ಸಂಸತ್ ಮೇಲಿನ ದಾಳಿಗೆ 16 ವರ್ಷ, ಹುತಾತ್ಮರ ಸ್ಮರಿಸಿದ ಪ್ರಧಾನಿ

     

Last Updated : Dec 13, 2017, 06:38 PM IST
ಸಂಸತ್ ಮೇಲಿನ ದಾಳಿಗೆ 16 ವರ್ಷ, ಹುತಾತ್ಮರ ಸ್ಮರಿಸಿದ ಪ್ರಧಾನಿ  title=

ನವದೆಹಲಿ: 2001ರ ಪಾರ್ಲಿಮೆಂಟ ಮೇಲಿನ ದಾಳಿಗೆ 16 ವರ್ಷ ತುಂಬಿದ ನಿಮಿತ್ತ  ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮ್ ನಾಥ್ ಕೊವಿಂದ ಮೊದಲಾದ ಗಣ್ಯರು ಉಗ್ರರ ದಾಳಿಗೆ ಬಲಿಯಾದವರನ್ನು ಇಲ್ಲಿ ಸ್ಮರಿಸಲಾಯಿತು.

ಈ ದಿನದದಂದು ಹುತಾತ್ಮರ ಸ್ಮರಣೆ ಮಾಡಿರುವ ರಾಷ್ಟ್ರಪತಿಗಳು ಟ್ವೀಟ್ ಮಾಡಿ" ಉಗ್ರರ ದಾಳಿಯಿಂದ ಈ ಸಂಸತ್ತನ್ನು 16 ವರ್ಷಗಳ ಹಿಂದೆ ಈ ಹುತಾತ್ಮರು ಕಾಪಾಡಿದ್ದಾರೆ. ಭಾರತದ ಪ್ರಜಾಪ್ರಭುತ್ವ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳಿಗೆ ತಡೆಯೊಡ್ಡುವ ನಿಟ್ಟಿನಲ್ಲಿ ಈ ಶಕ್ತಿಗಳು ನಿರಂತರವಾಗಿ  ಪ್ರಯತ್ನಿಸುತ್ತಿವೆ, ಆದ್ದರಿಂದ ಅಂತಹ ಶಕ್ತಿಗಳನ್ನು ಯಶಸ್ವಿಯಾಗಲು ಬಿಡಬಾರದು ಎಂದು ಅವರು ತಿಳಿಸಿದ್ದಾರೆ. ಇದೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾತನಾಡಿ ಪ್ರಜಾಪ್ರಭುತ್ವದ ದೇಗುಲವನ್ನು  ರಕ್ಷಿಸಲು ಪ್ರಾಣ ತೆತ್ತಿರುವ ಎಲ್ಲ ಮಹಾತ್ಮರನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಅವರು ಹೇಳಿದರು.

 

ಕಾರ್ಯಾಕ್ರಮದಲ್ಲಿ ಕೇಂದ್ರಮಂತ್ರಿಗಳು ಹಾಗೂ ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಮತ್ತು  ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅದ್ವಾನಿ ,ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧೀ ಕಾರ್ಯಕ್ರಮದಲ್ಲಿ ಹಾಜರಿದ್ದರು.

Trending News