ಕಿಡ್ನಿ ಸ್ಟೋನ್ ಪುಡಿ ಮಾಡುವುದರ ಜೊತೆಗೆ ನೋವನ್ನು ಕ್ಷಣ ಮಾತ್ರದಲ್ಲಿ ನಿವಾರಿಸುತ್ತದೆ ಈ ಹಣ್ಣು ! ಸೇವಿಸುವ ವಿಧಾನ ಹೀಗಿರಲಿ

Kidney stone remedy :ಕಿಡ್ನಿ ಸ್ಟೋನ್ ಇದ್ದಾಗ ತುಂಬಾ ನೋವು ಕಾಣಿಸಿಕೊಳ್ಳುತ್ತದೆ. ಕೆಲವು ಮನೆಮದ್ದುಗಳ ಸಹಾಯದಿಂದ ಅದರ ನೋವನ್ನು ನಿಯಂತ್ರಿಸಬಹುದು. 

Written by - Ranjitha R K | Last Updated : Jan 27, 2025, 06:01 PM IST
  • ಕಿಡ್ನಿ ಸ್ಟೋನ್ ನೋವು ತುಂಬಾ ಯಾತನಾಮಯವಾಗಿರುತ್ತದೆ
  • ಕೆಲವು ಮನೆಮದ್ದುಗಳ ಸಹಾಯದಿಂದ ಅದರ ನೋವನ್ನು ನಿಯಂತ್ರಿಸಬಹುದು
  • ಕಿಡ್ನಿ ಸ್ಟೋನ್ ನೋವನ್ನು ನಿವಾರಿಸುವ ಆಹಾರಗಳು
ಕಿಡ್ನಿ ಸ್ಟೋನ್ ಪುಡಿ ಮಾಡುವುದರ ಜೊತೆಗೆ ನೋವನ್ನು ಕ್ಷಣ ಮಾತ್ರದಲ್ಲಿ ನಿವಾರಿಸುತ್ತದೆ ಈ ಹಣ್ಣು ! ಸೇವಿಸುವ ವಿಧಾನ ಹೀಗಿರಲಿ   title=

ಬೆಂಗಳೂರು : ಖನಿಜಗಳು ಮತ್ತು ಉಪ್ಪಿನ ಹರಳುಗಳು ಮೂತ್ರಪಿಂಡದಲ್ಲಿ ಶೇಖರಣೆಗೊಂಡು ಘನವಾದ ಕಲ್ಲನ್ನು ರೂಪಿಸುತ್ತವೆ.ಇದನ್ನೇ ನಾವುಕಿದ್ನಿ ಸ್ಟೋನ್ ಎಂದು ಕರೆಯುತ್ತೇವೆ. ಕಿಡ್ನಿ ಕಸ್ಟೋನ್ ಆದಾಗ ಹೊಟ್ಟೆ, ಕಿಬ್ಬೊಟ್ಟೆ ಅಥವಾ ಹೊಟ್ಟೆಯ ಬದಿ, ಬೆನ್ನುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.ಈ ನೋವನ್ನು ಸಹಿಸಿಕೊಳ್ಳುವುದು ಒಂದು ಹಂತಕ್ಕೆ ಸಾಧ್ಯವೇ ಇಲ್ಲ ಅನ್ನುವಂಥಹ ನೋವದು. ಅಲ್ಲದೆ ಈ ನೋವು ಇದ್ದಕ್ಕಿದ್ದಂತೆ ಒಮ್ಮೆಲೇ ಕಾಣಿಸಿಕೊಳ್ಳುತ್ತದೆ. 

ಮೂತ್ರಪಿಂಡದ ಕಲ್ಲುಗಳು ಸಾಮಾನ್ಯವಾಗಿ 30 ರಿಂದ 60 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಆದರೆ ಇಂದು ಇದು ಯುವ ಜನರಲ್ಲಿಯೂ ಕಂಡುಬರುತ್ತದೆ. ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುವ ಅಂಶಗಳೆಂದರೆ ಆಹಾರ, ಹವಾಮಾನ, ಜೀವನಶೈಲಿ ಮತ್ತು ಕುಟುಂಬದ ಹಿಸ್ಟರಿಯನ್ನು ಒಳಗೊಂಡಿವೆ. ಇದಲ್ಲದೆ, ನೀರಿನ ಕೊರತೆ ಮತ್ತು ಅನಾರೋಗ್ಯಕರ ಆಹಾರವು ಈ ಸಮಸ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ. 

ಇದನ್ನೂ ಓದಿ : ಬಿಪಿ ನಿಯಂತ್ರಿಸುವ ಪವರ್‌ಫುಲ್‌ ಮನೆಮದ್ದು... ಈ ರೀತಿ ಇದನ್ನು ತಿಂದರೆ ತೂಕ ಕೂಡ ಇಳಿಯುತ್ತೆ!

ಕಿಡ್ನಿ ಸ್ಟೋನ್ ನೋವನ್ನು ನಿವಾರಿಸುವ ಆಹಾರಗಳು :  
1.ಮೂತ್ರಪಿಂಡದ ಕಲ್ಲುಗಳಿಗೆ ನಿಂಬೆ ಮತ್ತು ಆಲಿವ್ ಎಣ್ಣೆ :
 
ಕಿಡ್ನಿ ನೋವು ನಿವಾರಣೆ ಮಾಡುವಲ್ಲಿ ನಿಂಬೆ ಮತ್ತು ಆಲಿವ್ ಎಣ್ಣೆ ಸಹಾಯ ಮಾಡುತ್ತದೆ. ಏಕೆಂದರೆ ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದೆ. ಇದು ಮೂತ್ರಪಿಂಡದ ಕಲ್ಲುಗಳನ್ನು ಒಡೆಯಲು ಸಹಾಯ ಮಾಡುತ್ತದೆ. ಅದರೊಂದಿಗೆ ಆಲಿವ್ ಎಣ್ಣೆಯನ್ನು ಬೆರೆಸಿ ಕುಡಿಯುವುದರಿಂದ ಕಲ್ಲು ಒಡೆಯುವ ಪ್ರಕ್ರಿಯೆಯನ್ನು ವೇಗಗೊಳಿಸಬಹುದು. ಒಂದು ಚಮಚ ಆಲಿವ್ ಎಣ್ಣೆ ಮತ್ತು ಅರ್ಧ ನಿಂಬೆಹಣ್ಣಿನ ರಸವನ್ನು ಬೆರೆಸಿ ದಿನಕ್ಕೆ ಎರಡು ಬಾರಿ ತೆಗೆದುಕೊಂಡರೆ ನೋವಿನಿಂದಲೇ ಪರಿಹಾರ ಸಿಗುತ್ತದೆ. 

2.ಅಡಿಗೆ ಸೋಡಾ ಮತ್ತು ನೀರು : 
ಅಡಿಗೆ ಸೋಡಾ ದೇಹದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ.  ಇದು ಮೂತ್ರಪಿಂಡದ ಕಲ್ಲುಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಒಂದು ಚಮಚ ಅಡಿಗೆ ಸೋಡಾವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. 

ಇದನ್ನೂ ಓದಿ : ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲನ್ನು ಇದರ ಜೊತೆ ಸೇವಿಸಿದರೆ ಬೆಳಗಾಗುವಷ್ಟರಲ್ಲಿ ಇಳಿಯುವುದು ಬ್ಲಡ್ ಶುಗರ್!ತಿಂಗಳವರೆಗೆ ಏರುವುದಿಲ್ಲ ರಕ್ತದ ಸಕ್ಕರೆ

3.ಕಲ್ಲಂಗಡಿ : 
ಮೂತ್ರಪಿಂಡದ ಕಲ್ಲುಗಳಿಗೆ ಚಿಕಿತ್ಸೆ ನೀಡಲು ಕಲ್ಲಂಗಡಿ ಸೇವನೆಯು ತುಂಬಾ ಪ್ರಯೋಜನಕಾರಿ. ಇದು ಹೆಚ್ಚಿನ ಪ್ರಮಾಣದ ನೀರನ್ನು ಹೊಂದಿರುತ್ತದೆ.  ಇದು ಮೂತ್ರಪಿಂಡದಿಂದ ಕಲ್ಲುಗಳನ್ನು ಫ್ಲಶ್ ಮಾಡಲು ಸಹಾಯ ಮಾಡುತ್ತದೆ. ಇದು ಪೊಟ್ಯಾಸಿಯಮ್ ನಲ್ಲಿ ಸಮೃದ್ಧವಾಗಿರುವ ಹಣ್ಣು. 

4.ಗ್ರೀ ಟೀ : 
ಗ್ರೀ ಟೀ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಗ್ರೀನ್ ಟೀ ಸೇವನೆ ಮಾಡುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಕಡಿಮೆ ಮಾಡಬಹುದು. 

ಸೂಚನೆ :ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದುಗಳನ್ನು ಆಧರಿಸಿ ಬರೆಯಲಾಗಿದೆ.ಜೀ ನ್ಯೂಸ್ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News