ಆಗಾಗ ಕಾಣಿಸಿಕೊಳ್ಳುವ ಹೊಟ್ಟೆಯ ಸಮಸ್ಯೆಗೆ ಈ ಮನೆ ಮದ್ದುಗಳನ್ನು ಬಳಸಿ ನೋಡಿ

ಎಳನೀರು ದೇಹದಲ್ಲಿ ದ್ರವ ಸಮತೋಲನವನ್ನು ಸರಿಯಾಗಿರಿಸುತ್ತದೆ ಮತ್ತು ಇದು ರಕ್ತ ಪರಿಚಲನೆಯನ್ನು  ಹೆಚ್ಚಿಸುತ್ತದೆ. ಇದರೊಂದಿಗೆ, ಇದರಲ್ಲಿರುವ ಅನೇಕ ಅಂಶಗಳು ಹೊಟ್ಟೆ ಕೆಡದಂತೆ ಸರಿಯಾಗಿರಿಸುತ್ತದೆ.  

Written by - Ranjitha R K | Last Updated : Sep 5, 2021, 12:22 PM IST
  • ಪ್ರತಿ ದಿನವೂ ಹೊಟ್ಟೆ ನೋವಿನ ಸಮಸ್ಯೆ ಎದುರಿಸುವವರು ಇದ್ದಾರೆ.
  • ಆಗಾಗ್ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುವುದರ ಹಿಂದಿನ ಕಾರಣ
  • ಹೊಟ್ಟೆ ನೋವಿಗೆ ಈ ಮನೆಮದ್ದುಗಳನ್ನು ಬಳಸಿ ನೋಡಿ
ಆಗಾಗ ಕಾಣಿಸಿಕೊಳ್ಳುವ ಹೊಟ್ಟೆಯ ಸಮಸ್ಯೆಗೆ ಈ ಮನೆ ಮದ್ದುಗಳನ್ನು ಬಳಸಿ ನೋಡಿ  title=
ಆಗಾಗ್ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುವುದರ ಹಿಂದಿನ ಕಾರಣ (file photo)

ನವದೆಹಲಿ : ಪ್ರತಿ ದಿನವೂ ಹೊಟ್ಟೆ ನೋವಿನ ಸಮಸ್ಯೆ ಎದುರಿಸುವವರು ಇದ್ದಾರೆ. ಇದ್ದ ಬದ್ದ ಆಹಾರ ತಿನ್ನುವುದು ಮತ್ತು ನಮ್ಮ ಲೈಫ್ ಸ್ಟೈಲ್ (Lifestyle) ಕೂಡಾ ಇದಕ್ಕೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ಆಗಾಗ್ಗೆ ಹೊಟ್ಟೆ ನೋವು (Stamoch ache), ಹೊಟ್ಟೆ ಉಬ್ಬರದಂಥ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಕಾರಣವೇನು? ಅದನ್ನು ಹೇಗೆ ತಪ್ಪಿಸಬಹುದು ಎನ್ನುವುದನ್ನು ನೋಡೋಣ. 

ಆಗಾಗ್ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುವುದರ ಹಿಂದಿನ ಕಾರಣ : 
- ಕಲುಷಿತ ಆಹಾರ ಅಥವಾ ನೀರು (Water) ಸೇವನೆ 
-ವೈರಲ್ ಸೋಂಕುಗಳಾದ ಹೆಪಟೈಟಿಸ್, ನೊರೊವೈರಸ್ ಅಥವಾ ರೋಟವೈರಸ್
- ಇರಿಟೇಬಲ್ ಬೌಲ್ ಸಿಂಡ್ರೋಮ್  
- ಫುಡ್ ಅಲರ್ಜಿ (Food alergy) 
- ಫುಡ್ ಪೋಯಿಸನ್ 
- ಯಕೃತ್ತು ವೈಫಲ್ಯ

ಇದನ್ನೂ ಓದಿ : Weight Loss:ಕರಿಮೆಣಸಿನ ಈ ಚಹಾ ತೂಕ ಇಳಿಕೆಗೆ ರಾಮಬಾಣ, ಈ ರೀತಿ ತಯಾರಿಸಿ

ಹೊಟ್ಟೆ ನೋವಿಗೆ ಈ ಮನೆಮದ್ದುಗಳನ್ನು ಬಳಸಿ ನೋಡಿ : 
ಎಳನೀರು :
ಎಳನೀರು (Tender coconut) ದೇಹದಲ್ಲಿ ದ್ರವ ಸಮತೋಲನವನ್ನು ಸರಿಯಾಗಿರಿಸುತ್ತದೆ ಮತ್ತು ಇದು ರಕ್ತ ಪರಿಚಲನೆಯನ್ನು (Blood circulation)  ಹೆಚ್ಚಿಸುತ್ತದೆ. ಇದರೊಂದಿಗೆ, ಇದರಲ್ಲಿರುವ ಅನೇಕ ಅಂಶಗಳು ಹೊಟ್ಟೆ ಕೆಡದಂತೆ ಸರಿಯಾಗಿರಿಸುತ್ತದೆ.

ಮೊಸರು:
ಕರಿಮೆಣಸು (Black Pepper) ಮತ್ತು ಒಂದು ಚಿಟಿಕೆ ಉಪ್ಪು ಬೆರೆಸಿದ ಮೊಸರನ್ನು (Curd) ತಿನ್ನುವುದರಿಂದ, ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿರುತ್ತದೆ ಮತ್ತು ಹೊಟ್ಟೆಯ ಸಮಸ್ಯೆಗಳು ಇರುವುದಿಲ್ಲ. ಮೊಸರಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ. ಇದು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : ಸೂರ್ಯಾಸ್ತದ ನಂತರ ಹಣ್ಣುಗಳನ್ನು ಯಾಕೆ ತಿನ್ನಲೇಬಾರದು ಎನ್ನುವುದು ತಿಳಿದೆದೆಯಾ ? ಇಂದೇ ಬಿಟ್ಟು ಬಿಡಿ ಈ ಅಭ್ಯಾಸ

ಜೀರಿಗೆ ನೀರು: 
ಪ್ರತಿದಿನ ಬೆಳಿಗ್ಗೆ 1 ಕಪ್ ಜೀರಿಗೆ (Cumin Water) ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹೀಗೆ ಖಾಲಿ ಹೊಟ್ಟೆಗೆ ಜೀರಿಗೆ ನೀರು ಸೇವಿಸಿದರೆ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದರ ನಂಜುನಿರೋಧಕ ಗುಣಗಳು ಬ್ಯಾಕ್ಟೀರಿಯಾವನ್ನು ನಿವಾರಿಸಿ ಕರುಳಿಗೆ ಹಾನಿಯಾಗುವುದನ್ನು ತಡೆಯುತ್ತದೆ. 

ಶುಂಠಿ :
ಶುಂಠಿಯು (Ginger) ಹೊಟ್ಟೆ ನೋವಿಗೆ ಸಹ ಬಹಳ ಪರಿಣಾಮಕಾರಿ. ಇದಕ್ಕಾಗಿ 1 ಗ್ಲಾಸ್ ಹಾಲಿನಲ್ಲಿ ಒಂದು ಚಮಚ ಶುಂಠಿಯ ಪುಡಿಯನ್ನು ಬೆರೆಸಿ ಮಲಗುವ ಮುನ್ನ ಕುಡಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News