ಮುಂಬೈ: ಮುಂಬೈಯ ಕುರ್ಲಾ ರೈಲ್ವೆ ನಿಲ್ದಾಣದಲ್ಲಿ ಜುಲೈ 30 ರಂದು ಎಲ್ಲರ ಎದೆ ಝಲ್ ಎನ್ನುವ ಘಟನೆ ನಡೆದಿದೆ.
ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಯ ಮೇಲೆ ಬಂದು ಮಲಗಿದ್ದಾನೆ. ಇನ್ನೇನು ರೈಲು ಬರಬೇಕು.... ಅಷ್ಟರಲ್ಲಿ ರೈಲ್ವೆ ರಕ್ಷಣಾ ಸಿಬ್ಬಂದಿ ಮತ್ತು ಸಾರ್ವಜನಿಕರು ಸೇರಿ ಆತನನ್ನು ರಕ್ಷಿಸಿದ್ದಾರೆ. ಈ ದೃಶ್ಯ ರೈಲ್ವೆ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
#WATCH: A man was saved by Railway Protection Force (RPF) personnel & other passengers after he attempted to commit suicide at #Mumbai's Kurla railway station. (30.07.2018) (Source: CCTV) pic.twitter.com/6Yz5WB2Tsw
— ANI (@ANI) July 30, 2018
ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ವ್ಯಕ್ತಿ ರೈಲು ಬರುವ ಸಮಯಕ್ಕೆ ಸರಿಯಾಗಿ ಹಳಿಯ ಮೇಲೆ ಹೋಗಿ ಮಲಗಿದ್ದ ಎನ್ನಲಾಗಿದ್ದು, ಅದರ ಹಿಂದಿನ ಕಾರಣದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.