ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುತ್ತವೆ ಈ ಹಸಿರು ಎಲೆಗಳು

Diabetes Control Tips : ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ, ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ಕಾಡುವುದಕ್ಕೆ ಆರಂಭವಾಗುತ್ತದೆ. ಕೆಲವು ಹಸಿರು ಎಲೆಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  

Written by - Ranjitha R K | Last Updated : Mar 29, 2023, 02:22 PM IST
  • ಮಧುಮೇಹವು ಜೀವನದುದ್ದಕ್ಕೂ ಬಾಧಿಸುವ ಕಾಯಿಲೆಯಾಗಿದೆ.
  • ಪ್ರತಿ ವರ್ಷ ಒಂದು ದಶಲಕ್ಷಕ್ಕೂ ಹೆಚ್ಚು ಜನ ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ
  • ಹಸಿರು ಎಲೆಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುತ್ತವೆ ಈ ಹಸಿರು ಎಲೆಗಳು  title=

ಬೆಂಗಳೂರು : ಮಧುಮೇಹವು ಜೀವನದುದ್ದಕ್ಕೂ ಬಾಧಿಸುವ  ಕಾಯಿಲೆಯಾಗಿದೆ. ಪ್ರತಿ ವರ್ಷ ಒಂದು ದಶಲಕ್ಷಕ್ಕೂ ಹೆಚ್ಚು ಜನ ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದಾಗ ಹೃದಯಾಘಾತ, ಪಾರ್ಶ್ವವಾಯು, ದೃಷ್ಟಿ ನಷ್ಟ, ಮೂತ್ರಪಿಂಡ ವೈಫಲ್ಯ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ, ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ಕಾಡುವುದಕ್ಕೆ ಆರಂಭವಾಗುತ್ತದೆ. ಕೆಲವು ಹಸಿರು ಎಲೆಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮಾವಿನ ಎಲೆಗಳು :
ಈಗ ಮಾವಿನ ಹಣ್ಣಿನ ಸೀಸನ್ ಶುರುವಾಗಿದೆ. ಹಲವಾರು ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಹಣ್ಣುಗಳಂತೆಯೇ ಇದರ ಎಲೆಗಳು ಕೂಡಾ ಔಷಧೀಯ ಗುಣಗಳನ್ನು ಹೊಂದಿವೆ. ಮಾವಿನ ಎಲೆಗಳು ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತವೆ. ಮಾವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಲು ಬಿಡುವುದಿಲ್ಲ. ಇದು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ತಿಂದರೆ ಅಥವಾ ಈ ಎಲೆಗಳನ್ನು ಬೇಯಿಸಿದ ನೀರನ್ನು ಕುಡಿದರೆ ಮಧುಮೇಹ ಸಂಪೂರ್ಣ ಹತೋಟಿಗೆ ಬರುತ್ತದೆ. 

ಇದನ್ನೂ ಓದಿ : ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಈ ಕಹಿ ಜ್ಯೂಸ್- ತೂಕ ಇಳಿಕೆ ಜೊತೆಗೆ ಸಿಗುತ್ತೆ ಹಲವು ಅದ್ಭುತ ಲಾಭ

ಬೇವಿನ ಎಲೆಗಳು : 
ಬೇವಿನ ಎಲೆಗಳಲ್ಲಿಇನ್ಸುಲಿನ್ ಉತ್ಪಾದನೆಗೆ ಸಹಾಯ ಮಾಡುವ ಅಂಶ ಅಡಗಿರುತ್ತದೆ. ಬೇವಿನ ಸೊಪ್ಪನ್ನು ಅರೆದು ನಿತ್ಯ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ.

ಕರಿಬೇವಿನ ಎಲೆಗಳು :
ಕರಿಬೇವಿನ ಎಲೆಗಳು ವಿಟಮಿನ್‌ಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ದವಾಗಿವೆ. ಇವುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ತುಳಸಿ ಎಲೆಗಳು :
ತುಳಸಿ ಎಲೆಗಳು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುವ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ :  Health Tipes: ಬಸಳೆ ಸೊಪ್ಪು ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ಇದರಿಂದ ದುಬಾರಿ ಲಾಭ.. 

ಸೀತಾಫಲ ಹಣ್ಣಿನ ಎಲೆ  : 
ಸೀತಾಫಲದ ಎಲೆಗಳು ಮಧುಮೇಹ ನಿಯಂತ್ರಿಸುವ ಗುಣವನ್ನು ಹೊಂದಿವೆ. ನಿಯಮಿತವಾಗಿ ಸೀತಾಫಲ ಎಲೆಗಳನ್ನು ತಿನ್ನುವುದ ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಸಹ ಕಡಿಮೆ ಮಾಡುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News