ಗುಜರಾತಿನ 'ಗಿರ್' ಅರಣ್ಯದಲ್ಲಿ 11 ದಿನಗಳಲ್ಲಿ 11 ಸಿಂಹಗಳ ಸಾವು!

ಕಳೆದ 11 ದಿನಗಳಲ್ಲಿ ಕನಿಷ್ಠ 11 ಸಿಂಹಗಳು ಗಿರ್ ಕಾಡಿನಲ್ಲಿ ಮೃತಪಟ್ಟಿವೆ,ಈಗ ರಾಜ್ಯ ಸರ್ಕಾರವು ತನಿಖೆಗೆ ಆದೇಶಿಸಿದೆ.

Last Updated : Sep 22, 2018, 11:57 AM IST
ಗುಜರಾತಿನ 'ಗಿರ್' ಅರಣ್ಯದಲ್ಲಿ 11 ದಿನಗಳಲ್ಲಿ 11 ಸಿಂಹಗಳ ಸಾವು!  title=

ಜುನಾಗಡ್: ಕಳೆದ 11 ದಿನಗಳಲ್ಲಿ ಕನಿಷ್ಠ 11 ಸಿಂಹಗಳು ಗಿರ್ ಕಾಡಿನಲ್ಲಿ ಮೃತಪಟ್ಟಿವೆ,ಈಗ ರಾಜ್ಯ ಸರ್ಕಾರವು ತನಿಖೆಗೆ ಆದೇಶಿಸಿದೆ.

ಪಿಸಿಸಿಎಫ್ ವನ್ಯಜೀವಿ ಎ.ಕೆ. ಸಕ್ಸೇನಾ ಅವರು ಗಿರ್ ಅರಣ್ಯಕ್ಕೆ ಧಾವಿಸಿ, ಹೆಚ್ಚಿನ ಸಾವುಗಳು ಅಂತಃಕಲಹದಿಂದಾಗಿ ಸಂಭವಿಸಿವೆ ಎಂದು ಹೇಳಿದ್ದಾರೆ. ಈಗ ಅರಣ್ಯದ ಪ್ರಮುಖ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಯಿಂದ ತನಿಖೆಯನ್ನು ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ .

ಆದಾಗ್ಯೂ, ಗಿರ್ ಅರಣ್ಯ ವೈಧ್ಯಾಧಿಕಾರಿ ಹಿತೆಶ್ ವಮ್ಜಾ ಅವರು "ಶ್ವಾಸಕೋಶದ ಸೋಂಕಿನಿಂದಾಗಿ ಬಹುತೇಕ ಸಿಂಹಗಳು ಮೃತಪಟ್ಟಿವೆ.ಉಳಿದ ಸಿಂಹಗಳನ್ನು ಸೂಕ್ತ ವೈದ್ಯಕೀಯ ಆರೈಕೆಯಿಂದ ರಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ." ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಗಾಳಿಯಿಂದ ಹರಡುವ ಈ ರೋಗವನ್ನು ಉಳಿದ ಸಿಂಹಗಳಿಗೆ ಹರಡದಂತೆ ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ, ಆದ್ದರಿಂದ ಚಿಂತಿಸುವ ಅಗತ್ಯವಿಲ್ಲ" ಎಂದು ಹೇಳಿದರು.

ಸಿಂಹಗಳ ಸಾವಿನ ಪ್ರಕರಣದ ಬಗ್ಗೆ ತಿಳಿಸಿರುವ ವಿ.ಎಂ. ಅರಣ್ಯದ ಸಹಾಯಕ ಸಂರಕ್ಷಣಾಧಿಕಾರಿ ಚೌಧರಿ, "ಅಧಿಕಾರಿಗಳು ಮೃತಪಟ್ಟಿರುವ ಸಿಂಹಗಳ ಒಳಾಂಗಗಳ ಮಾದರಿಗಳನ್ನು ಸಂಗ್ರಹಿಸಿದ್ದಾರೆ ಮತ್ತು ಅವರನ್ನು ಜುನಾಗಡ್ ಪಶುವೈದ್ಯ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆ ಮೂಲಕ ನಾವು ಸಿಂಹಗಳಿಗೆ ಹರಡಿರುವ ಬ್ಯಾಕ್ಟೀರಿಯಾ ಮತ್ತು ವೈರಸ್ ತಿಳಿಯಬಹುದು ಮತ್ತು ಉಳಿದಿರುವ ಸಿಂಹಗಳನ್ನು ಉಳಿಸಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಸಿಂಹದ ಮೃತ ದೇಹಗಳು ಗಿರ್ (ಪೂರ್ವ) ವಿಭಾಗದಲ್ಲಿ ಕಂಡುಬಂದಿವೆ, ಮುಖ್ಯವಾಗಿ ದಲ್ಖಾನಿಯ ವ್ಯಾಪ್ತಿಯಿಂದ ಅಮ್ರೆಲಿ ಜಿಲ್ಲೆಯ ರಾಜುಲಾ ಸಮೀಪದ ಕಾಡಿನಲ್ಲಿ ಸಿಂಹಗಳ ಮೃತದೇಹ ಪತ್ತೆಯಾಗಿದೆ. ಅದೇ ವೇಳೆಗೆ ಗಿರ್ ಕಾಡಿನಲ್ಲಿರುವ ದಲ್ಖಾನಿಯ ಶ್ರೇಣಿ ಪ್ರದೇಶದಲ್ಲಿ ಮೂರು ಸಿಂಹಗಳು ಮೃತಪಟ್ಟಿವೆ. ಕಳೆದ ಕೆಲವು ದಿನಗಳಲ್ಲಿ ಏಳು ಸಿಂಹಗಳ ಮೃತಪಟ್ಟಿವೆ ಎನ್ನಲಾಗಿದೆ.

2015 ರ ಜನಗಣತಿಯ ಪ್ರಕಾರ, ಗಿರ್ ಅರಣ್ಯದಲ್ಲಿ 520 ಸಿಂಹಗಳಿವೆ.

Trending News