Agni-5 Test Fired Successfully - 5000 ಕಿಮೀ ವ್ಯಾಪ್ತಿಯ ಮಾರಕ ಸಾಮರ್ಥ್ಯ ಹೊಂದಿರುವ ಅಗ್ನಿ-5 ಕ್ಷಿಪಣಿಯನ್ನು ಬುಧವಾರ ಯಶಸ್ವಿ ಉಡಾವಣೆ ಕೈಗೊಳ್ಳಲಾಗಿದೆ. ಮೇಲ್ಮೈಯಿಂದ ಮೇಲ್ಮೈಗೆ ಮಾರಕ ಕ್ಷಮತೆ (Surface To Surface Ballistic Missile) ಹೊಂದಿರುವ ಈ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ (APJ Abdul Kalam Island Odisha) ಉಡಾವಣೆ ಮಾಡಲಾಗಿದೆ. ಅತ್ಯಂತ ನಿಖರತೆಯಿಂದ ತನ್ನ ಗುರಿಯನ್ನು ತಲುಪಬಲ್ಲ ಈ ಕ್ಷಿಪಣಿ ಇಡೀ ಚೀನಾ ಮತ್ತು ಪಾಕಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
Surface to Surface Ballistic Missile, Agni-5, successfully launched from APJ Abdul Kalam Island, Odisha, today. The missile, which uses 3-stage solid-fuelled engine, is capable of striking targets at ranges up to 5,000 kilometres with a very high degree of accuracy: Govt of India pic.twitter.com/vrAI2y2LhD
— ANI (@ANI) October 27, 2021
ಇದನ್ನೂ ಓದಿ-Neeraj Chopra ಸೇರಿದಂತೆ 11 ಆಟಗಾರರಿಗೆ ಖೇಲ್ ರತ್ನ, 35 ಆಟಗಾರರಿಗೆ ಅರ್ಜುನ ಪ್ರಶಸ್ತಿ
ಈ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆಯ ವಿವರಗಳನ್ನು ಹಂಚಿಕೊಂಡ ಅಧಿಕಾರಿಗಳು, ಅಗ್ನಿ-5 ರ ಯಶಸ್ವಿ ಪರೀಕ್ಷಾರ್ಥ ಉಡಾವಣೆಯು ವಿಶ್ವಾಸಾರ್ಹ ಕನಿಷ್ಠ ಪ್ರತಿಬಂಧಕವನ್ನು ಸಾಧಿಸುವ ಭಾರತದ ನೀತಿಗೆ ಅನುಗುಣವಾಗಿದೆ ಎಂದು ಹೇಳಿದ್ದಾರೆ. ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ನೆರೆಯ ಚೀನಾ ಗಡಿಯಲ್ಲಿ ಉದ್ವಿಗ್ನತೆ ಇರುವಾಗಲೇ ಭಾರತ ಈ ಕ್ಷಿಪಣಿಯ ಮತ್ತೊಂದು ಪರೀಕ್ಷೆ ನಡೆಸಿದೆ. ಮತ್ತೊಂದೆಡೆ ಪಾಕಿಸ್ತಾನದ ಗಡಿಯಲ್ಲಿ ಕದನ ವಿರಾಮ ಜಾರಿಯಲ್ಲಿದ್ದರೂ ಪಕ್ಕದ ದೇಶ ಭಯೋತ್ಪಾದಕರನ್ನು ಕಳುಹಿಸಿ ವಾತಾವರಣ ಹಾಳು ಮಾಡುವ ಷಡ್ಯಂತ್ರದಲ್ಲಿ ತೊಡಗಿದೆ.
ಇದನ್ನೂ ಓದಿ-Sameer Wankhede ಮದುವೆ ಮಾಡಿಸಿದ ಮೌಲಾನಾ ಗಂಭೀರ ಹೇಳಿಕೆ, 15 ವರ್ಷಗಳ ಹಿಂದೆ ನಡೆದಿದ್ದೇನು?
ಅಗ್ನಿ-5 ಕ್ಷಿಪಣಿಯ ವೈಶಿಷ್ಟ್ಯಗಳೇನು? (Agni-5, Ballistic Missile)
>> ಅಗ್ನಿ 5 ಮೂರು ಹಂತದ ಕ್ಷಿಪಣಿಯಾಗಿದೆ.
>> ಇದು 17 ಮೀಟರ್ ಉದ್ದ, ಎರಡು ಮೀಟರ್ ಅಗಲವಿದೆ.
>> 1.5 ಟನ್‌ಗಳಷ್ಟು ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
>> ಈ ಸರಣಿಯ ಇತರ ಕ್ಷಿಪಣಿಗಳಿಗಿಂತ ಭಿನ್ನವಾಗಿರುವ ಅಗ್ನಿ 5, ಪಥ ಮತ್ತು ಮಾರ್ಗದರ್ಶನ, ಸ್ಫೋಟಕ ಸಾಗಿಸುವ ಮೇಲ್ಭಾಗ ಮತ್ತು ಎಂಜಿನ್‌ನ ವಿಷಯದಲ್ಲಿ ಅತ್ಯಂತ ಉನ್ನತ ಮಟ್ಟವನ್ನು ಸಾಧಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ