'ಅವನು ಮತ್ತೆ ಶ್ರಾವಣಿ'ಯಲ್ಲಿ ಶುರುವಾಗ್ತಿದೆ ಒಂದು ಭಯಾನಕ ಸೇಡಿನ ಸಂಘರ್ಷದ ಕಥೆ..! ಇದೇ ಸೋಮವಾರದಿಂದ ರಾತ್ರಿ 10 ಗಂಟೆಗೆ

Avanu Mathey Shravani: ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳ ಪೈಕಿ ಸ್ಟಾರ್ ಸುವರ್ಣ ವಾಹಿನಿಯ 'ಅವನು ಮತ್ತೆ ಶ್ರಾವಣಿ' ಕಥೆಯೂ ಒಂದು. ಈಗಾಗಲೇ 400 ಕ್ಕೂ ಹೆಚ್ಚು ಯಶಸ್ವಿ ಸಂಚಿಕೆಗಳೊಂದಿಗೆ ಮುನ್ನುಗ್ಗುತ್ತಿರುವ ಈ ಧಾರಾವಾಹಿಯಲ್ಲಿ ಇನ್ಮುಂದೆ ಒಂದು ಭಯಾನಕ ಸೇಡಿನ ಸಂಘರ್ಷದ ತಿರುವು ಬರಲಿದೆ.  

Edited by - Zee Kannada News Desk | Last Updated : Jan 23, 2025, 08:08 PM IST
  • ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳ ಪೈಕಿ ಸ್ಟಾರ್ ಸುವರ್ಣ ವಾಹಿನಿಯ 'ಅವನು ಮತ್ತೆ ಶ್ರಾವಣಿ' ಕಥೆಯೂ ಒಂದು.
  • ಈ ಧಾರಾವಾಹಿಯಲ್ಲಿ ಇನ್ಮುಂದೆ ಒಂದು ಭಯಾನಕ ಸೇಡಿನ ಸಂಘರ್ಷದ ತಿರುವು ಬರಲಿದೆ.
  • ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇದೇ ಸೋಮವಾರದಿಂದ ಸಿಗಲಿದೆ.
'ಅವನು ಮತ್ತೆ ಶ್ರಾವಣಿ'ಯಲ್ಲಿ ಶುರುವಾಗ್ತಿದೆ ಒಂದು ಭಯಾನಕ ಸೇಡಿನ ಸಂಘರ್ಷದ ಕಥೆ..! ಇದೇ ಸೋಮವಾರದಿಂದ ರಾತ್ರಿ 10 ಗಂಟೆಗೆ title=

Avanu Mathey Shravani: ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳ ಪೈಕಿ ಸ್ಟಾರ್ ಸುವರ್ಣ ವಾಹಿನಿಯ 'ಅವನು ಮತ್ತೆ ಶ್ರಾವಣಿ' ಕಥೆಯೂ ಒಂದು. ಈಗಾಗಲೇ 400 ಕ್ಕೂ ಹೆಚ್ಚು ಯಶಸ್ವಿ ಸಂಚಿಕೆಗಳೊಂದಿಗೆ ಮುನ್ನುಗ್ಗುತ್ತಿರುವ ಈ ಧಾರಾವಾಹಿಯಲ್ಲಿ ಇನ್ಮುಂದೆ ಒಂದು ಭಯಾನಕ ಸೇಡಿನ ಸಂಘರ್ಷದ ತಿರುವು ಬರಲಿದೆ.

ಎರಡಕ್ಷರದ ಪ್ರೀತಿಗೆ ಮನಸೋತು ಅಭಿ-ಶ್ರಾವಣಿಯ ಬಾಳಲ್ಲಿ ಎರಡನೇ ಅವಕಾಶ ಸಿಕ್ಕೇ ಬಿಡ್ತು ಅನ್ನುವಷ್ಟರಲ್ಲಿ, ಇದೀಗ ಕುತಂತ್ರಿ ಸಂಯುಕ್ತಾಳ ಸಂಚಿಗೆ ಶ್ರಾವಣಿಯ ಜೀವ ಅಪಾಯದಲ್ಲಿದೆ. ಕಥೆಯಲ್ಲಿ ಅಧೀರ ಎಂಬ ಆತ್ಮದ ಆಗಮನವಾಗಲಿದ್ದು, ಸಂಯುಕ್ತಾಳಿಗೆ ಅಧೀರನ ಶಕ್ತಿ ವರದಂತೆ ಸಿಕ್ಕಾಗಿದೆ. ಈ ಅಧೀರ ಯಾರು? ಸಂಯುಕ್ತಾಳಿಗೂ ಅಧೀರನಿಗೂ ಇರೋ ಸಂಬಂಧವೇನು? ಸಂಯುಕ್ತಾಳ ನಿಜರೂಪವನ್ನು ಹೊರತರುವಲ್ಲಿ ಶ್ರಾವಣಿ ಯಶಸ್ವಿಯಾಗ್ತಾಳಾ? ಅತ್ತೆ ತಾಯಿಯ ಎರಡನೇ ರೂಪ ಎಂಬ ಭ್ರಮೆಯಲ್ಲಿರೋ ಅಭಿಮನ್ಯುವಿಗೆ ಸತ್ಯದ ಅರಿವಾಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇದೇ ಸೋಮವಾರದಿಂದ ಸಿಗಲಿದೆ.

ಕೌಟುಂಬಿಕ ಕಥಾ ಹಂದರದೊಂದಿಗೆ ಸಾಗುತ್ತಿದ್ದ ಈ ಕಥೆಯು ಇನ್ಮುಂದೆ ಭಯಾನಕ ಸೇಡಿನ ಸಂಘರ್ಷದೊಂದಿಗೆ ಹಾರರ್ ರೀತಿಯಲ್ಲಿ ಮುಂದುವರಿಯಲಿದೆ. ಈಗಾಗಲೇ ವಾಹಿನಿಯಲ್ಲಿ ಪ್ರೋಮೋ ರಿಲೀಸ್ ಆಗಿದ್ದು ನೋಡುಗರಲ್ಲಿ ಸಂಚಿಕೆ ನೋಡುವ ಕಾತುರತೆ ಹೆಚ್ಚಾಗಿದೆ.

ತಪ್ಪದೇ ವೀಕ್ಷಿಸಿ 'ಅವನು ಮತ್ತೆ ಶ್ರಾವಣಿ' ಇದೇ ಸೋಮವಾರದಿಂದ ಪ್ರತಿದಿನ ರಾತ್ರಿ 10 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ.
 

Trending News