ಇಂಥವರನ್ನು ಡಯಾಬಿಟೀಸ್ ಅಪಾಯ ಕಾಡುವ ಸಾಧ್ಯತೆ ಹೆಚ್ಚು.! ನಿಮ್ಮನ್ನೊಮ್ಮೆ ಪರೀಕ್ಷಿಸಿಕೊಳ್ಳಿ

ದೇಹದಲ್ಲಿ ಗ್ಲುಕೋಸ್ ಅತಿಯಾದಾಗ ಮಧುಮೇಹ ಕಾಯಿಲೆಗೆ ತುತ್ತಾಗಬೇಕಾಗಬಹುದು. ಮಧುಮೇಹದಲ್ಲಿ ಮೂರು ವಿಧಗಳಿವೆ . ಯಾರನ್ನು ಮಧುಮೇಹದ ಹೆಚ್ಚು ಬಾಧಿಸಲಿದೆ ಎನ್ನುವುದನ್ನು ತಿಳಿದುಕೊಳ್ಳೋಣ. 

Written by - Ranjitha R K | Last Updated : Sep 2, 2022, 08:11 AM IST
  • ಮಧುಮೇಹದ ಅಪಾಯ ಯಾರಿಗೆ ಹೆಚ್ಚು?
  • ಮಧುಮೇಹದಿಂದ ಈ ರೋಗಗಳ ಅಪಾಯ ಕೂಡಾ ಹೆಚ್ಚುತ್ತದೆ
  • ಮಧುಮೇಹದಿಂದ ತಪ್ಪಿಸಿಕೊಳ್ಳಲು ಈ ವಿಷಯಗಳನ್ನು ನೆನಪಿನಲ್ಲಿಡಿ
ಇಂಥವರನ್ನು ಡಯಾಬಿಟೀಸ್ ಅಪಾಯ ಕಾಡುವ ಸಾಧ್ಯತೆ ಹೆಚ್ಚು.! ನಿಮ್ಮನ್ನೊಮ್ಮೆ ಪರೀಕ್ಷಿಸಿಕೊಳ್ಳಿ title=
diabetes control tips (file photo)

ಬೆಂಗಳೂರು : ದೇಹದಲ್ಲಿನ ಸಕ್ಕರೆಯ ಪ್ರಮಾಣವು ಅಧಿಕವಾದಾಗ ಮಧುಮೇಹದ ಅಪಾಯವು ಹೆಚ್ಚಾಗುತ್ತದೆ. ರಕ್ತದಲ್ಲಿನ ಸಕ್ಕರೆ ಅಂದರೆ ಅದು ಗ್ಲೂಕೋಸ್.  ಗ್ಲೂಕೋಸ್ ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದು ನಮ್ಮ ಆಹಾರದಲ್ಲಿ ಇರುತ್ತದೆ. ಆದರೆ, ದೇಹದಲ್ಲಿ ಗ್ಲುಕೋಸ್ ಅತಿಯಾದಾಗ ಮಧುಮೇಹ ಕಾಯಿಲೆಗೆ  ತುತ್ತಾಗಬೇಕಾಗಬಹುದು. ಮಧುಮೇಹದಲ್ಲಿ ಮೂರು ವಿಧಗಳಿವೆ .  ಟೈಪ್ 1 ಮಧುಮೇಹ, ಟೈಪ್ 2 ಮಧುಮೇಹ ಮತ್ತು ಗರ್ಭಾವಸ್ಥೆಯ ಮಧುಮೇಹ. ಇನ್ನು ಯಾರನ್ನು ಮಧುಮೇಹದ ಹೆಚ್ಚು ಬಾಧಿಸಲಿದೆ ಎನ್ನುವುದನ್ನು ತಿಳಿದುಕೊಳ್ಳೋಣ. 

ಮಧುಮೇಹದ ಅಪಾಯ ಯಾರಿಗೆ ಹೆಚ್ಚು? :
45 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಮಧುಮೇಹದ ಅಪಾಯವು ಹೆಚ್ಚಾಗಿರುತ್ತದೆ. ಇದಲ್ಲದೆ, ಈಗಾಗಲೇ ಕುಟುಂಬದಲ್ಲಿ ಯಾರಾದರೂ ಮಧುಮೇಹದಿಂದ ಬಳಲುತ್ತಿದ್ದರೆ, ಅಂದರೆ ಫ್ಯಾಮಿಲಿ ಹಿಸ್ಟರಿ ಇದ್ದರೆ, ಅಂಥವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಒಂದು ಹಂತದ ಬಳಿಕ ಪರೀಕ್ಷಿಸುತ್ತಿರಬೇಕು. ಇನ್ನು ದೈಹಿಕವಾಗಿ ಚಟುವಟಿಕೆಯಿಲ್ಲದ ಜನರು,  ದೇಹ ತೂಕ ಹೆಚ್ಚಾಗಿರುವವರನ್ನು  ಮಧುಮೇಹ ಬಹು ಬೇಗ ಕಾಡಬಹುದು. ತಮ್ಮ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಕೊರತೆಯಿರುವ ಜನರು ಕೂಡಾ ಮಧುಮೇಹಕ್ಕೆ ಹೆಚ್ಚು ಒಳಗಾಗುತ್ತಾರೆ. ಬಾಡಿ ಮಾಸ್ ಇಂಡೆಕ್ಸ್ ಅನ್ನು ಆಧರಿಸಿ ಮಧುಮೇಹದ ಅಪಾಯ ವ್ಯಕ್ತಿಯಿಂದ ವ್ಯ ಕ್ತಿಗೆ ಬದಲಾಗಬಹುದು. 

ಇದನ್ನೂ ಓದಿ : ಲಿವರ್ ಸ್ವಾಸ್ಥ್ಯ ಕೆಡುತ್ತಿದೆ ಎನ್ನುವುದನ್ನು ಸೂಚಿಸುತ್ತವೆ ಈ ಐದು ಲಕ್ಷಣಗಳು

 ಮಧುಮೇಹದಿಂದ ಈ ರೋಗಗಳ ಅಪಾಯ ಕೂಡಾ ಹೆಚ್ಚುತ್ತದೆ :  
ಮಧುಮೇಹವು ನಮ್ಮ ದೇಹಕ್ಕೆ ಹಲವಾರು ರೀತಿಯಲ್ಲಿ ಹಾನಿ ಮಾಡುತ್ತದೆ. ಮಾಹಿತಿಯ ಪ್ರಕಾರ, ಮಧುಮೇಹವು ಹೃದ್ರೋಗ, ಮೂತ್ರಪಿಂಡದ ತೊಂದರೆಗಳು, ಪಾರ್ಶ್ವವಾಯು, ಕಣ್ಣು ಮತ್ತು ಹಲ್ಲುಗಳ ಸಮಸ್ಯೆಗಳಿಗೆ ಕೂಡಾ ಕಾರಣವಾಗಬಹುದು.

ಈ ವಿಷಯಗಳನ್ನು ನೆನಪಿನಲ್ಲಿಡಿ :
 ಮಧುಮೇಹದ ಅಪಾಯವನ್ನು ತಪ್ಪಿಸಬೇಕಾದರೆ, ದೇಹ ತೂಕದ ಸಮತೋಲನವನ್ನು ಕಾಪಾಡಿಕೊಳ್ಳಿ. ಇದಲ್ಲದೆ, ಪ್ರತಿದಿನ ವ್ಯಾಯಾಮ ಮಾಡಿ.  ದೇಹವನ್ನು ದೈಹಿಕವಾಗಿ ಕ್ರಿಯಾಶೀಲವಾಗಿರಿಸಿಕೊಳ್ಳಿ. ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ. ಜಂಕ್ ಫುಡ್ ನಿಂದ ಅಂತರ ಕಾಯ್ದುಕೊಳ್ಳಿ. 

ಇದನ್ನೂ ಓದಿ : ಹೃದಯ ಆರೋಗ್ಯವಾಗಿರಬೇಕಾದರೆ ಈ ನಾಲ್ಕು ವಸ್ತುಗಳಿಂದ ಅಂತರ ಕಾಯ್ದುಕೊಳ್ಳಿ

 

( ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News