ಅಮಿತ್ ಶಾ ಪಾಕಿಸ್ತಾನದ ಜಿನ್ನಾ ಇದ್ದಂತೆ- ರಾಮಚಂದ್ರ ಗುಹಾ

ಭಾರತದ ಖ್ಯಾತ ಇತಿಹಾಸಕಾರ ಈಗಿನ ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್ ಶಾ ರನ್ನು  ಪಾಕಿಸ್ತಾನದ ಮಹಮ್ಮದ ಅಲಿ ಜಿನ್ನಾಗೆ ಹೋಲಿಸಬಹುದು ಎಂದು ತಿಳಿಸಿದ್ದಾರೆ. 

Last Updated : Sep 15, 2018, 01:17 PM IST
ಅಮಿತ್ ಶಾ ಪಾಕಿಸ್ತಾನದ ಜಿನ್ನಾ ಇದ್ದಂತೆ- ರಾಮಚಂದ್ರ ಗುಹಾ  title=

ನವದೆಹಲಿ: ಭಾರತದ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಈಗಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರನ್ನು ಪಾಕಿಸ್ತಾನದ ಮಹಮ್ಮದ ಅಲಿ ಜಿನ್ನಾಗೆ ಹೋಲಿಸಬಹುದು ಎಂದು ತಿಳಿಸಿದ್ದಾರೆ. 

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿರುವ ಗುಹಾ " ಅಮಿತ್ ಶಾ ನಾನು ಏನೇ ಸಂಭವಿಸಿದರೂ ಚುನಾವಣೆಯನ್ನು ಗೆಲ್ಲುತ್ತೇನೆ ಎಂದು ಹೇಳುತ್ತಾರೆ. ಅದೇ ರೀತಿ ಜಿನ್ನಾ ಕೂಡ ಏನೇ ಆದರೂ ಕೊನೆಗೆ ಹೆಣಗಳು ಉರುಳಿದರು ಸಹ ಪಾಕಿಸ್ತಾನವನ್ನು ಪಡದೆ ತೀರುತ್ತೇನೆ ಎಂದು ಜಿನ್ನಾ ಹೇಳುತ್ತಿದ್ದರು" ಎಂದು ಗುಹಾ ತಿಳಿಸಿದ್ದಾರೆ.

ಇತ್ತೀಚಿಗೆ ಗಾಂಧಿಜಿಯವರ ಸ್ವಾತಂತ್ರ್ಯ ಹೋರಾಟವನ್ನು ಕುರಿತಾದ Gandhi: The Years That Changed The World, 1914-1948 ಪುಸ್ತಕದ ಪೀಠಿಕೆಯಲ್ಲಿ ಜಿನ್ನಾ ಅವರ ಬಗ್ಗೆ ತಿಳಿಸುತ್ತಾ ಅವರು ಅಮಿತ್ ಶಾರನ್ನು  ಜಿನ್ನಾಗೆ ಹೋಲಿಸಿದ್ದಾರೆ.
 
 

Trending News