Jawad Alert : ಜವಾದ್ ಚಂಡಮಾರುತದ ಭೀತಿ, 107 ರೈಲುಗಳು ರದ್ದು, ಒಡಿಶಾದಲ್ಲಿ ಶಾಲೆಗಳಿಗೂ ರಜೆ

ದೇಶದ ಪೂರ್ವ ಕರಾವಳಿಯಲ್ಲಿ ಮತ್ತೆ ಚಂಡಮಾರುತದ ಅಪಾಯ ಎದುರಾಗಿದೆ. ಜವಾದ್ ಚಂಡಮಾರುತವು  ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ಮತ್ತು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಬಳಿ ತಲುಪುವ ನಿರೀಕ್ಷೆಯಿದೆ.

Written by - Ranjitha R K | Last Updated : Dec 4, 2021, 08:17 AM IST
  • ಒಡಿಶಾದಲ್ಲಿ 19 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ
  • ಮುನ್ನೆಚ್ಚರಿಕೆ ಕ್ರಮವಾಗಿ NDRF ತಂಡಗಳ ನಿಯೋಜನೆ
  • ಭಾರೀ ಮಳೆಯ ಎಚ್ಚರಿಕೆ
Jawad Alert : ಜವಾದ್ ಚಂಡಮಾರುತದ ಭೀತಿ, 107 ರೈಲುಗಳು ರದ್ದು, ಒಡಿಶಾದಲ್ಲಿ ಶಾಲೆಗಳಿಗೂ ರಜೆ   title=
ಒಡಿಶಾದಲ್ಲಿ 19 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ (file photo)

ನವದೆಹಲಿ : ಜವಾದ್ ಚಂಡಮಾರುತವು (Cyclone Jawad) ದೇಶದ ಪೂರ್ವ ಕರಾವಳಿಯತ್ತ ವೇಗವಾಗಿ ಚಲಿಸುತ್ತಿದೆ. ಈ ಚಂಡಮಾರುತವು ಆಂಧ್ರಪ್ರದೇಶ (Andrapradesh) ಮತ್ತು ಒಡಿಶಾದ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಲಿದೆ ಎಂದು ಅಂದಾಜಿಸಲಾಗಿದೆ. ಈ ಚಂಡಮಾರುತದ (Cyclone alert) ಪರಿಣಾಮ ದೇಶದ ವಿವಿಧ ಭಾಗಗಳಲ್ಲಿಯೂ ಕಾಣಿಸಲಿದೆ. ಆದರೆ, ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಚಂಡಮಾರುತದ ಪರಿಣಾಮ ಹೆಚ್ಚು ಇರಲಿದೆ. ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ಸರ್ಕಾರ ಈ ಕುರಿತು ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಜವಾದ್ ಚಂಡಮಾರುತದ ಅನಾಹುತ!
ದೇಶದ ಪೂರ್ವ ಕರಾವಳಿಯಲ್ಲಿ ಮತ್ತೆ ಚಂಡಮಾರುತದ ಅಪಾಯ ಎದುರಾಗಿದೆ. ಜವಾದ್ ಚಂಡಮಾರುತವು (Jawad Cyclone) ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ಮತ್ತು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಬಳಿ ತಲುಪುವ ನಿರೀಕ್ಷೆಯಿದೆ. ಇದರ ನಂತರ, ಇದು ಒಡಿಶಾ (Odisha) ಮತ್ತು ಆಂಧ್ರಪ್ರದೇಶದ (Andrapradesh) ಕರಾವಳಿಯ ಬಳಿ ಈಶಾನ್ಯಕ್ಕೆ ಚಲಿಸುತ್ತದೆ. ಜವಾದ್ ಡಿಸೆಂಬರ್ 5 ರಂದು ಮಧ್ಯಾಹ್ನ ಪುರಿ ಸುತ್ತಮುತ್ತ ಕರಾವಳಿಯನ್ನು ತಲುಪಲಿದೆ.

ಇದನ್ನೂ ಓದಿ :  Booster Dose Update: Omicron ಅಪಾಯದ ನಡುವೆಯೇ ಸರ್ಕಾರಕ್ಕೆ ವಿಜ್ಞಾನಿಗಳ ಶಿಫಾರಸು, 40+ ಜನರಿಗೆ ಬೂಸ್ಟರ್ ಡೋಸ್ ನೀಡಿ!

ಜವಾದ್‌ನ ವೇಗ ಎಷ್ಟಿರಬಹುದು?
ಜವಾದ್ ಚಂಡಮಾರುತದ (Jawad cyclone alert) ಬಗ್ಗೆ ದೇಶದಾದ್ಯಂತ ಮುನ್ಸೂಚನೆ ನೀಡಲಾಗಿದೆ. ಈ ಚಂಡಮಾರುತದ ವೇಗ ಗಂಟೆಗೆ 100 ಕಿ.ಮೀ.ವರೆಗೆ ಇರಲಿದೆ. ಜೋರಾದ ಗಾಳಿಗೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳುವ ಭೀತಿ ಎದುರಾಗಿದೆ. ಚಂಡಮಾರುತವನ್ನು ಎದುರಿಸಲು ಪೂರ್ವ ಕರಾವಳಿಯ ರಾಜ್ಯಗಳಲ್ಲಿ NDRF ನ 46 ತಂಡಗಳನ್ನು ನಿಯೋಜಿಸಲಾಗಿದೆ.

ರೈಲ್ವೆ 107 ರೈಲುಗಳನ್ನು ರದ್ದು :
ಜವಾದ್ ಚಂಡಮಾರುತದಿಂದಾಗಿ ಭಾರತೀಯ ರೈಲ್ವೆ (Indian railway) 107 ರೈಲುಗಳನ್ನು ರದ್ದುಗೊಳಿಸಿದೆ. ಇವು ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿ ಪ್ರದೇಶಗಳ ಮೂಲಕ ಹಾದುಹೋಗುವ ರೈಲುಗಳಾಗಿವೆ. ಜವಾದ್ ಚಂಡಮಾರುತದಿಂದಾಗಿ ಒಡಿಶಾದ 19 ಜಿಲ್ಲೆಗಳಲ್ಲಿ ಇಂದು ಶಾಲೆಗಳನ್ನು ಮುಚ್ಚಲಾಗಿದೆ. ಎರಡೂ ರಾಜ್ಯಗಳಲ್ಲಿ ಯುಜಿಸಿ ನೆಟ್ (UGC NET) ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಇದನ್ನೂ ಓದಿ : 12 ಓಮಿಕ್ರಾನ್ ಶಂಕಿತರು ದೆಹಲಿಯ ಆಸ್ಪತ್ರೆಗೆ ದಾಖಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News