Weekly Horoscope: ಮೇಷದಿಂದ ಮೀನ ರಾಶಿಯವರೆಗೆ ಈ ವಾರ ಹೇಗಿದೆ!

Weekly Horoscope June 10th to June 16th: ಜೂನ್ 10ರಿಂದ ಜೂನ್ 16ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jun 10, 2024, 09:18 AM IST
  • ಜೂನ್ ತಿಂಗಳ ಎರಡನೇ ವಾರ ಮಿಥುನ ರಾಶಿಯವರಿಗೆ ಅಷ್ಟು ಶುಭಕರವಾಗಿಲ್ಲ
  • ಭವಿಷ್ಯದ ಬಗ್ಗೆ ಹೊಸ ಯೋಜನೆಗಳನ್ನು ರೂಪಿಸಲು ವೃಶ್ಚಿಕ ರಾಶಿಯವರಿಗೆ ಈ ವಾರ ಉತ್ತಮವಾಗಿದೆ.
  • ಮಕರ ರಾಶಿಯ ಜನರಿಗೆ ಇದೊಂದು ಸಕಾರಾತ್ಮಕ ವಾರ.
Weekly Horoscope: ಮೇಷದಿಂದ ಮೀನ ರಾಶಿಯವರೆಗೆ ಈ ವಾರ ಹೇಗಿದೆ!  title=

Varabhavishya in Kannada From June 10th to June 16th: ಈ ವಾರವು ವೈನಾಯಕಿ ಗಣೇಶ ಚತುರ್ಥಿಯೊಂದಿಗೆ ಆರಂಭವಾಗಲಿದ್ದು, ಗಂಗಾ ದಶರಾದೊಂದಿಗೆ ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ ಸೂರ್ಯ ಬುಧರ ಸಂಯೋಗದಿಂದ ಬುದ್ಧಾದಿತ್ಯ ರಾಜಯೋಗವೂ ನಿರ್ಮಾಣವಾಗಲಿದ್ದು, ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):  
ಮೇಷ ರಾಶಿಯವರು ಈ ವಾರ ಉದ್ಯೋಗದಲ್ಲಿ  ಅಪಾಯಗಳನ್ನು ತೆಗೆದುಕೊಳ್ಳಲು ಮತ್ತು ನಿಮ್ಮ ಸ್ವಂತ ಗಡಿಗಳನ್ನು ತಳ್ಳಲು ಹಿಂಜರಿಯದಿರಿ. ನಿಮ್ಮ ಕನಸುಗಳನ್ನು ನನಸಾಗಿಸಲು ಸಕಾಲ ಕೂಡಿ ಬಂದಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದನ್ನು ಮರೆಯಬೇಡಿ. ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಿ. ಮನೆಯಲ್ಲಿ ಯಾರಾದರೂ ಹಿರಿಯರಿದ್ದರೆ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಪ್ರೀತಿ ವಿಷಯಕ್ಕೆ ಸಂಬಂಧಿಸಿದಂತೆ ವಾರವು ಅಷ್ಟು ಉತ್ತಮವಾಗಿಲ್ಲ. 

ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):  
ಜೂನ್ ಎರಡನೇ ವಾರ ವೃಷಭ ರಾಶಿಯ ಜನರಿಗೆ ಮಂಗಳಕರವಾಗಿರುತ್ತದೆ. ಉದ್ಯೋಗಸ್ಥರಿಗೆ ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ. ನ್ಯಾಯಾಲಯದಲ್ಲಿರುವ ಪ್ರಕರಣಗಳು ನಿಮ್ಮ ಪರವಾಗಿ ಬರಬಹುದು. ನೀವು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದ ಆಸ್ತಿ ಖರೀದಿಗೆ ಈ ವಾರ ಅತ್ಯುತ್ತಮವಾಗಿದೆ. ಹೊಸ ವ್ಯವಹಾರವನ್ನು ಆರಂಭಿಸಲು ಅಥವಾ ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಯೋಚಿಸುತ್ತಿರುವವರಿಗೆ ಶುಭ ವಾರ ಇದಾಗಿದೆ. 

ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):   
ಜೂನ್ ತಿಂಗಳ ಎರಡನೇ ವಾರ ಮಿಥುನ ರಾಶಿಯವರಿಗೆ ಅಷ್ಟು ಶುಭಕರವಾಗಿಲ್ಲ. ಈ ವಾರ ಕೆಲಸದಲ್ಲಿ ಒತ್ತಡಗಳು ಹೆಚ್ಚಾಗಳಿವೆ. ವಿದೇಶದಲ್ಲಿ ಅಧ್ಯಯನಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ವಾರ್ತೆ ಸಿಗಲಿದೆ. ನಿಮ್ಮ ಕೈಲಾದಷ್ಟೂ ಬೇರೆಯವರಿಗೆ ಸಹಾಯ ಮಾಡುವುದರಿಂದ ನೀವು ಶುಭ ಫಲಗಳನ್ನು ಅನುಭವಿಸುವಿರಿ. ವೈವಾಹಿಕ ಜೀವನವೂ ಸುಖ-ಸಂತೋಷದಿಂದ ಕೂಡಿರಲಿದೆ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope): 
ಕರ್ಕಾಟಕ ರಾಶಿಯವರಿಗೆ ಇದು ಮಿಶ್ರ ಫಲಗಳಿಂದ ಕೂಡಿದ ವಾರ. ಕೆಲಸದಲ್ಲಿ ಉಂಟಾಗುವ ಅಡೆತಡೆಗಳು ನಿಮ್ಮ ಮನಸ್ಸನ್ನು ಚಂಚಲಗೊಳಿಸಬಹುದು. ವ್ಯಾಪಾರಸ್ಥರು ಸ್ವಲ್ಪ ಶ್ರಮವಹಿಸಿ ಕೆಲಸ ಮಾಡುವುದರಿಂದ ಲಾಭವನ್ನು ನಿರೀಕ್ಷಿಸಬಹುದು. ವಿವಾಹಿತರು ನಿಮ್ಮ ಸಂಗಾತಿಯೊಂದಿಗೆ ಅನಾವಶ್ಯಕ ವಾಕ್ಚಾತುರ್ಯವನ್ನು ಮುಂದುವರಿಸಬೇಡಿ. ಇದು ನಿಮ್ಮ ಸಂಬಂಧದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಬಹುದು. 

ಇದನ್ನೂ ಓದಿ- Shukra Gochar: ಶೀಘ್ರದಲ್ಲೇ ಶುಕ್ರ ಸಂಕ್ರಮಣ, ಮೇಷ, ವೃಷಭ ಸೇರಿದಂತೆ ಈ ರಾಶಿಯವರಿಗೆ ಹಣದ ಸುರಿಮಳೆ

ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):  
ಜೂನ್ ತಿಂಗಳ ಎರಡನೇ ವಾರವು ಸಿಂಹ ರಾಶಿಯ ಜನರಿಗೆ ಉತ್ತಮವಾಗಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ನಿಮ್ಮ ಕೆಲಸಗಳು ಪೂರ್ಣಗೊಳ್ಳಬಹುದು. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದೆ. ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ಸಗಟು ವ್ಯಾಪಾರ ಮಾಡುವವರಿಗೆ ಬಂಪರ್ ಧನಲಾಭ.  ಪ್ರೇಮ ಸಂಬಂಧದಲ್ಲಿ ಮಧುರತೆ ಇರಲಿದೆ. 

ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope): 
ಈ ವಾರ ಕನ್ಯಾ ರಾಶಿಯ ಜನರಿಗೆ ಶುಭ ಫಲಗಳನ್ನು ತರಲಿದೆ. ನಿಮ್ಮ ಯೋಜಿತ ಕೆಲಸಗಳು ನಿಗದಿತ ಸಮಯಕ್ಕೂ ಮುಂಚಿತವಾಗಿಯೇ ಪೂರ್ಣಗೊಳ್ಳಒಲಿದೆ. ಜೀವನದಲ್ಲಿ ಬಹಳ ದಿನಗಳಿಂದ ಎದುರಾಗಿದ್ದ ಕಷ್ಟಗಳು ಈ ವಾರ ಕೊನೆಗೊಳ್ಳುವ ಸಂಭವವಿದೆ. ಹಣಕಾಸಿನ ವ್ಯವಹಾರದಲ್ಲಿ ಮೈಯೆಲ್ಲಾ ಕಣ್ಣಾಗಿದ್ದರೆ ಒಳ್ಳೆಯದು. ಇಲ್ಲದಿದ್ದರೆ, ಜೀವನದಲ್ಲಿ ಹಲವು ಸಂಕಷ್ಟಗಳು ಎದುರಾಗಬಹುದು. 

ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope): 
ತುಲಾ ರಾಶಿಯವರಿಗೆ ಈ ವಾರ ಕೆಲವು ಸಮಸ್ಯೆಗಳು ಬಾಧಿಸಬಹುದು. ಹಾಗಾಗಿ, ಪ್ರತಿ ಹೆಜ್ಜೆಗೂ ವಿಶೇಷ ಕಾಳಜಿ ಅಗತ್ಯ. ಇಲ್ಲದಿದ್ದರೆ, ಪ್ರತಿಕೂಲ ಪರಿಣಾಮವನ್ನು ಎದುರಿಸಬೇಕಾಗಬಹುದು. ಈ ವಾರ ಯಾವುದೇ ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ವಾದ-ವಿವಾದಗಳನ್ನು ತಪ್ಪಿಸಿ. ಕುಟುಂಬಸ್ಥರೊಂದಿಗೆ ಮನಸ್ಥಾಪಗಳನ್ನು ತಪ್ಪಿಸಿ. ಶಾಂತ ಚಿತ್ತತೆಯಿಂದ ಇರಲು ಯೋಗವನ್ನು ಅಭ್ಯಾಸಮಾಡಿ. 

ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):  
ಭವಿಷ್ಯದ ಬಗ್ಗೆ ಹೊಸ ಯೋಜನೆಗಳನ್ನು ರೂಪಿಸಲು ವೃಶ್ಚಿಕ ರಾಶಿಯವರಿಗೆ ಈ ವಾರ ಉತ್ತಮವಾಗಿದೆ.  ಸದಾ ಬೇರೆಯವರ ಬಗ್ಗೆ ಯೋಚಿಸುವ ನೀವು ಈ ವಾರ ನಿಮ್ಮ ಬಗ್ಗೆ, ನಿಮ್ಮ ಪ್ರೀತಿಪಾತ್ರರ ಬಗ್ಗೆ ಹೆಚ್ಚು ಯೋಚಿಸುವುದು ಒಳ್ಳೆಯದು. ಇದು ಭವಿಷ್ಯದಲ್ಲಿ ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ನಿಮ್ಮ ಒಳ್ಳೆಯತನದ ಲಾಭವನ್ನು ಇತರರು ಪಡೆಯಲು ಪ್ರಯತ್ನಿಸಬಹುದು. ಈ ಬಗ್ಗೆ ಹುಷಾರಾಗಿರಿ. 

ಇದನ್ನೂ ಓದಿ- Lucky Zodiac Signs: ಈ 5 ರಾಶಿಯವರ ಮೇಲೆ ಯಾವಾಗಲೂ ತಾಯಿ ಲಕ್ಷ್ಮಿದೇವಿಯ ಕೃಪೆ ಇರುತ್ತದೆ!

ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):  
ಧನು ರಾಶಿಯವರಿಗೆ ಇದು ಸಮಸ್ಯೆಗಳಿಂದ ಕೂಡಿದ ವಾರವಾಗಿರಲಿದೆ. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ. ಕುಟುಂಬ ಸದಸ್ಯರು ನಿಮಗೆ ಬೆಂಬಲವಾಗಿ ನಿಲ್ಲಲಿದ್ದಾರೆ. ಈ ವಾರ ನಿಮ್ಮ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುವ ಸಾಧ್ಯತೆ ಇರುವುದರಿಂದ ಮಾನಸಿಕವಾಗಿ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳುವುದು ಒಳ್ಳೆಯದು. ನಿಮ್ಮ ಕೌಶಲ್ಯಗಳು, ಆಲೋಚನೆಗಳು ಮತ್ತು ಶಕ್ತಿಗಳನ್ನು ಇತರರೊಂದಿಗೆ ಸಂಯೋಜಿಸುವ ಮೂಲಕ ಕೆಲಸಗಳಲ್ಲಿ ಜಯ ಸಾಧಿಸಲು ಪ್ರಯತ್ನಿಸಿ. 

ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):  
ಮಕರ ರಾಶಿಯ ಜನರಿಗೆ ಇದೊಂದು ಸಕಾರಾತ್ಮಕ ವಾರ. ಹಲವು ದಿನಗಳಿಂದ ಸ್ಥಗಿತಗೊಂಡಿರುವ ಕೆಲಸಗಳು ಈ ವಾರ ವೇಗವನ್ನು ಪಡೆಯಲಿವೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದೆ. ನೀವು ಸಂಪತ್ತನ್ನು ಕಲೆಹಾಕಲು ಹೂಡಿಕೆ ಬಗ್ಗೆ ಯೋಚಿಸುತ್ತಿದ್ದರೆ ಚಿಂತನಾಶೀಲರಾಗಿ ಮುಂದುವರೆಯುವುದು ಒಳ್ಳೆಯದು. ವ್ಯವಹಾರವನ್ನು ವಿಸ್ತರಿಸುವಾಗ ನಿಮ್ಮ ಪಾಲುದಾರರ ಬಗ್ಗೆ ಸಂಪೂರ್ಣವಾಗಿ ತಿಳಿಯುವುದನ್ನು ಮರೆಯಬೇಡಿ. 

ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):  
ಕುಂಭ ರಾಶಿಯವರಿಗೆ ಈ ವಾರ ಸವಾಲಿನ ವಾರ ಎಂತಲೇ ಹೇಳಬಹುದು. ಈ ವಾರ ಹಣಕಾಸಿನ ಸಮಸ್ಯೆಗಳು ಉಲ್ಬಣಿಸುವ ಸಾಧಯ್ತೆ ಇದೆ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದನ್ನು ಮರೆಯಬೇಡಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗಿಳ್ಳುವಾಗ ಮನೆಯಲ್ಲಿ ಹಿರಿಯರೊಂದಿಗೆ ಮಾತುಕತೆ ನಡೆಸಿ ಮುಂದುವರೆದರಷ್ಟೇ ಯಶಸ್ಸು ನಿಮ್ಮ ಪಾಲಿಗಿರಲಿದೆ. 

ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope): 
ಮೀನ ರಾಶಿಯವರು ಈ ವಾರ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದಾರೆ. ನೀವು ಹಿಂದೆ ಮಾಡಿದ ಹೂಡಿಕೆಯಿನ ಲಾಭವಾಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ವ್ಯವಹಾರದಲ್ಲಿ ಭರ್ಜರಿ ಲಾಭವನ್ನು ನಿರೀಕ್ಷಿಸಬಹುದು. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಗುಡ್ ನ್ಯೂಸ್ ದೊರೆಯಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News