ಮೈಸೂರು: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಟ್ರೋಲ್ ನಿಂದಾಗಿ ತಮ್ಮ ವೈಯಕ್ತಿಕ ಜೀವನಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಿ ಬಹುಭಾಷಾ ನಟ ಪ್ರಕಾಶ್ ರೈ ಪ್ರತಾಪ್ ಸಿಂಹ ಅವರಿಗೆ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.
ಈ ಹಿಂದೆ ನಟ ಪ್ರಕಾಶ್ ರೈ ವರ ವೈಯಕ್ತಿಕ ಜೀವನದ ಕುರಿತಾಗಿ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹರವರಿಗೆ ರೈ ಈಗ ಕಾನೂನು ರೀತಿಯಲ್ಲಿ ಅವರ ಮೇಲೆ ದಾವೆ ಹೂಡಿದ್ದಾರೆ. ಇದನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಪ್ರಕಾಶ ರೈ "ಮೈಸೂರಿನ ಸಂಸದರಾದ ಪ್ರತಾಪ ಸಿಂಹರವರಿಗೆ ಈ ದೇಶದ ಪ್ರಜೆಯಾಗಿ ನನ್ನ ಮೇಲೆ ಅವರು ಮಾಡಿದ ವೈಯಕ್ತಿಕ ನಿಂದನೆಯ ಕಾರಣಗಳಿಗಾಗಿ ನಾನು ಮನನೊಂದು ಈಗ ಅವರಿಗೆ ಕಾನೂನಾತ್ಮಕ ರೀತಿಯಲ್ಲಿ ಉತ್ತರ ಕೊಡಲು ಕೇಳಿದ್ದೇನೆ, ಒಂದು ವೇಳೆ ಅವರು ಉತ್ತರ ನೀಡದೆ ಹೋದರೆ ನಾನು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡುತ್ತೇನೆ" ಎಂದು ತಾವು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
I have sent a legal notice to Mr. Pratap Simha (BJP Mysuru MP), as a citizen of this country for the way he has trolled me which has disturbed my personal life. I am asking him to answer legally & if he doesn't, I will be taking criminal action against him: Actor Prakash Raj pic.twitter.com/wh5sCW1kuE— ANI (@ANI) November 23, 2017
ಇತ್ತೀಚಿಗೆ ತಮ್ಮ ಮುಕ್ತ ಅಭಿಪ್ರಾಯಗಳಿಂದ ದೇಶದ ಮಾಧ್ಯಮಗಳ ಗಮನಸೆಳೆದಿದ್ದ ದಕ್ಷಿಣ ಭಾರತದ ಈ ನಟ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಂತರ ಅಭಿವ್ಯಕ್ತಿ ಸ್ವಾತಂತ್ರದ ಮೇಲಾಗುತ್ತಿರುವ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ್ದರು ಮತ್ತು ನೋಟು ಅಮಾನ್ಯಕರಣದಂತಹ ವಿಷಯಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಸಹ ತರಾಟೆಗೆ ತೆಗೆದುಕೊಂಡಿದ್ದು ಬಹಳ ದೊಡ್ಡ ಸುದ್ದಿಯಾಗಿದ್ದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬಹುದು.