UP Police: ಎಮ್ಮೆ ನಂತರ ಈಗ ಮೇಕೆಗಳನ್ನು ಹುಡುಕುತ್ತಿರುವ ಯುಪಿ ಪೊಲೀಸರು!

ಎಸ್ಪಿ ಸರ್ಕಾರದಲ್ಲಿ ಅಜಂಖಾನ್ ಎಮ್ಮೆ ಹುಡುಕಿ ಹುಡುಕಿ ಸುಸ್ತಾಗಿದ್ದ ಯುಪಿ ಪೊಲೀಸರು ಈಗ ಯೋಗಿ ಸರ್ಕಾರದಲ್ಲಿ ಮೇಕೆಗಳನ್ನು ಹುಡುಕುತ್ತಿದ್ದಾರೆ. ಸದ್ಯ ಕಳ್ಳತನವಾಗಿರುವ ತಮ್ಮ ಮೇಕೆಗಳನ್ನು ಪತ್ತೆ ಮಾಡಕೊಡುವಂತೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.  

Written by - Puttaraj K Alur | Last Updated : Mar 14, 2022, 02:52 PM IST
  • ಎಮ್ಮೆ ಹುಡುಕಿ ಹುಡುಕಿ ಸುಸ್ತಾಗಿದ್ದ ಯುಪಿ ಪೊಲೀಸರಿಂದ ಇದೀಗ ಮೇಕೆಗಳ ಹುಡುಕಾಟ
  • ಕಳ್ಳತನವಾಗಿರುವ ಮೇಕೆಗಳನ್ನು ಹುಡುಕುವಂತೆ ಉತ್ತರಪ್ರದೇಶ ಪೊಲೀಸರಿಗೆ ಆದೇಶ
  • ಅಪರಾಧಿಗಳ ಬದಲು ನಾವು ಪ್ರಾಣಿಗಳನ್ನು ಹುಡುಕಬೇಕೇ? ಎಂದು ತಲೆ ಕೆಡಿಸಿಕೊಂಡಿರುವ ಯಪಿ ಪೊಲೀಸರು
UP Police: ಎಮ್ಮೆ ನಂತರ ಈಗ ಮೇಕೆಗಳನ್ನು ಹುಡುಕುತ್ತಿರುವ ಯುಪಿ ಪೊಲೀಸರು! title=
ಯುಪಿ ಪೊಲೀಸರಿಂದ ಮೇಕೆಗಳ ಹುಡುಕಾಟ!

ಬಂದಾ: ಉತ್ತರಪ್ರದೇಶ(Uttar Pradesh)ದ ರಾಂಪುರದಲ್ಲಿ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್(Azam Khan) ಅವರ ಎಮ್ಮೆ ಕಳ್ಳತನ ಪ್ರಕರಣ ದೊಡ್ಡ ಸುದ್ದಿಯಾಗಿತ್ತು. ಈ ವೇಳೆ ಯುಪಿ ಪೊಲೀಸರು ಹರಸಾಹಸ ಮಾಡಿ ಎಮ್ಮೆಯನ್ನು ಶೋಧಿಸಿ ನಿಟ್ಟುಸಿರು ಬಿಟ್ಟಿದ್ದರು. ಇದೀಗ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮೇಕೆಗಳ ಕಳ್ಳತನಾಗಿರುವ ಸುದ್ದಿ ಸಖತ್ ಸದ್ದು ಮಾಡುತ್ತಿದೆ.

ಸದ್ಯ ಕಳ್ಳತನವಾಗಿರುವ ಮೇಕೆ(Goats)ಗಳನ್ನು ಪತ್ತೆ ಹಚ್ಚಿ ಕಳ್ಳರನ್ನು ಹಿಡಿದು ಜೈಲಿಗೆ ಕಳುಹಿಸುವಂತೆ ಸ್ಥಳೀಯ ಪೊಲೀಸರಿಗೆ ಉನ್ನತ ಅಧಿಕಾರಿಗಳು  ಆದೇಶ ನೀಡಿದ್ದಾರೆ. ಮೇಕೆಗಳನ್ನು ಪತ್ತೆ ಮಾಡಿಕೊಡುವಂತೆ ಅವುಗಳ ಮಾಲೀಕರು ತಹ್ರೀರ್‌ನ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Tamil Nadu: ಪೊಲೀಸರು 10 ಸಾವಿರ ದಂಡ ವಿಧಿಸಿದ್ದಕ್ಕೆ, ತನ್ನನ್ನು ತಾನೇ ಹೊತ್ತಿಸಿಕೊಂಡ ಲಾರಿ ಚಾಲಕ

ಮನುಷ್ಯರ ಬದಲು ಪ್ರಾಣಿಗಳನ್ನು ಹುಡುಕಬೇಕೇ?

ಮೇಕೆಗಳನ್ನು ಕಳೆದುಕೊಂಡಿರುವ ಸ್ಥಳೀಯರು ಮೊದಲು ಅಲಿಗಂಜ್ ಪೊಲೀಸ್(UP police) ಪೋಸ್ಟ್ ನ ಪೊಲೀಸರನ್ನು ಭೇಟಿಯಾಗಿದ್ದಾರೆ. ತಮ್ಮ ಕಳುವಾಗಿರುವ ಮೇಕೆಗಳನ್ನು ಪತ್ತೆಹಚ್ಚಿಕೊಡುವಂತೆ ಅವರಿಗೆ ಮನವಿ ಮಾಡಿದ್ದಾರೆ. ಆದರೆ ಪೊಲೀಸರು ಸ್ಥಳೀಯರನ್ನು ಬೆದರಿಸಿ ಅಲ್ಲಿಂದ ಓಡಿಸಿದ್ದಾರೆ. ಈಗ ನಾವು ಪ್ರಾಣಿಗಳನ್ನು ಹುಡುಕಬೇಕೇ..? ಅಂತಾ ಅವರು ಪ್ರಶ್ನಿಸಿದ್ದಾರೆ. ನಮ್ಮ ಭಾರತದಲ್ಲಿ ಜನಸಂಖ್ಯೆ ಕಡಿಮೆಯಾಗಿದೆಯೇ? ಈಗ ಅಪರಾಧಿಗಳ ಬದಲು ನಾವು ಪ್ರಾಣಿಗಳನ್ನು ಹುಡುಕಬೇಕಾಗಿದೆ ಅಂತಾ ಪೊಲೀಸರು ಅಳಲು ತೋಡಿಕೊಂಡಿದ್ದಾರೆ.   

ಮೇಕೆ ಪತ್ತೆ ಮಾಡುತ್ತೇವೆ- ಉಪ ಪೊಲೀಸ್ ವರಿಷ್ಠಾಧಿಕಾರಿ

ಸ್ಥಳೀಯ ಪೊಲೀಸರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಹಿನ್ನೆಲೆ ಮೇಕೆ ಮಾಲೀಕರು ಉಪ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ. ಉಪ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ಸಿಂಗ್(Rakesh Kumar Singh) ಮೇಕೆ ಕಳ್ಳತನವಾಗಿರುವುದನ್ನು ಖಚಿತಪಡಿಸಿದ್ದಾರೆ. ಮೇಕೆ ಮಾಲೀಕರ ಅರ್ಜಿಯನ್ನು ತಕ್ಷಣವೇ ಸ್ವೀಕರಿಸಿದ ಅವರು, ಶೀಘ್ರವೇ ಮೇಕೆಗಳನ್ನು ಪತ್ತೆ ಹಚ್ಚಿ ಕಳ್ಳರನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅವರು ಅಲಿಂಗಜ್ ಪೊಲೀಸರಿಗೆ ಸೂಚಿಸಿದ್ದಾರೆ.  

ಇದನ್ನೂ ಓದಿ: ಹೋಳಿ ಹಬ್ಬಕ್ಕೂ ಮುನ್ನ ಗ್ರಾಹಕರಿಗೆ ಶಾಕ್!: ಎಲ್ಲಾ ಕಾರುಗಳ ಬೆಲೆ ಹೆಚ್ಚಿಸಿದ ಟಾಟಾ

ಕುಟುಂಬ ನಡೆಸಲು ಕಷ್ಟವಾಗುತ್ತಿದೆ    

ಸದ್ಯ ಮೇಕೆ ವ್ಯಾಪಾರದಿಂದಲೇ ಆ ಬಡಕುಟುಂಬಗಳು ಜೀವನ ನಡೆಸುತ್ತಿವೆ. ತಮ್ಮ ದಿನನಿತ್ಯದ ಖರ್ಚು ಹಾಗೂ ಹೊಟ್ಟೆಪಾಡಿಗಾಗಿ ಇಲ್ಲಿನ ಸ್ಥಳೀಯರು ಆಡು ಸಾಕಾಣಿಕೆ ಮಾಡುತ್ತಿದ್ದಾರೆ. ಇದೀಗ ಜೀವನಕ್ಕೆ ಆಧಾರವಾಗಿರುವ ಮೇಕೆ(Goats)ಗಳನ್ನೇ ಕಳ್ಳತನ ಮಾಡಿದರೆ ನಮ್ಮ ಜೀವನಕ್ಕೆ ದಿಕ್ಕು ಏನು ಅಂತಾ ಕಂಗಾಲಾಗಿದ್ದಾರೆ. ಇದರಿಂದ ಮೇಕೆ ಸಾಕಾಣಿಕೆದಾರರ ಕುಟುಂಬ ತೀವ್ರವಾಗಿ ನೊಂದಿದ್ದು, ತಮ್ಮ ಭವಿಷ್ಯದ ಜೀವನ ಹೇಗೆಂದು ಯೋಚಿಸುವಂತಾಗಿದೆ. ಕೂಡಲೇ ಕಳ್ಳರನ್ನು ಪತ್ತೆ ಮಾಡಿ ತಮ್ಮ ಮೇಕೆಗಳನ್ನು ನಮಗೆ ವಾಪಸ್ ನೀಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಡೆಪ್ಯುಟಿ ಎಸ್ಪಿ ರಾಕೇಶ್ ಸಿಂಗ್ ಸೂಚನೆಯ ಮೇರೆಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಆದೇಶ ನೀಡಲಾಗಿದ್ದು, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News