ನವದೆಹಲಿ: ಪುಣೆಯಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮಳೆಯ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಅಲ್ಲದೆ, ಸುಮಾರು 300 ಜನರನ್ನು ರಕ್ಷಣೆ ಮಾಡಲಾಗಿದೆ.
ಸೆಪ್ಟೆಂಬರ್ 25 ಮತ್ತು 26ರ ಮಧ್ಯರಾತ್ರಿ ಸೇನೆಯ ಐದು ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿ ಹಲವರನ್ನು ರಕ್ಷಿಸಿವೆ.
Indian Army, Southern Command: Five teams from units stationed at Pune rescued 300 people, that were stranded due to incessant rains, during the intervening night of 25th & 26th September. pic.twitter.com/I5KcW4NxTY
— ANI (@ANI) September 26, 2019
ಮುನ್ನೆಚ್ಚರಿಕಾ ಕ್ರಮವಾಗಿ ಪುಣೆ ನಗರ, ಪುರಂದರ್, ಬಾರಾಮತಿ, ಭೋರ್ ಮತ್ತು ಹವೇಲಿ ತಹಸಿಲ್‌ನಲ್ಲಿ ಶುಕ್ರವಾರವೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಭಾರತೀಯ ಸೇನೆಯ ಸದರ್ನ್ ಕಮಾಂಡ್‌ನ ಅಧಿಕೃತ ಹೇಳಿಕೆ ತಿಳಿಸಿದೆ.
ಸಹಕರ್ ನಗರ ಪ್ರದೇಶದಲ್ಲಿ ಮನೆ ಗೋಡೆ ಕುಸಿದು, 11 ಮಂದಿಯಲ್ಲಿ 6 ಮಂದಿ ಸಾವನ್ನಪ್ಪಿದ್ದು, ಸುಮಾರು 150 ಮನೆಗಳು ಹಾನಿಗೊಳಗಾಗಿವೆ.
ಸ್ಕೈಮೆಟ್ ಹವಾಮಾನ ವರದಿಯ ಪ್ರಕಾರ, ಪುಣೆಯಲ್ಲಿ ಇಂದೂ ಸಹ ಮಳೆಯಾಗಲಿದ್ದು, ತೀವ್ರತೆಯ ಪ್ರಮಾಣ ಕಡಿಮೆಯಾಗಲಿದೆ. ಮುಂದಿನ ಎರಡು ದಿನಗಳು ಜಿಲ್ಲಾದ್ಯಂತ ಮಳೆ ವಾತಾವರಣ ಇರಲಿದ್ದು, ಶನಿವಾರದ ಬಳಿಕ ಹವಾಮಾನ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.