ಹೈ ಕೊಲೆಸ್ಟ್ರಾಲ್ ಬಗ್ಗೆ ನಿಮ್ಮ ಕೂದಲೂ ನೀಡುತ್ತೆ ಸಂಕೇತ

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳವು ಹಲವು ರೋಗಗಳಿಗೆ ಕಾರಣವಾಗಬಹುದು. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳವಾಗಿದೆ ಎಂಬ ಬಗ್ಗೆ ನಿಮ್ಮ ಕೂದಲೂ ಸಹ ಕೆಲವು ಚಿಹ್ನೆಗಳನ್ನು ನೀಡುತ್ತದೆ. ಆ ಬಗ್ಗೆ ತಿಳಿಯೋಣ...

Written by - Yashaswini V | Last Updated : Aug 5, 2022, 09:47 AM IST
  • ಉತ್ತಮ ಕೊಲೆಸ್ಟ್ರಾಲ್ ಸಹಾಯದಿಂದ, ಇದು ಜೀವಸತ್ವಗಳು, ಹಾರ್ಮೋನುಗಳು ಮತ್ತು ಜೀರ್ಣಕ್ರಿಯೆಗೆ ದ್ರವದ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ.
  • ವಿರುದ್ಧವಾಗಿ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ತುಂಬಾ ಹೆಚ್ಚಿದ್ದರೆ, ಅದು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
  • ಹಾಗಾಗಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದು ಅತ್ಯಗತ್ಯ.
ಹೈ ಕೊಲೆಸ್ಟ್ರಾಲ್ ಬಗ್ಗೆ ನಿಮ್ಮ ಕೂದಲೂ ನೀಡುತ್ತೆ ಸಂಕೇತ  title=
High cholesterol symptoms in hair

ಅಧಿಕ ಕೊಲೆಸ್ಟ್ರಾಲ್ ಲಕ್ಷಣಗಳು: ದೇಹಕ್ಕೆ ಕೊಲೆಸ್ಟ್ರಾಲ್ ಕೂಡ ಅಗತ್ಯ. ನಮ್ಮ ದೇಹದಲ್ಲಿ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂಬ ಎರಡು ವಿಧಗಳಿವೆ. ಇದು ನಮ್ಮ ಅಪಧಮನಿಗಳಲ್ಲಿ ಕಂಡುಬರುವ ಜಿಗುಟಾದ ವಸ್ತುವಾಗಿದೆ, ಈ ಮೂಲಕ ದೇಹದಲ್ಲಿ ಆರೋಗ್ಯಕರ ಕೋಶಗಳು ಉತ್ಪತ್ತಿಯಾಗುತ್ತವೆ. ಉತ್ತಮ ಕೊಲೆಸ್ಟ್ರಾಲ್ ಸಹಾಯದಿಂದ, ಇದು ಜೀವಸತ್ವಗಳು, ಹಾರ್ಮೋನುಗಳು ಮತ್ತು ಜೀರ್ಣಕ್ರಿಯೆಗೆ ದ್ರವದ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ. ಇದಕ್ಕೆ ವಿರುದ್ಧವಾಗಿ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ತುಂಬಾ ಹೆಚ್ಚಿದ್ದರೆ, ಅದು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಕಾರಣದಿಂದಾಗಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದು ಅತ್ಯಗತ್ಯ. ಅದಕ್ಕೂ ಮೊದಲು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ ಎಂಬುದನ್ನು ತಿಳಿಯುವುದು ಬಹಳ ಮುಖ್ಯ. ಆದರೆ, ನಮ್ಮ ತಲೆ ಕೂದಲೂ ಸಹ ಅಧಿಕ ಕೊಲೆಸ್ಟ್ರಾಲ್ ಮಟ್ಟದ ಬಗ್ಗೆ ಸೂಚನೆ ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ?

ವಾಸ್ತವವಾಗಿ, ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿ ಪತ್ತೆಹಚ್ಚಲು ರಕ್ತ ಪರೀಕ್ಷೆ ಅತ್ಯುತ್ತಮ ವಿಧಾನ. ಆದರೆ, ನಮ್ಮ ದೇಹದಲ್ಲಿನ ಕೆಲವು ಬದಲಾವಣೆಗಳು ಸಹ ದೇಹದ ಕೊಲೆಸ್ಟ್ರಾಲ್ ಮಟ್ಟ ಅಧಿಕವಾಗಿದೆ ಎಂಬುದನ್ನು ಸೂಚಿಸುತ್ತದೆ. 

ಇದನ್ನೂ ಓದಿ- ಅಮೆರಿಕದಲ್ಲಿ ಮಂಕಿಪಾಕ್ಸ್ ಅಲರ್ಟ್- ಹೆಲ್ತ್ ಎಮರ್ಜೆನ್ಸಿ ಘೋಷಣೆ

ಕೂದಲಿನಲ್ಲಿ ಅಧಿಕ ಕೊಲೆಸ್ಟ್ರಾಲ್ ಲಕ್ಷಣಗಳು:
ದೇಹದ ಅನೇಕ ಭಾಗಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಎಚ್ಚರಿಕೆಯ ಚಿಹ್ನೆಗಳು ಕಂಡುಬರುತ್ತವೆ. ಆದರೆ ಕೂದಲಿನ ಮೂಲಕ ಮೂಕ ಕೊಲೆಗಾರನ ಈ ಅಪಾಯವನ್ನು ನೀವು ಗುರುತಿಸುವ ಮಾರ್ಗವೂ ಇದೆ. ನಿಮ್ಮ ಕೂದಲಿನ ಕೆಲವು ಬದಲಾವಣೆಯು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳವನ್ನು ಸೂಚಿಸಬಹುದು. 

ಈ ಕುರಿತಂತೆ ಜಾನ್ ಹಾಪ್ಕಿನ್ಸ್ ಸಂಶೋಧಕರು ಇಲಿಗಳ ಮೇಲೆ ಸಂಶೋಧನೆ ನಡೆಸಿದ್ದಾರೆ. ಇದರಲ್ಲಿ ಕೊಲೆಸ್ಟ್ರಾಲ್-ವರ್ಧಿಸುವ ಆಹಾರವನ್ನು ತೆಗೆದುಕೊಳ್ಳುವ ಜನರು ತಮ್ಮ ಕೂದಲಿನ ಮೇಲೆ ಅದರ ಕೆಟ್ಟ ಪರಿಣಾಮವನ್ನು ಕಾಣಲು ಪ್ರಾರಂಭಿಸುತ್ತಾರೆ ಎಂದು ಕಂಡುಬಂದಿದೆ. ನೇಚರ್ ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ ಪ್ರಕಟವಾದ ಸಂಶೋಧನೆಯು ಅಧಿಕ ಕೊಲೆಸ್ಟ್ರಾಲ್ ಅಕಾಲಿಕ ಬಿಳಿ ಕೂದಲು ಮತ್ತು ಕೂದಲು ಉದುರುವುದರ ಪ್ರಮುಖ ಕಾರಣವಾಗಿರಬಹುದು ಎಂದು ಕಂಡು ಹಿಡಿಯಲಾಗಿದೆ.

ಇದನ್ನೂ ಓದಿ- ಚಹಾದೊಂದಿಗೆ ಈ ಆಹಾರ ಸೇವಿಸುವ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡಿ, ತಂದೊಡ್ಡಬಹುದು ಆರೋಗ್ಯ ಸಮಸ್ಯೆ

ಈ ಕುರಿತಂತೆ ಸಂಶೋಧನೆ ನಡೆಸಲು ಸಂಶೋಧಕರು ಇಲಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದಾರೆ. ಅವುಗಳಲ್ಲಿ ಒಂದು ಗುಂಪಿನ ಇಲಿಗಳಿಗೆ ಹೈ ಕೊಲೆಸ್ಟ್ರಾಲ್ ಆಹಾರವನ್ನು, ಇನ್ನೊಂದು ಗುಂಪಿನ ಇಲಿಗಳಿಗೆ ಸಾಮಾನ್ಯ ಆಹಾರವನ್ನು ನೀಡಲಾಗಿದೆ. ಹೈ ಕೊಲೆಸ್ಟ್ರಾಲ್ ಆಹಾರ ಸೇವಿಸಿದ ಇಲಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೂದಲು ಉದುರುವಿಕೆ ಕಂಡು ಬಂದಿದೆ. ಅಧಿಕ ಕೊಲೆಸ್ಟ್ರಾಲ್‌ಗೂ ಕೂದಲು ಉದುರುವಿಕೆಗೂ ಸಂಬಂಧವಿದೆ ಎಂಬುದು ಸಂಶೋಧನೆಯ ಮೂಲಕ ಸಾಬೀತಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ವಿಷಯಗಳ ಬಗ್ಗೆ ಎಚ್ಚರವಿರಲಿ: 
ಇತ್ತೀಚಿನ ದಿನಗಳಲ್ಲಿ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆ ಕಂಡು ಬರುತ್ತದೆ. ಇದಲ್ಲದೆ, ಬದಲಾದ ಜೀವನ ಶೈಲಿಯಿಂದಾಗಿ ತುಂಬಾ ಕೂದಲು ಉದುರುವುದು ಸಾಮಾನ್ಯವಾಗಿದೆ. ಇದಕ್ಕೆ ಹಲವು ಕಾರಣಗಳಿರಬಹುದು. ಅವುಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಳವೂ ಒಂದು. ಇಂತಹ ಸಂದರ್ಭದಲ್ಲಿ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News