Weight loss Soup: ಈ ಸೂಪ್ ಗಳನ್ನು ಸೇವಿಸುವುದರಿಂದ ಅತೀ ಕಡಿಮೆ ಸಮಯದಲ್ಲಿ ತೂಕ ನಷ್ಟ ಮಾಡಿಕೊಳ್ಳಬಹುದು

Weight loss Soup : ಕೆಲವು ಸೂಪ್‌ಗಳು ತೂಕವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿರುತ್ತದೆ.  ನಿಮ್ಮ ಆಹಾರದಲ್ಲಿ ಸೂಪ್ ಅನ್ನು ಸೇರಿಸಿದರೆ, ನಿಮ್ಮ ತೂಕವನ್ನು ಖಂಡಿತವಾಗಿ ಕಡಿಮೆ ಮಾಡಬಹುದು. ಅಂತಹ ಸೂಪ್‌ಗಳು ಯಾವುವು ತಿಳಿಯೋಣ.

Written by - Ranjitha R K | Last Updated : Apr 16, 2022, 03:49 PM IST
  • ಎಲೆಕೋಸು ಸೂಪ್ ತೂಕ ಕಡಿಮೆ ಮಾಡಳು ಸಹಾಯ ಮಾಡುತ್ತದೆ
  • ಬೇಳೆ, ಕುಂಬಳಕಾಯಿ ಸೂಪ್ ಕೂಡ ತೂಕ ನಷ್ಟಕ್ಕೆ ತುಂಬಾ ಉಪಯುಕ್ತ
  • ಚಿಕನ್ ಸೂಪ್ ಸಹ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
Weight loss Soup: ಈ ಸೂಪ್ ಗಳನ್ನು ಸೇವಿಸುವುದರಿಂದ ಅತೀ ಕಡಿಮೆ ಸಮಯದಲ್ಲಿ ತೂಕ ನಷ್ಟ ಮಾಡಿಕೊಳ್ಳಬಹುದು  title=
Weight loss Soup (file photo)

ಬೆಂಗಳೂರು : Weight loss Soup : ತೂಕವನ್ನು ಕಡಿಮೆ ಮಾಡಲು ಹಲವು ಮಾರ್ಗಗಳಿವೆ. ಆದರೆ ಈ ಎಲ್ಲಾ ಪ್ರಯತ್ನಗಳ ನಂತರವೂ, ಕೆಲವರು ತೂಕವನ್ನು ಕಳೆದುಕೊಳ್ಳುವುದಿಲ್ಲ. ಏಕೆಂದರೆ ಅವರು ತಮ್ಮ ಆಹಾರ ಕ್ರಮವನ್ನು ಬದಲಾಯಿಸುವುದಿಲ್ಲ. ಕೆಲವು ಸೂಪ್‌ಗಳ ಸಹಾಯದಿಂದ ತೂಕವನ್ನು ಕಡಿಮೆ ಮಾಡಬಹುದು.  

ಎಲೆಕೋಸು ಸೂಪ್ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ :  
ಎಲೆಕೋಸು ಸೂಪ್  ಸೇವನೆಯಿಂದ ತೂಕವನ್ನು ಕಡಿಮೆ ಮಾಡಬಹುದು. ಈ ಸೂಪ್ ಮಾಡುವುದು ಕೂಡ ಸುಲಭ. ಪ್ರೋಟೀನ್, ಫೈಬರ್, ವಿಟಮಿನ್ ಕೆ, ಸಿ ಮತ್ತು ಬಿ 6 ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು ಹೇರಳವಾಗಿ ಕಂಡುಬರುತ್ತವೆ.  ಇದರ ಸೇವನೆಯು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : ಖಾಲಿ ಹೊಟ್ಟೆಗೆ ಈ ಹಣ್ಣುಗಳನ್ನು ಸೇವಿಸುವುದು ಅಪಾಯಕಾರಿ..!

ಬೇಳೆ  ಮತ್ತು ಕುಂಬಳಕಾಯಿ ಸೂಪ್  : 
ಬೇಳೆ ಮತ್ತು ಕುಂಬಳಕಾಯಿ ಸೂಪ್ ಕೂಡ ತೂಕ ನಷ್ಟಕ್ಕೆ ತುಂಬಾ ಉಪಯುಕ್ತವಾಗಿದೆ. ಬೇಳೆ ಮತ್ತು ಕುಂಬಳಕಾಯಿಯನ್ನು  ಬೆರೆಸಿ ಸೂಪ್ ಮಾಡಿದರೆ, ಈ ಸೂಪ್ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಾಸ್ತವವಾಗಿ, ಸಾಕಷ್ಟು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳು ಬೇಳೆ ಮತ್ತು ಕುಂಬಳಕಾಯಿಯಲ್ಲಿ ಕಂಡುಬರುತ್ತವೆ. 

ಚಿಕನ್ ಸೂಪ್ :
ಚಿಕನ್ ಸೂಪ್ ಸಹ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಮೊದಲು  ಚಿಕನ್ ಅನ್ನು ಚೆನ್ನಾಗಿ ಬೇಯಿಸಬೇಕು. ನಂತರ ಅದನ್ನು ಪ್ರೆಶರ್ ಕುಕ್ಕರ್‌ನಲ್ಲಿ ಹಾಕಿ ಮತ್ತು ಪಲಾವ್ ಎಲೆ ಮತ್ತು ಹಸಿ ಮೆಣಸಿನಕಾಯಿಯನ್ನು ಫ್ರೈ ಮಾಡಿ, ಈರುಳ್ಳಿಯನ್ನು  ಸೇರಿಸಿ. ಇವೆಲ್ಲವನ್ನೂ ಚೆನ್ನಾಗಿ ಬೇಯಿಸಿದ ನಂತರ, ಉಪ್ಪು ಮತ್ತು ಸ್ವಲ್ಪ ಪ್ರಮಾಣದ ಆಮ್ಚೂರ್ ಪುಡಿಯನ್ನು ಕೂಡ ಸೇರಿಸಬಹುದು. 

ಇದನ್ನೂ ಓದಿ : Junk Food Effects : ಆರೋಗ್ಯಕ್ಕೆ ಹಾನಿಕಾರಕ ಜಂಕ್ ಫುಡ್ : ತಿನ್ನುವ ಮುನ್ನ ಎಚ್ಚರ!

ಪನೀರ್ ಮತ್ತು ಪಾಲಕ ಸೂಪ್ :
ಪನೀರ್ ಮತ್ತು ಪಾಲಕ್ ಸೂಪ್ ಕೂಡ ತೂಕವನ್ನು ಕಡಿಮೆ ಮಾಡಳು ಸಹಾಯ ಮಾಡುತ್ತದೆ.   ಪಾಲಕದಲ್ಲಿ ಆಂಟಿ ಒಕ್ಸಿಡೆಂಟ್ ಗುಣಗಳನ್ನು ಹೊಂದಿರುತ್ತದೆ. ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಪ್ರೋಟೀನ್, ಕಬ್ಬಿಣ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದು ತೂಕವನ್ನು ಸಹ ಕಡಿಮೆ ಮಾಡಬಹುದು.

ಬಟಾಣಿ ಮತ್ತು ಕ್ಯಾರೆಟ್ ಸೂಪ್ :
ಬಟಾಣಿ ಮತ್ತು ಕ್ಯಾರೆಟ್ ಸೂಪ್ ಕೂಡ ನಿಮ್ಮ ತೂಕವನ್ನು ಕಡಿಮೆ ಮಾಡುತ್ತದೆ. ಕ್ಯಾರೆಟ್‌ನಲ್ಲಿ  ವಿಟಮಿನ್-ಎ  ಕಂಡುಬರುತ್ತದೆ. ಇದು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರೊಂದಿಗೆ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕಬ್ಬಿಣವು ಬಟಾಣಿಯಲ್ಲಿ  ಕಂಡುಬರುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಮಾತ್ರವಲ್ಲ ತೂಕವನ್ನು ಕಡಿಮೆ ಮಾಡಲು ಸಹ ಉಪಯುಕ್ತವಾಗಿದೆ. 

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News