೆ 

ಬಾಳೆಹಣ್ಣಿನಲ್ಲಿ ಬಹಳಷ್ಟು ಫೈಬರ್ ಇರುತ್ತದೆ. ಇದರ ಜೊತೆಯಲ್ಲಿ, ಬಾಳೆಹಣ್ಣಿನಲ್ಲಿ ಪಿಷ್ಟ ಕೂಡ ಕಂಡುಬರುತ್ತದೆ. ಒಬ್ಬ ವ್ಯಕ್ತಿಯು ಬೆಳಗಿನ ಉಪಾಹಾರ(Breakfast)ಕ್ಕಾಗಿ ಬಾಳೆಹಣ್ಣನ್ನು ತಿಂದರೆ, ನಿಮಗೆ ದೀರ್ಘಕಾಲದವರೆಗೆ ಹಸಿವಿನ ಅನುಭವವಾಗುವುದಿಲ್ಲ. ಈ ರೀತಿಯಾಗಿ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News