ಈ ರೋಗಗಳ ಮೂಲವೇ ಟೊಮ್ಯಾಟೋ ! ಪ್ರತಿ ಅಡುಗೆಯಲ್ಲಿ ಬಳಸುವ ಮುನ್ನ ಎಚ್ಚರ

Tomatoes Side Effects For Health:  ಟೊಮ್ಯಾಟೋವನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.  ಟೊಮ್ಯಾಟೋ ತಿನ್ನುವುದರಿಂದ ಕೆಲವೊಂದು ಸಮಸ್ಯೆಗಳು ತಲೆದೋರುವುದು. 

Written by - Ranjitha R K | Last Updated : Jan 10, 2023, 02:21 PM IST
  • ಟೊಮ್ಯಾಟೋವನ್ನು ಸಾಮಾನ್ಯವಾಗಿ ಎಲ್ಲಾ ಅಡುಗೆಗಳಲ್ಲಿ ಬಳಸಲಾಗುತ್ತದೆ.
  • ಟೊಮ್ಯಾಟೊ ಅನೇಕ ಪೋಷಕಾಂಶಗಳ ಆಗರವಾಗಿದೆ.
  • ಟೊಮ್ಯಾಟೋ ತಿನ್ನುವುದರಿಂದ ತಲೆದೋರುವುದು ಈ ಸಮಸ್ಯೆ
ಈ ರೋಗಗಳ ಮೂಲವೇ ಟೊಮ್ಯಾಟೋ ! ಪ್ರತಿ ಅಡುಗೆಯಲ್ಲಿ ಬಳಸುವ ಮುನ್ನ ಎಚ್ಚರ title=

Tomatoes Side Effects For Health:  ಟೊಮ್ಯಾಟೋವನ್ನು ಸಾಮಾನ್ಯವಾಗಿ ಎಲ್ಲಾ ಅಡುಗೆಗಳಲ್ಲಿ ಬಳಸಲಾಗುತ್ತದೆ. ಟೊಮ್ಯಾಟೊ ಹಣ್ಣು ಆಂಟಿ-ಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಪೊಟ್ಯಾಸಿಯಮ್‌ನಂತಹ ಅನೇಕ ಪೋಷಕಾಂಶಗಳ ಆಗರವಾಗಿದೆ. ಈ ಹಿನ್ನೆಲೆಯಲ್ಲಿ ಟೊಮ್ಯಾಟೋ  ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹಾಗಂತ ಟೊಮ್ಯಾಟೋವನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 

ಟೊಮ್ಯಾಟೋ  ತಿನ್ನುವುದರಿಂದ  ತಲೆದೋರುವುದು ಈ ಸಮಸ್ಯೆ : 
ಅಸಿಡಿಟಿ ಸಮಸ್ಯೆ :
ಟೊಮ್ಯಾಟೋದಲ್ಲಿ ಉತ್ತಮ ಪ್ರಮಾಣದ ವಿಟಮಿನ್-ಸಿ ಇದೆ. ಹಾಗಾಗಿ ಟೊಮ್ಯಾಟೋ ಆಮ್ಲೀಯ ಗುಣವನ್ನು ಹೊಂದಿದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ, ಟೊಮ್ಯಾಟೋವನ್ನು ಎಲ್ಲಾ ಅಡುಗೆಯಲ್ಲಿ ಬಳಸುವ ಮುನ್ನ ಯೋಚಿಸಿ ಬಳಸಿ.   

ಇದನ್ನೂ ಓದಿ : ಹೃದಯಾಘಾತ ಮತ್ತು ಕ್ಯಾನ್ಸರ್ ನಂತಹ ರೋಗಗಳನ್ನು ದೂರ ಸರಿಸುತ್ತದೆ ಈ ಒಂದು ಧಾನ್ಯ

ಗ್ಯಾಸ್ ಸಮಸ್ಯೆ: 
ಗ್ಯಾಸ್ ಸಮಸ್ಯೆ ಇರುವವರು ಹೆಚ್ಚು ಟೊಮೆಟೊ ಸೇವಿಸಬಾರದು. ಟೊಮ್ಯಾಟೋ ಸೇವನೆ ಹೊಟ್ಟೆಯಲ್ಲಿ ಗ್ಯಾಸ್ ರಚನೆಗೆ ಕಾರಣವಾಗಬಹುದು. ಗ್ಯಾಸ್ ಸಮಸ್ಯೆಯಿಂದ ಪಾರಾಗಲು ಟೊಮ್ಯಾಟೋ  ಸೇವನೆಯಿಂದ ದೂರವಿರಬೇಕು.

ಕಿಡ್ನಿ ಸ್ಟೋನ್ ಸಮಸ್ಯೆ :
ಕಿಡ್ನಿ ಸ್ಟೋನ್ ರೋಗಿಗಳು ತಪ್ಪಿಯೂ ಟೊಮ್ಯಾಟೋ ಸೇವಿಸಬಾರದು. ಟೊಮ್ಯಾಟೋ ಬೀಜಗಳಿಂದ ಕಿಡ್ನಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು. ಕಿಡ್ನಿ ಸ್ಟೋನ್ ಇರುವವರು ಟೊಮ್ಯಾಟೋ ಹಣ್ಣು ಸೇವಿಸಬೇಕು ಎಂದಾದರೆ, ಮೊದಲು ಅದರ ಬೀಜಗಳನ್ನು ಪ್ರತ್ಯೇಕಿಸಿಕೊಳ್ಳಬೇಕು. 

ಇದನ್ನೂ ಓದಿ : Health Tips: ಬಿಪಿ-ಶುಗರ್ ಅಷ್ಟೇ ಅಲ್ಲ ಕ್ಯಾನ್ಸರ್ ರೋಗಿಗಳಿಗೂ ತುಂಬಾ ಲಾಭಕಾರಿ ಈ ಹಸಿರು ತರಕಾರಿ

ಎದೆಯುರಿ :
ಟೊಮ್ಯಾಟೋವನ್ನು ಹೆಚ್ಚು ಸೇವಿಸಿದರೆ, ಎದೆಯುರಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮೊದಲೇ ಹೇಳಿದ ಹಾಗೆ ಟೊಮ್ಯಾಟೋದಲ್ಲಿ   ವಿಟಮಿನ್ ಸಿ ಹೇರಳವಾಗಿರುತ್ತದೆ. ಇದರಿಂದ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ.  ಹೀಗಾಗಿ ಎದೆಯುರಿ ಮುಂತಾದ ಸಮಸ್ಯೆಗಳು ಕೂಡಾ ತಲೆದೋರಬಹುದು. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News