ಟಿಡಿಪಿಗೆ ಶಾಕ್! ಪಕ್ಷ ತೊರೆದು ವೈಎಸ್​ಆರ್ ಸೇರಿದ ಮತ್ತೋರ್ವ ಸಂಸದ

ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿಯನ್ನು ಭೇಟಿ ಮಾಡಿದ ಪಿ.ರವೀಂದ್ರ ಬಾಬು, ರೆಡ್ಡಿ ಸಮ್ಮುಖದಲ್ಲಿ ಔಪಚಾರಿಕವಾಗಿ ವೈಎಸ್ಆರ್ ಪಕ್ಷಕ್ಕೆ ಸೇರ್ಪಡೆಗೊಂಡರು.

Last Updated : Feb 18, 2019, 08:36 PM IST
ಟಿಡಿಪಿಗೆ ಶಾಕ್! ಪಕ್ಷ ತೊರೆದು ವೈಎಸ್​ಆರ್ ಸೇರಿದ ಮತ್ತೋರ್ವ ಸಂಸದ title=

ಹೈದರಾಬಾದ್: ಆಂಧ್ರಪ್ರದೇಶದ ಆಡಳಿತಾರೂಢ ತೆಲುಗು ದೇಶಂ ಪಕ್ಷದ ಅಮಲಪುರಂ ಕ್ಷೇತ್ರದ ಸಂಸದ ಪಿ.ರವೀಂದ್ರ ಬಾಬು ಟಿಡಿಪಿ ತೊರೆದು ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೋಮವಾರ ಸೇರ್ಪಡೆಗೊಂಡಿದ್ದಾರೆ. 

ಹೈದರಾಬಾದಿನ ಲೋಟಸ್ ಪೌಂಡ್ ನಿವಾಸದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿಯನ್ನು ಭೇಟಿ ಮಾಡಿದ ಪಿ.ರವೀಂದ್ರ ಬಾಬು, ರೆಡ್ಡಿ ಸಮ್ಮುಖದಲ್ಲಿ ಔಪಚಾರಿಕವಾಗಿ ವೈಎಸ್ಆರ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಬಾಬು ಅವರಿಗೆ ಶಾಲು ಹೊದಿಸುವ ಮೂಲಕ ಜಗನ್ ಪಕ್ಷಕ್ಕೆ ಸ್ವಾಗತಿಸಿದರು.

ಈ ಮೂಲಕ ರವೀಂದ್ರ ಬಾಬು ಅವರು ಅಂಕಂಪಲ್ಲಿ ಸಂಸದ ಎಂ.ಶ್ರೀನಿವಾಸ ರಾವ್ ಬಳಿಕ ಒಂದು ವಾರದ ಅವಧಿಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿದ ಎರಡನೇ ಸಂಸದರಾಗಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸಂಸದರಾಗಿ ಪಿ.ರವೀಂದ್ರ ಬಾಬು ಆಯ್ಕೆಯಾಗಿದ್ದರು.

Trending News