ಆಂಧ್ರ ಪೊಲೀಸರಿಂದ 280 ಕೆಜಿ ಗಾಂಜಾ ವಶ

ಪೊಲೀಸರು ಪೊಟ್ಟಿಪಾಡು ಟೋಲ್ ಪ್ಲಾಜಾದಲ್ಲಿ ವಾಹನಗಳನ್ನು ಪರಿಶೀಲಿಸುವ ವೇಳೆ ಟೆಂಪೊ ಮಿನಿ ಬಸ್‌ನಲ್ಲಿ 240 ಕೆಜಿ ಗಾಂಜಾ ಪತ್ತೆಯಾಗಿದೆ.

Last Updated : Oct 17, 2019, 01:44 PM IST
ಆಂಧ್ರ ಪೊಲೀಸರಿಂದ 280 ಕೆಜಿ ಗಾಂಜಾ ವಶ title=
Photo credits: ANI

ಕೃಷ್ಣ (ಆಂಧ್ರಪ್ರದೇಶ): ಎರಡು ವಿಭಿನ್ನ ವಾಹನಗಳಿಂದ ಆಂಧ್ರಪ್ರದೇಶ ಪೊಲೀಸರು 280 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರನ್ನು ಕೃಷ್ಣ ಜಿಲ್ಲೆಯ ಗನ್ನವರಂನಲ್ಲಿ ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

"ಪೊಲೀಸರು ಪೊಟ್ಟಿಪಾಡು ಟೋಲ್ ಪ್ಲಾಜಾದಲ್ಲಿ ವಾಹನಗಳನ್ನು ಪರಿಶೀಲಿಸುವ ವೇಳೆ ಟೆಂಪೊ ಮಿನಿ ಬಸ್‌ನಲ್ಲಿ 240 ಕೆಜಿ ಗಾಂಜಾ ಪತ್ತೆಯಾಗಿದೆ. ಈ ಸಂಬಂಧ ವಿಚಾರಣೆಗಾಗಿ ಬಸ್‌ನಲ್ಲಿದ್ದ ಹತ್ತು ಜನರನ್ನು ವಶಕ್ಕೆ ಪಡೆದಿರುವುದಾಗಿ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ತಿಳಿಸಿದ್ದಾರೆ.

ಇದಲ್ಲದೆ ಪರಿಶೀಲನೆ ಸಂದರ್ಭದಲ್ಲಿ ಆರ್‌ಟಿಸಿ ಬಸ್‌ನಲ್ಲಿ 40 ಕೆಜಿ ಗಾಂಜಾವನ್ನು ಪೊಲೀಸರು ಪತ್ತೆ ಮಾಡಿದ್ದು, ಈ ಸಂಬಂಧ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ತನಿಖೆ ಪ್ರಾರಂಭಿಸಿರುವ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Trending News