ನಿವಾರ್ ಚಂಡಮಾರುತದಿಂದಾಗಿ ಈ ಮಾರ್ಗಗಳಲ್ಲಿ ರದ್ದಾಗಿವೆ ಒಂದು ಡಜನ್ ರೈಲುಗಳು

'ನಿವಾರ್' ಚಂಡಮಾರುತದ ದೃಷ್ಟಿಯಿಂದ ನವೆಂಬರ್ 25 ಮತ್ತು 26 ರಂದು ದೇಶದ ದಕ್ಷಿಣ ರಾಜ್ಯಗಳಲ್ಲಿ ಸಂಚರಿಸುವ ಒಂದು ಡಜನ್ಗೂ ಹೆಚ್ಚು ವಿಶೇಷ ರೈಲುಗಳನ್ನು ರೈಲ್ವೆ ರದ್ದುಗೊಳಿಸಿದೆ.

Last Updated : Nov 26, 2020, 06:41 AM IST
  • ನವೆಂಬರ್ 25 ಮತ್ತು 26 ರಂದು ದೇಶದ ದಕ್ಷಿಣ ರಾಜ್ಯಗಳಲ್ಲಿ ಸಂಚರಿಸುವ ಒಂದು ಡಜನ್ಗೂ ಹೆಚ್ಚು ವಿಶೇಷ ರೈಲುಗಳನ್ನು ರೈಲ್ವೆ ರದ್ದುಗೊಳಿಸಿದೆ.
  • ಭಾರತೀಯ ರೈಲ್ವೆ ದಕ್ಷಿಣ ಭಾರತದ ಕೆಲವು ಪ್ರದೇಶದಿಂದ ಕನಿಷ್ಠ ಎಂಟು ರೈಲುಗಳನ್ನು ರದ್ದುಗೊಳಿಸಿದ್ದರೆ, ದಕ್ಷಿಣ ರೈಲ್ವೆ ಆರು ರೈಲುಗಳನ್ನು ರದ್ದುಗೊಳಿಸಿದೆ.
  • ಚೆನ್ನೈಗೆ ತೆರಳುವ ಮತ್ತು ಚೆನ್ನೈನಿಂದ ಹೊರಡುವ 26 ವಿಮಾನಗಳನ್ನು ರದ್ದುಪಡಿಸಲಾಗಿದೆ
ನಿವಾರ್ ಚಂಡಮಾರುತದಿಂದಾಗಿ ಈ ಮಾರ್ಗಗಳಲ್ಲಿ ರದ್ದಾಗಿವೆ ಒಂದು ಡಜನ್ ರೈಲುಗಳು  title=
File Image

ಬೆಂಗಳೂರು: 'ನಿವಾರ್' ಚಂಡಮಾರುತದ ದೃಷ್ಟಿಯಿಂದ ನವೆಂಬರ್ 25 ಮತ್ತು 26 ರಂದು ದೇಶದ ದಕ್ಷಿಣ ರಾಜ್ಯಗಳಲ್ಲಿ ಸಂಚರಿಸುವ ಒಂದು ಡಜನ್ಗೂ ಹೆಚ್ಚು ವಿಶೇಷ ರೈಲುಗಳನ್ನು ರೈಲ್ವೆ ರದ್ದುಗೊಳಿಸಿದೆ. ಭಾರತೀಯ ರೈಲ್ವೆ ದಕ್ಷಿಣ ಭಾರತದ ಕೆಲವು ಪ್ರದೇಶದಿಂದ ಕನಿಷ್ಠ ಎಂಟು ರೈಲುಗಳನ್ನು ರದ್ದುಗೊಳಿಸಿದ್ದರೆ, ದಕ್ಷಿಣ ರೈಲ್ವೆ (Southern Railway) ಆರು ರೈಲುಗಳನ್ನು ರದ್ದುಗೊಳಿಸಿದೆ. ರೈಲು ರದ್ದಾದ ಹಿನ್ನಲೆಯಲ್ಲಿ ಈ ರೈಲುಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವವರಿಗೆ ಸಂಪೂರ್ಣ ಶುಲ್ಕವನ್ನು ಮರುಪಾವತಿಸಲಾಗುವುದು ಎಂದು ರೈಲ್ವೆ ಸ್ಪಷ್ಟಪಡಿಸಿದೆ.

ಇದಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ಚೆನ್ನೈಗೆ (Chennai) ತೆರಳುವ ಮತ್ತು ಚೆನ್ನೈನಿಂದ ಹೊರಡುವ 26 ವಿಮಾನಗಳನ್ನು ರದ್ದುಪಡಿಸಲಾಗಿದೆ ಎಂದು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಚಂಡಮಾರುತದ ಪ್ರಭಾವ:
 'ನಿವಾರ್' ಚಂಡಮಾರುತ (Cyclone Nivar) ಅತ್ಯಂತ ತೀವ್ರವಾದ ಚಂಡಮಾರುತವಾಗಿ ಪರಿಣಮಿಸುತ್ತದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದ್ದು, ಇದು ಗುರುವಾರ ಬೆಳಿಗ್ಗೆ ಮೊದಲು ತಮಿಳುನಾಡು ಮತ್ತು ಪುದುಚೇರಿ ನಡುವೆ ಹಾದುಹೋಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಈ ಹಿನ್ನಲೆಯಲ್ಲಿ ಅನೇಕ ರೈಲುಗಳ ಕಾರ್ಯಾಚರಣೆಯನ್ನು ರದ್ದುಗೊಳಿಸುವುದಾಗಿ ಭಾರತೀಯ ರೈಲ್ವೆ (Indian Railways) ಘೋಷಿಸಿದೆ. ರದ್ದಾದ ರೈಲುಗಳ ನಿರ್ಗಮನ ಅಥವಾ ಗಮ್ಯಸ್ಥಾನಗಳಲ್ಲಿ ಭಾರಿ ಮಳೆ ಮತ್ತು ಚಂಡಮಾರುತಗಳಿಂದ ಪ್ರಭಾವಿತವಾಗಿರುತ್ತದೆ. ಹಾಗಾಗಿ ಇತರ ಕೆಲವು ಸ್ಥಳಗಳಲ್ಲಿನ ರೈಲು ಕಾರ್ಯಾಚರಣೆಯನ್ನು ಸಹ ರದ್ದುಪಡಿಸಲಾಗಿದೆ ಎಂದು ವಿವರಿಸಲಾಗಿದೆ.

Cyclone Nivar: ತಮಿಳುನಾಡು-ಪುದುಚೇರಿ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಮಾತು

ನವೆಂಬರ್ 26 ಕ್ಕೆ ರದ್ದುಪಡಿಸಲಾದ ರೈಲಿನ ವಿವರ: 
* ರೈಲು ಸಂಖ್ಯೆ 02066 (ಕಾರೈಕುಡ್ಡಿ-ಚೆನ್ನೈ ಎಗ್ಮೋರ್-ಕಾರೈಕುಡ್ಡಿ ಸ್ಪೆಷಲ್ಸ್)
* ರೈಲು ಸಂಖ್ಯೆ 02636/02635 (ಮಧುರೈ-ಚೆನ್ನೈ ಎಗ್ಮೋರ್-ಮಧುರೈ ಸ್ಪೆಷಲ್ಸ್)
* ರೈಲು ಸಂಖ್ಯೆ 06795/06976 (ಚೆನ್ನೈ ಎಗ್ಮೋರ್-ತಿರುಚಿರಾಪಲ್ಲಿ-ಚೆನ್ನೈ)
* ರೈಲು ಸಂಖ್ಯೆ 06231 (ಮಯಿಲಾಡುತುರೈ-ಮೈಸೂರು ವಿಶೇಷ) ಮೈಲಾಡುತುರೈ ಮತ್ತು ತಿರುಚಿರಾಪಳ್ಳಿ ನಡುವೆ ಚಲಿಸುವ ರೈಲುಗಳು ಭಾಗಶಃ ರದ್ದುಗೊಂಡಿದೆ ಮತ್ತು ತಿರುಚಿರಾಪಳ್ಳಿ ಮತ್ತು ಮೈಸೂರು (Mysuru) ನಡುವೆ ಚಲಿಸುತ್ತದೆ.
* ರೈಲು ಸಂಖ್ಯೆ 06187 (ಕರೈಕ್ಕಲ್-ಎರ್ನಾಕುಲಂ ವಿಶೇಷ) ಕಾರೈಕ್ಕಲ್ ಮತ್ತು ತಿರುಚಿರಾಪಳ್ಳಿ ನಡುವೆ ಭಾಗಶಃ ರದ್ದುಗೊಂಡಿದೆ ಮತ್ತು ತಿರುಚಿರಾಪಳ್ಳಿ ಮತ್ತು ಎರ್ನಾಕುಲಂ ನಡುವೆ ಚಲಿಸುತ್ತದೆ.
* ರೈಲು ಸಂಖ್ಯೆ 02083/02084 (ಕೊಯಮತ್ತೂರು-ಮಯಿಲಾಡುತುರೈ-ಕೊಯಮತ್ತೂರು) ತಿರುಚಿರಪ್ಪಳ್ಳಿ ಮತ್ತು ಮಯಿಲಾಡುತುರೈ ನಡುವೆ ಭಾಗಶಃ ರದ್ದಾದ ಜಾನ್ ಶತಾಬ್ದಿ ಸ್ಪೆಷಲ್ಸ್ ಕೊಯಮತ್ತೂರು ಮತ್ತು ತಿರುಚಿರಾಪಳ್ಳಿ ನಡುವೆ ಚಲಿಸುತ್ತದೆ.
* ರೈಲು ಸಂಖ್ಯೆ. 06075/06076 (ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್ಆರ್ ಬೆಂಗಳೂರು-ಎಂಜಿಆರ್ ಚೆನ್ನೈ ಸೆಂಟ್ರಲ್) ಡಬಲ್ ಡೆಕ್ಕರ್ ಮತ್ತು 02607/02608 (ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್ಆರ್ ಬೆಂಗಳೂರು-ಎಂಜಿಆರ್ ಚೆನ್ನೈ ಸೆಂಟ್ರಲ್) ಫೆಸ್ಟಿವಲ್ ಸ್ಪೆಷಲ್ ರೈಲು ನವೆಂಬರ್ 26ಕ್ಕೆ ರದ್ದುಗೊಂಡಿದೆ

3 ದಿನ ರಾಜ್ಯದಲ್ಲಿ ಭಾರಿ ಮಳೆ: ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್!

ಚಂಡಮಾರುತದ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿರುವ ರೈಲುಗಳ ಟಿಕೆಟ್ ಕ್ಯಾನ್ಸಲ್ ಮಾಡುವವರಿಗೆ ಸಂಪೂರ್ಣ ಶುಲ್ಕವನ್ನು ಮರುಪಾವತಿಸಲಾಗುವುದು. ಇದಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಪ್ರಯಾಣ ದಿನಾಂಕದಿಂದ ಆರು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.

Trending News