ಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ Asaduddin Owaisi ಗಂಭೀರ ಹೇಳಿಕೆ

ಮಥುರಾದಲ್ಲಿರುವ ಸಿವಿಲ್ ಕೋರ್ಟ್ ವೊಂದರಲ್ಲಿ ಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಅರ್ಜಿ ದಾಖಲಿಸಲಾಗಿದೆ. ಈ ಅರ್ಜಿಯಲ್ಲಿ ಪ್ರತಿಯೊಂದು  ಭೂಮಿಯನ್ನು ಮರುಪಡೆಯುವ ಕುರಿತು ಹೇಳಿಕೆ ನೀಡಲಾಗಿದೆ. ಅರ್ಜಿಯಲ್ಲಿ ಈ ಭೂಮಿ ಶ್ರೀಕೃಷ್ಣ ಭಕ್ತರು ಹಾಗೂ ಹಿಂದೂ ಸಮುದಾಯದ ಜನರ ಪಾಲಿಗೆ ತುಂಬಾ ಪವಿತ್ರವಾಗಿದೆ ಎಂದು ಹೇಳಲಾಗಿದೆ.  

Last Updated : Sep 27, 2020, 03:05 PM IST
  • ಮಥುರಾ ಶ್ರೀಕೃಷ್ಣಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಅಸದುದ್ದೀನ್ ಒವೈಸಿ ಹೇಳಿದೆ.
  • 1968ರಲ್ಲಿ ಇತ್ಯರ್ಥಗೊಂಡ ಪ್ರಕರಣವನ್ನು ಇದೀಗ ಮತ್ತೆ ಯಾಕೆ ಕೆದಕಲಾಗುತ್ತಿದೆ.
  • ನೂತನ ಅರ್ಜಿಯಲ್ಲಿ ಕೃಷ್ಣ ಭೂಮಿಯ ಪ್ರತಿ ಇಂಚು ಭೂಮಿಯ ಕುರಿತು ಹಕ್ಕು ಮಂಡಿಸಲಾಗಿದೆ.
ಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ Asaduddin Owaisi ಗಂಭೀರ ಹೇಳಿಕೆ title=

ತೆಲಂಗಾಣ: ಕೃಷ್ಣ ಜನ್ಮಭೂಮಿ ಕುರಿತಾದ ಬೇಡಿಕೆಯ ಕುರಿತು ಮಥುರಾದಲ್ಲಿ ಎರಡನೇ ಬಾರಿಗೆ ಅರ್ಜಿ ದಾಖಲಾಗಿದ್ದು, ಈ ಕುರಿತು AIMIM ಮುಖ್ಯಸ್ಥ ಅಸದುದ್ದೀನ್ ಒವೈಸಿ (Asaduddin Owaisi) ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘ ಹಾಗೂ ಶಾಹಿ ಇದಗಾಹ್ ಟ್ರಸ್ಟ್ ನಡುವಿನ ಈ ವಿವಾದ 1968 ರಲ್ಲಿಯೇ ಇತ್ಯರ್ಥಗೊಂಡಿದ್ದು, ಆ ವಿವಾದವನ್ನು ಮತ್ತೆ ಕೆದಕುವ ಅವಶ್ಯಕತೆ ಏನು? ಎಂದು ಪ್ರಶ್ನಿಸಿದ್ದಾರೆ.

ಪ್ಲೆಸಿಸ್ ಆಫ್ ವರ್ಕ್ ಕಾಯ್ದೆ 1991 ರ ಪ್ರಕಾರ, ಯಾವುದೇ ಪೂಜಾ ಸ್ಥಳದ ಪರಿವರ್ತನೆಯ ನ್ನು ನಿಷೇಧಿಸಲಾಗಿದೆ. ಈ ರೀತಿ ಮಾಡುವುದು ಸಾಧ್ಯವಿಲ್ಲ ಎಂದು ಒವೈಸಿ ಹೇಳಿದ್ದಾರೆ.

ಇದನ್ನು ಓದಿ- 'ಬಾಬ್ರಿ ಮಸೀದಿ ಇತ್ತು ಮತ್ತು ಇರಲಿದೆ, ಇನ್ಷಾ ಅಲ್ಲಾಹ್': Owaisi

ಈ ಕುರಿತು ಟ್ವೀಟ್ ಮಾಡಿರುವ ಒವೈಸಿ " ಶಾಹಿ ಇದಗಾಹ್ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘಗಳು ಈ ವಿವಾದವನ್ನು 1968 ರಲ್ಲಿಯೇ ಬಗೆಹರಿಸಿಕೊಂಡಿವೆ. ಆ ವಿವಾದಕ್ಕೆ ಇದೀಗ ಮರುಜೀವ ಯಾಕೆ ನೀಡಲಾಗುತ್ತಿದೆ?" ಎಂದು ಪ್ರಶ್ನಿಸಿದ್ದಾರೆ.

ಕೃಷ್ಣ ಜನ್ಮಭೂಮಿಗೆ ಸಂಬಂಧಿಸಿದಂತೆ ಮಥುರಾದ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಲಾಗಿದೆ. ಇದರಲ್ಲಿ, ಪ್ರತಿ ಇಂಚು ಭೂಮಿಯನ್ನು ಹಿಂಪಡೆಯುವುದಾಗಿ ಹೇಳಲಾಗಿದೆ. ಈ ಭೂಮಿ ಶ್ರೀಕೃಷ್ಣ ಮತ್ತು ಹಿಂದೂ ಸಮುದಾಯದ ಭಕ್ತರಿಗೆ ಬಹಳ ಪವಿತ್ರವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ಸಿವಿಲ್ ಮೊಕದ್ದಮೆಯನ್ನು ವಕೀಲ ವಿಷ್ಣು ಜೈನ್ ಸಲ್ಲಿಸಿದ್ದಾರೆ.

ಇದನ್ನು ಓದಿ- ಸಾವರ್ಕರ್ ಬದಲು ಭಗತ್ ಸಿಂಗ್ ಗೆ ಭಾರತ ರತ್ನ ನೀಡಿ-ಅಸಾದುದ್ದೀನ್ ಒವೈಸಿ

ಅರ್ಜಿಯಲ್ಲಿ, ಕೃಷ್ಣ ಜನ್ಮಭೂಮಿಯ ಒಟ್ಟು 13.37 ಎಕರೆ ಭೂಮಿಗಾಗಿ ಸಂಪೂರ್ಣ ಹಕ್ಕು ಮಂಡಿಸಲಾಗಿದೆ . ವಕೀಲ ವಿಷ್ಣು ಜೈನ್ ಅವರು 1968 ರ ರಾಜಿ ತಪ್ಪಾಗಿದೆ ಮತ್ತು ಶಾಹಿ ಇದ್ಗಾ ಮಸೀದಿಯನ್ನು ಅಲ್ಲಿಂದ ತೆರವುಗೊಳಿಸಬೇಕು ಎಂದು ಕೋರಿದ್ದಾರೆ.

ಶ್ರೀಕೃಷ್ಣ ಕಂಸನ ಕಾರಾಗ್ರಹದಲ್ಲಿ ಜನಿಸಿದ್ದಾನೆ. ಈ ಸಂಪೂರ್ಣ ಕ್ಷೇತ್ರವನ್ನು ಕತರಾ ಕೇಶವ್ ದೇವ್ ಎಂದು ಕರೆಯಲಾಗುತ್ತದೆ. ಕೃಷ್ಣ ಜನ್ಮಸ್ಥಾನ, ಇದ್ಗಾ ಮಸೀದಿ ಟ್ರಸ್ಟ್ ಮ್ಯಾನೇಜ್ಮೆಂಟ್ ಕಮೀಟಿ ಮೂಲಕ ನಿರ್ಮಿಸಲಾಗಿರುವ ರಚನೆ ಸರಿಯಾಗಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಇದನ್ನು ಓದಿ-ಕಾಂಗ್ರೆಸ್ ಪಕ್ಷವನ್ನು ಯಾವ ಕ್ಯಾಲ್ಸಿಯಂ ಚುಚ್ಚುಮದ್ದು ಸಹ ಬಲಪಡಿಸಲು ಸಾಧ್ಯವಿಲ್ಲ-ಅಸಾದುದ್ದೀನ್ ಒವೈಸಿ

ಮುಘಲ್ ಶಾಸಕ ಔರಂಗಜೆಬ ತನ್ನ ಕಾಲದಲ್ಲಿ ಅನೇಕ ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದು, ಅದರಲ್ಲಿ ಮಥುರಾ ಕೃಷ್ಣಾ ಮಂತಿರ ಕೂಡ ಒಂದಾಗಿದೆ. ಹಲವಾರು ದಶಕಗಳ ಬಳಿಕ ಇಲ್ಲಿರುವ ದೇವಷ್ಟಾನದ ಅಂಶಗಳನ್ನು ಆಧರಿಸಿ ಅದರ ಮೇಲೆ ಮಸೀದಿ ನಿರ್ಮಿಸಲಾಗಿದೆ. ಇಲ್ಲಿ ಇದ್ಗಾ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ ಮಸೀದಿಯನ್ನು ಸುನ್ನಿ ಸೆಂಟ್ರಲ್ ಬೋರ್ಡ್ ಅನುಮತಿಯೊಂದಿಗೆ ನಿರ್ಮಿಸಲಾಗಿದೆ ಎಂದು ಕೂಡ ಅರ್ಜಿಯಲ್ಲಿ ತಿಳಿಸಲಾಗಿದೆ.

Trending News