ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಸಂಭ್ರಮ : ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಭಾರತಕ್ಕೆ ೭೫ನೇ ಸ್ವಾತಂತ್ರ್ಯೋತ್ಸವ ಸಂಭ್ರಮ. ದೇಶದೆಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿದೆ. ಕೆಂಪು ಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರು.

Written by - Ranjitha R K | Last Updated : Aug 15, 2021, 10:15 AM IST
  • ಭಾರತಕ್ಕೆ ೭೫ನೇ ಸ್ವಾತಂತ್ರ್ಯೋತ್ಸವ ಸಂಭ್ರಮ
  • ಕೆಂಪು ಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಧ್ವಜಾರೋಹಣ
  • 8 ನೇ ಬಾರಿಗೆ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಮೋದಿ
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಸಂಭ್ರಮ : ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ  title=
75th independenceday (Photo ANI)

ನವದೆಹಲಿ : ಭಾರತಕ್ಕೆ ೭೫ನೇ ಸ್ವಾತಂತ್ರ್ಯೋತ್ಸವ ಸಂಭ್ರಮ. ದೇಶದೆಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿದೆ. ಕೆಂಪು ಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರು.  ನರೇಂದ್ರ ಮೋದಿ 8 ನೇ ಬಾರಿಗೆ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. 

ಧ್ವಜಾರೋಹಣ ನೆರವೇರಿಸಿದ ನಂತರ ಪ್ರಧಾನಿ ಮೋದಿ (PM Modi), ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಷಯ ಕೋರಿದರು.  

ವಿಭಜನ್ ವಿಭಿಷಕ್ ಸ್ಮೃತಿ ದಿನ : 

ಸ್ವಾತಂತ್ರ್ಯಗೊಂಡ ಸಂತಸದ ನಡುವೆ ದೇಶವಿಭಾಜನೆಯಾದ ದುಃಖವು ಇದೆ ಎಂದು ಮೋದಿ ಹೇಳಿದ್ದಾರೆ.  ಇನ್ನು ಮುಂದೆ ಆಗಸ್ಟ್ 14 ಅನ್ನು ವಿಭಜನ್ ವಿಭಿಷಕ್ ಸ್ಮೃತಿ ದಿನವನ್ನಾಗಿ ಆಚರಿಸಲಾಗುವುದು ಎಂದು ಹೇಳಿದ್ದಾರೆ.  ವಿಭಜನೆ ವೇಳೆ ಪ್ರಾಣ ಕಳೆದುಕೊಂಡವರ ಅಂತ್ಯ ಸಂಸ್ಕಾರಕ್ಕೂ ಅವಕಾಶ ಸಿಕ್ಕಿರಲಿಲ್ಲ. ಈ ದಿನ ಅವರ ನೆನಪಿನಲ್ಲಿ  ಆಚರಿಸಲಾಗುವುದು ಎಂದು ಹೇಳಿದರು. 

ಸೈನಿಕ ಶಾಲೆಯಲ್ಲಿ ಹೆಣ್ಣು ಮಕ್ಕಳಿಗೂ ಪ್ರವೇಶ :
ಹೆಣ್ಣು ಮಕ್ಕಳಿಗೂ ಸೈನಿಕ ಶಾಲೆಗಳಲ್ಲಿ ಓದುವ ಸ್ವಾತಂತ್ರ್ಯವಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಇದೇ ವೇಳೆ ದೇಶದಲ್ಲಿನ ಹಳೆಯ ಕಾನೂನುಗಳನ್ನು ರದ್ದುಗೊಳಿಸುವ ಕುರಿತಾಗಿ  ಮಾತನಾಡಿರುವ ಮೋದಿ, ದೇಶವು ಕ್ಷಿಪ್ರಗತಿಯಲ್ಲಿ ಮುಂದೆ ಸಾಗುತ್ತಿದೆ ಎಂದು ಹೇಳಿದ್ದಾರೆ. 

 

ಇದನ್ನೂ ಓದಿ : ವಿಶ್ವದ 50 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದ ಭಾರತದ ಈ ನಗರ..!

ಪದಕ ವಿಜೇತ ಕ್ರೀಡಾಪಟುಗಳಿಗೆ ಅಭಿನಂದನೆ:

ಒಲಿಂಪಿಕ್ ನಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಎಲ್ಲಾ ಕ್ರೀಡಾಪಟುಗಳಿಗೆ ಗೌರವ ಸಲ್ಲಿಸಿದರು. ಈ ಕ್ರೀಡಾಪಟುಗಳು ಮುಂದಿನ ಪೀಳಿಗೆಗೂ ಮಾದರಿ ಎಂದು ಹೇಳಿದರು. 

ಕರೋನಾದ ಈ ಅವಧಿಯು ಇಡೀ ಮಾನವ ಜನಾಂಗದ ಮುಂದೆ, ದೊಡ್ಡ ಸವಾಲಾಗಿ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತದ ಜನರು ಈ ಯುದ್ಧದೊಂದಿಗೆ ಸಂಯಮ ಮತ್ತು ತಾಳ್ಮೆಯಿಂದ ಹೋರಾಡಿದ್ದಾರೆ ಎಂದರು.

ಕರೋನಾ (Coronavirus) ಹಿನ್ನೆಲೆಯಲ್ಲಿ ಈ ಬಾರಿ ಕೇವಲ 1,500 ಮಂದಿಗೆ ಮಾತ್ರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆ.

ಇದನ್ನೂ ಓದಿ PM Kisan ಯೋಜನೆಯ 9ನೇ ಕಂತು: ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಸಿಗುತ್ತಿಲ್ಲವೇ? ಹಾಗಿದ್ರೆ ಏನು ಮಾಡಬೇಕು? ಇಲ್ಲಿದೆ ನೋಡಿ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News