ನವದೆಹಲಿ: ಕವಿ ಕೈಫಿ ಅಜ್ಮಿ ಜನ್ಮ ಶತಮಾನೋತ್ಸವದ ನಿಮಿತ್ತ ಕರಾಚಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಶಬ್ನಾ ಅಜ್ಮಿ ಹಾಗೂ ಜಾವೇದ್ ಅಖ್ತರ್ ದಂಪತಿಗಳು ಪುಲ್ವಾಮಾ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿ ಈಗ ಈ ಹಿಂದೆ ಸರಿದಿದ್ದಾರೆ.
ಗುರುವಾರದಂದು 40 ಸಿಆರ್ಪಿಎಫ್ ಸೈನಿಕರು ಉಗ್ರರು ದಾಳಿಯಿಂದಾಗಿ ಮೃತಪಟ್ಟಿದ್ದರು. ಕೆಲವು ದಶಕಗಳ ನಂತರ ಭಾರತ ಇಂತಹ ದುರ್ಘಟನೆಗೆ ಸಾಕ್ಷಿಯಾಗಿದೆ.ಈ ಹಿನ್ನಲೆಯಲ್ಲಿ ಈಗ ಜಾವೇದ್ ಅಖ್ತರ್ ಪಾಕ್ ಪ್ರವಾಸ ರದ್ದುಗೊಳಿಸಿರುವ ಬಗ್ಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ.
Kranchi art council had invited. Shabana and me for a two day lit conference about Kaifi Azmi and his poetry . We have cancelled that . In 1965 during the indo Pak war Kaifi saheb had written a poem . “ AUR PHIR KRISHAN NE ARJUN SE KAHA “
— Javed Akhtar (@Javedakhtarjadu) February 15, 2019
"ಕರಾಚಿ ಆರ್ಟ್ ಕೌನ್ಸಿಲ್ ಕೈಫಿ ಅಜ್ಮಿಯವರ ಕವಿತೆಗಳ ಕುರಿತಾದ ಸಮ್ಮೇಳನದಲ್ಲಿ ಭಾಗವಹಿಸಲು ಆಮಂತ್ರಣ ನೀಡಿತ್ತು, ನಾವು ಈಗ ಅದನ್ನು ರದ್ದುಗೊಳಿಸಿದ್ದೇವೆ.1965 ರ ಭಾರತ-ಪಾಕ್ ಯುದ್ದದ ಸಮಯದಲ್ಲಿ ಕೈಫಿ ಸಾಹೇಬ್ " ಔರ್ ಫಿರ್ ಕ್ರಿಶನ್ ನೇ ಅರ್ಜುನ್ ಸೆ ಕಹಾ" ಕವಿತೆಯೊಂದನ್ನು ಬರೆದಿದ್ದರು ಎಂದು ಅಖ್ತರ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
Dont get upset with me. talk to those who are running your country , who are protecting and nurturing terrorists like Masood Azhar . Those who had sent Qasab to my city . If you are getting a terrible reputation they are responsible no one else .
— Javed Akhtar (@Javedakhtarjadu) February 15, 2019
ತಮ್ಮ ಟ್ವೀಟ್ ನಲ್ಲಿ ಬಂದಿರುವ ಕಾಮೆಂಟ್ ಗೆ ಪ್ರತಿಕ್ರಿಯೆ ನೀಡಿರುವ ಅಖ್ತರ್ "ನನ್ನ ಬಗ್ಗೆ ನೀವು ಅಸಮಾಧಾನಗೊಳ್ಳಬೇಕಿಲ್ಲ,ನಿಮ್ಮ ದೇಶವನ್ನು ಆಳುತ್ತಿರುವವರ ಜೊತೆ ಮಾತನಾಡಿ ಅಂತವರು ಮಸೂದ್ ಅಜರ್ ನಂತಹ ಉಗ್ರರನ್ನು ಪೋಷಿಸುತ್ತಿದ್ದಾರೆ,ಅವರೇ ಕಸಬ್ ನಂತಹ ವ್ಯಕ್ತಿಯನ್ನು ನನ್ನ ನಗರಕ್ಕೆ ಕಳುಹಿಸಿದವರು.ನೀವು ಕೆಟ್ಟ ಹೆಸರು ಪಡೆಯುತ್ತಿದ್ದರೆ ಅದಕ್ಕೆ ಅವರೇ ಹೊಣೆಗಾರರೆ ಹೊರತು ಮತ್ತ್ಯಾರು ಅಲ್ಲ " ಎಂದು ಅಖ್ತರ್ ಟ್ವೀಟ್ ಮಾಡಿದ್ದಾರೆ.