ಬಲಿಷ್ಠ ಶರೀರ ನಿಮ್ಮದಾಗಬೇಕಾ..? ಊಟದಲ್ಲಿ ಈ ಐದು ಬದಲಾವಣೆ ಮಾಡಿ.

ಇವತ್ತಿನ ದಿನ ಎಲ್ಲರೂ ಫಿಟ್ ಮತ್ತು ಫೈನ್ ಎಂದೆನಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.  ಕೆಲವರಿಗೆ ಬೊಜ್ಜು ಇಳಿಸಿಕೊಳ್ಳುವ ಆಸೆ ಆದರೆ ಇನ್ನು ಕೆಲವರಿಗೆ ದೇಹದ ತೂಕ ಹೆಚ್ಚಿಸಿಕೊಳ್ಳುವ ತವಕ.

Written by - Ranjitha R K | Last Updated : Jun 11, 2021, 01:04 PM IST
  • ಎಲ್ಲರಿಗೂ ದಷ್ಟಪುಷ್ಟ ಶರೀರ ಬೇಕು.
  • ಆರೋಗ್ಯವಂತ ದೇಹಕ್ಕಾಗಿ ಊಟದಲ್ಲಿ ಸ್ವಲ್ಪ ಬದಲಾವಣೆ ಮಾಡಬೇಕು.
  • ಬಲಿಷ್ಠ ಶರೀರಕ್ಕಾಗಿ ಏನನ್ನು ತಿನ್ನಬೇಕು..ಇಲ್ಲಿದೆ ಡೀಟೆಲ್ಸ್
ಬಲಿಷ್ಠ ಶರೀರ ನಿಮ್ಮದಾಗಬೇಕಾ..? ಊಟದಲ್ಲಿ ಈ ಐದು ಬದಲಾವಣೆ ಮಾಡಿ. title=
ಆರೋಗ್ಯವಂತ ದೇಹಕ್ಕಾಗಿ ಊಟದಲ್ಲಿ ಸ್ವಲ್ಪ ಬದಲಾವಣೆ ಮಾಡಬೇಕು. (file photo)

ನವದೆಹಲಿ : ಇವತ್ತಿನ ದಿನ ಎಲ್ಲರೂ ಫಿಟ್ ಮತ್ತು ಫೈನ್ ಎಂದೆನಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.  ಕೆಲವರಿಗೆ ಬೊಜ್ಜು ಇಳಿಸಿಕೊಳ್ಳುವ ಆಸೆ ಆದರೆ ಇನ್ನು ಕೆಲವರಿಗೆ ದೇಹದ ತೂಕ ಹೆಚ್ಚಿಸಿಕೊಳ್ಳುವ ತವಕ.  ನರಪೇತಲ ಶರೀರದವರಿಗೆ ದಷ್ಟಪುಷ್ಟಾಗಿ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಸಹಜವಾದದ್ದೆ. ಕೆಲವೊಮ್ಮೆ ಜೆನೆಟಿಕ್ ಸಮಸ್ಯೆಯಿಂದಲೂ ದೇಹ ಸಪೂರವಾಗುತ್ತದೆ.  ಆದರೆ, ಶಿಸ್ತುಬದ್ಧ ಡಯಟ್ (Diet) ಪಾಲಿಸಿದರೆ ನರಪೇತಲ ಶರೀರ ಕೂಡಾ ದಷ್ಟಪುಷ್ಟವಾಗುತ್ತದೆ.  ದಷ್ಟಪುಷ್ಟವಾಗಲು ಕೆಲವರು ಔಷಧಿ, ವಿಟಮಿನ್ ಮಾತ್ರೆ ಇತ್ಯಾದಿ ತಿನ್ನುತ್ತಾರೆ. ಆದರ ಬದಲು ನಿಮ್ಮ ಡಯಟ್ ನಲ್ಲಿ ಕೆಲವೊಂದು ಪರಿವರ್ತನೆ ಮಾಡಿ. ದಷ್ಟಪುಷ್ಟ ಶರೀರ ನಿಮ್ಮದಾಗುತ್ತದೆ. 

ದೇಹ ಬಲಗೊಳ್ಳಬೇಕಾದರೆ ಏನು ತಿನ್ನಬೇಕು.?
೧. ಬಾಳೆ ಹಣ್ಣು: 
ಬಾಳೆಹಣ್ಣಿನಲ್ಲಿ (Banana) ಫೈಬರ್ ಮತ್ತು ಕಾರ್ಬೋಹೈಡ್ರೇಟ್ ಇದೆ.  ಬಾಳೆಹಣ್ಣನ್ನು ನಿಮ್ಮ ಡಯಟಿನಲ್ಲಿ (Diet) ಬಳಸಿಕೊಂಡರೆ, ನಿಮ್ಮ ತೂಕ ಹೆಚ್ಚುವುದರಲ್ಲಿ ಸಂದೇಹವಿಲ್ಲ.

ಇದನ್ನೂ ಓದಿ : ಆಮ್ಲೇಟನ್ನು ಇನ್ನಷ್ಟು ಸಾಫ್ಟ್ ಮತ್ತು ಟೇಸ್ಟಿ ಮಾಡುವುದು ಹೇಗೆ..?

೨. ತುಪ್ಪ
ತೂಕ ಹೆಚ್ಚಿಸಿಕೊಳ್ಳಬೇಕಾದರೆ ನಿಮ್ಮ  ಊಟದ ಮೆನುವಿನಲ್ಲಿ ತುಪ್ಪ (Ghee) ಇರಲಿ.  ತುಪ್ಪದಲ್ಲಿ ಸಾಕಷ್ಟು ಪೋಷಕಾಂಶಗಳಿರುತ್ತವೆ. ಜೊತೆಗೆ ನಿಮ್ಮ ಆರೋಗ್ಯವನ್ನು ಚೆನ್ನಾಗಿಡುತ್ತದೆ.

೩. ಅಲೂಗಡ್ಡೆ
ಕೃಶಕಾಯದ ಸಮಸ್ಯೆಯಿಂದ ಬಳಲುತಿದ್ದರೆ ಆಲೂಗಡ್ಡೆ (Potato) ತಿನ್ನಬೇಕು. ಆಲೂಗಡ್ಡೆ ನಿಮ್ಮ ತೂಕ ಹೆಚ್ಚಿಸುತ್ತದೆ. ಅಲೂ ನಿಮ್ಮ ತೂಕ ಹೆಚ್ಚಿಸುತ್ತದೆ.

೪. ಚಿಕನ್
ನೀವು ನಾನ್ ವೆಜಿಟೇರಿಯನ್ (Non vegetarian)ಆಗಿದ್ದರೆ ಖಂಡಿತಾ ನಿಮ್ಮ  ಊಟದ ಮೆನುವಿನಲ್ಲಿ ಚಿಕನ್ (Chicken) ಇಟ್ಟು ಕೊಳ್ಳಿ. ಚಿಕನ್ ನಿಮ್ಮ ತೂಕ ಹೆಚ್ಚಿಸುತ್ತದೆ. ಚಿಕನ್ ಪ್ರೊಟೀನ್ ನ ಅತಿ ಉತ್ತಮ ಮೂಲ. ಚಿಕನ್  ತಿಂದರೆ ಒಳ್ಳೆಯದು.

ಇದನ್ನೂ ಓದಿ : ಮೂಳೆ ಗಟ್ಟಿ ಇರಬೇಕಾದರೆ ನಿಮ್ಮ ಡಯಟ್ ನಲ್ಲಿರಲಿ ಈ ಆಹಾರ

೫. ಡ್ರೈ ಫ್ರೂಟ್ಸ್ 
ದಿನವೂ ಡ್ರೈ ಫ್ರೂಟ್ಸ್  (Dry fruits)ತಿಂದರೆ ದೇಹಾರೋಗ್ಯ ವೃದ್ದಿಯಾಗುತ್ತದೆ. ಶರೀರ ಹೆಲ್ತಿ ಆಗಿರುತ್ತದೆ. ಡ್ರೈ ಫ್ರೂಟ್ಸ್  ತಿಂದರೆ ತೂಕ ಹೆಚ್ಚುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News