ತ್ವಚೆ ಮತ್ತು ಕೇಶ ಸೌಂದರ್ಯಕ್ಕಾಗಿ ದುಬಾರಿ ಪ್ರಾಡಕ್ಟ್ ಬದಲು ಕಾಫಿಯನ್ನು ಹೀಗೆ ಬಳಸಿ

Face And Hair Care From Coffee:ನಿಮ್ಮ ಅಡುಗೆ ಮನೆಯಲ್ಲಿರುವ ಕಾಫಿಯು ಅನೇಕ ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತದೆ. ಇದರ ನೈಸರ್ಗಿಕ ಗುಣಗಳು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. 

Written by - Ranjitha R K | Last Updated : Aug 2, 2023, 10:58 AM IST
  • ಹೆಚ್ಚಿನವರಿಗೆ ಬೆಳಿಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಬೇಕೇ ಬೇಕು
  • ಕೆಲವರಿಗೆ ಇದೊಂದು ರೀತಿ ಎನರ್ಜಿ ಬೂಸ್ಟರ್ ನಂತೆ ಕೆಲಸ ಮಾಡುತ್ತದೆ.
  • ಕಾಫಿಯು ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತದೆ
ತ್ವಚೆ ಮತ್ತು ಕೇಶ ಸೌಂದರ್ಯಕ್ಕಾಗಿ ದುಬಾರಿ ಪ್ರಾಡಕ್ಟ್ ಬದಲು ಕಾಫಿಯನ್ನು ಹೀಗೆ ಬಳಸಿ title=

Face And Hair Care From Coffee : ಹೆಚ್ಚಿನವರಿಗೆ  ಬೆಳಿಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಬೇಕೇ ಬೇಕು. ನಿದ್ದೆಯ ಮಂಪರಿನಿಂದ ಹೊರಬಂದು ಮತ್ತೆ ಬೆಳಗಿನ ದಿನಚರಿ ಆರಂಭಿಸಬೇಕಾದರೆ  ಅಲ್ಲೊಂದು ಲೋಟ ಕಾಫಿ ಅಥವಾ ಚಹಾ ಇರಲೇ ಬೇಕು. ಖಾಲಿ ಹೊಟ್ಟೆಯಲ್ಲಿ ಚಾಹಾ ಕಾಫಿ ಸೇವಿಸಬಾರದು ಎಂದು ಗೊತ್ತಿದ್ದರೂ ಕೆಲವರಿಗೆ ಇದೊಂದು ರೀತಿ ಎನರ್ಜಿ ಬೂಸ್ಟರ್ ನಂತೆ ಕೆಲಸ ಮಾಡುತ್ತದೆ. ಆದರೆ, ನಿಮ್ಮ ಅಡುಗೆ ಮನೆಯಲ್ಲಿರುವ ಕಾಫಿಯು ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತದೆ. ಇದರ ನೈಸರ್ಗಿಕ ಗುಣಗಳು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. 

ಮುಖ ಮತ್ತು ಕೂದಲಿಗೆ ಕಾಫಿಯ ಪ್ರಯೋಜನಗಳು : 
1. ಎಕ್ಸ್‌ಫೋಲಿಯೇಟಿಂಗ್ ಸ್ಕ್ರಬ್ : ಕಾಫಿ ನೈಸರ್ಗಿಕ ಎಕ್ಸ್‌ಫೋಲಿಯೇಟಿಂಗ್ ಸ್ಕ್ರಬ್ ಆಗಿದೆ. ಇದು ಚರ್ಮಕ್ಕೆ ತುಂಬಾ ಪರಿಣಾಮಕಾರಿ. ಸ್ವಲ್ಪ ಕಾಫಿಪುಡಿಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಸೇರಿಸಿ. ನಂತರ ಅದನ್ನು ಮುಖಕ್ಕೆ ಹಚ್ಚಿ ಕೆಲ ಹೊತ್ತು ಮಸಾಜ್  ಮಾಡಿ.  

ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ಸೇವಿಸುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ...?

2. ಕಣ್ಣುಗಳಿಗೆ ಬೆಸ್ಟ್ : ನಿಮ್ಮ ಕಣ್ಣುಗಳ ಬಳಿ  ಬ್ಲಾಕ್ ಸರ್ಕಲ್ ಗಳಿದ್ದರೆ ಕಾಫಿ ಸಹಕಾರಿಯಾಗುತ್ತದೆ. ಕಾಟನ್ ಪ್ಯಾಡ್ ಅಥವಾ ಕ್ಲೀನ್ ಬಟ್ಟೆಯ ಸಹಾಯದಿಂದ, ಕೋಲ್ಡ್ ಕಾಫಿಯನ್ನು ನಿಮ್ಮ ಕಣ್ಣುಗಳ ಕೆಳಗೆ ಹಚ್ಚಿ ಮತ್ತು ಸ್ವಲ್ಪ ಸಮಯ ಹಾಗೆಯೇ ಬಿಡಿ. ನಂತರ ಅದನ್ನು ನೀರಿನಿಂದ ತೊಳೆಯಿರಿ. ಕಾಫಿಯಲ್ಲಿರುವ ಕೆಫೀನ್ ನಿಮ್ಮ ಕಣ್ಣುಗಳ ಕೆಳಗಿನ ಡಾರ್ಕ್ ಸರ್ಕಲ್ ಅನ್ನು ಕಡಿಮೆ ಮಾಡುತ್ತದೆ. 

3. ಹೇರ್ ಎಕ್ಸ್‌ಫೋಲಿಯಂಟ್ ಏಜೆಂಟ್ :  ಕೂದಲನ್ನು ತೊಳೆಯಲು ಸಾಮಾನ್ಯ ಶಾಂಪೂ ಬಳಸುತ್ತಿದ್ದರೆ ಇಂದಿನಿಂದಲೇ ಶಾಂಪೂ ಜಿತೆ ಕಾಫಿ ಬರೆಸಿ ನೋಡಿ. ಸಾಮಾನ್ಯ ಶಾಂಪೂದಲ್ಲಿ ಕಾಫಿ ಪುಡಿಯನ್ನು ಬೆರೆಸಿ ಅದನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಕಾಫಿ ಡೆಡ್ ಸೆಲ್ ಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ.  ಇದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ಬಿಳಿ ಕೂದಲು ಕಪ್ಪಾಗುತ್ತದೆ.  

ಇದನ್ನೂ ಓದಿ : ಮಧುಮೇಹವನ್ನು ಪರ್ಮನೆಂಟ್‌ ಆಗಿ ನಿವಾರಿಸುತ್ತೆ ʻಬ್ಲೂ ಟೀʼ

4. ಕಾಫಿ ಫೇಸ್ ಮಾಸ್ಕ್ : ಮುಖದ ಸತ್ತ  ಇರುವ ಡೆಡ್ ಸೆಲ್ ಗಳನ್ನೂ ತೆಗೆದು ಹಾಕಲು ಕಾಫಿ ಫೇಸ್ ಮಾಸ್ಕ್ ಅನ್ನು ಬಳಸಬಹುದು. ಇದಕ್ಕಾಗಿ ಕಾಫಿ ಪುಡಿಯನ್ನು ಜೇನುತುಪ್ಪ ಅಥವಾ ಮೊಸರಿನೊಂದಿಗೆ ಬೆರೆಸಿ ಫೇಸ್ ಮಾಸ್ಕ್ ನಂತೆ ಮಾಡಿ. ಈಗ ಇದನ್ನು ಮುಖಕ್ಕೆ ಹಚ್ಚಿ ಸುಮಾರು 15 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರೊಂದಿಗೆ, ಚರ್ಮವನ್ನು ಬಿಗಿಗೊಳಿಸಲು ಮತ್ತು ಅದರ ವಿನ್ಯಾಸವನ್ನು ಸುಧಾರಿಸಲು ಇದು ಬಹಳಷ್ಟು ಸಹಾಯ ಮಾಡುತ್ತದೆ. 

( ಸೂಚನೆ :  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News