ಹಗಲಿನಲ್ಲಿ ಮಲಗುವುದು ಒಳ್ಳೆಯದೋ... ಕೆಟ್ಟದೋ..? ಸತ್ಯ ತಿಳಿದ್ರೆ ನಾಳೆಯಿಂದ ನೀವು..

Health tips : ನಿದ್ರೆಯ ಸಮತೋಲನವು ದೇಹಕ್ಕೆ ಮಾತ್ರವಲ್ಲದೆ ಇಡೀ ಮೆದುಳಿಗೆ ಮುಖ್ಯ. ನಿದ್ರೆಯ ಅಗತ್ಯವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಸಾಮಾನ್ಯವಾಗಿ 7 ರಿಂದ 8 ಗಂಟೆಗಳ ನಿದ್ದೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ... ಇನ್ನು ಹಲವು ಜನರಿಗೆ ಮಧ್ಯಾಹ್ನ ಮಲಗುವ ಅಭ್ಯಾಸವಿರುತ್ತದೆ.. ಇದು ಒಳ್ಳೆಯದಾ.. ಕೆಟ್ಟದ್ದಾ..? ಬನ್ನಿ ತಿಳಿಯೋಣ.. 

Written by - Krishna N K | Last Updated : Oct 20, 2024, 05:15 PM IST
    • ನಿದ್ರೆಯ ಸಮತೋಲನವು ದೇಹಕ್ಕೆ ಮಾತ್ರವಲ್ಲದೆ ಇಡೀ ಮೆದುಳಿಗೆ ಮುಖ್ಯ.
    • ನಿದ್ರೆಯ ಅಗತ್ಯವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.
    • ಮಧ್ಯಾಹ್ನ ಮಲಗುವ ಅಭ್ಯಾಸವಿರುತ್ತದೆ.. ಇದು ಒಳ್ಳೆಯದಾ.. ಕೆಟ್ಟದ್ದಾ..?
ಹಗಲಿನಲ್ಲಿ ಮಲಗುವುದು ಒಳ್ಳೆಯದೋ... ಕೆಟ್ಟದೋ..? ಸತ್ಯ ತಿಳಿದ್ರೆ ನಾಳೆಯಿಂದ ನೀವು.. title=

Afternoon Sleep benefits : ಮಧ್ಯಾಹ್ನ ಊಟದ ನಂತರ ನಿದ್ದೆ ಬರುವುದು ಸಹಜ. ಏಕೆಂದರೆ, ಮಧ್ಯಾಹ್ನದ ಊಟದ ನಂತರ, ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ನೀವು ನಿದ್ರೆ, ಸುಸ್ತು ಇತ್ಯಾದಿಗಳನ್ನು ಅನುಭವಿಸುವಿರಿ. ಹಾಗಾದರೆ ಮಧ್ಯಾಹ್ನದ ನಿದ್ದೆ ದೇಹಕ್ಕೆ ಒಳ್ಳೆಯದೇ? ಕೆಟ್ಟದ್ದೇ..? ಈ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ.. ? ಬನ್ನಿ ತಿಳಿಯೋಣ.. 

ಮಧ್ಯಾಹ್ನ ನಿದ್ದೆ ಮಾಡುವುದರ ಪ್ರಯೋಜನಗಳು: ಮಧ್ಯಾಹ್ನದ ನಿದ್ದೆ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ವಿಶ್ರಾಂತಿ ನೀಡುತ್ತದೆ. ಹಗಲಿನಲ್ಲಿ ಸುಮಾರು 1 ಗಂಟೆ ನಿದ್ರೆ ಇಡೀ ದೇಹದ ಸ್ನಾಯುಗಳು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ, ಈ ನಿದ್ರೆಯು ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ.  

ಇದನ್ನೂ ಓದಿ:ಜ್ವರ ಬಂದಾಗ ಸ್ನಾನ ಮಾಡಬೇಕೆ ಅಥವಾ ಬೇಡವೇ..? ಉತ್ತರ ತಿಳಿದ್ರೆ ನೀವು ಅಚ್ಚರಿಗೊಳ್ಳುತ್ತೀರಾ..

ಹೆಚ್ಚು ಪ್ರಯಾಣ ಮಾಡಿದವರು ಮತ್ತು ರಾತ್ರಿಯಲ್ಲಿ ಹೆಚ್ಚು ಹೊತ್ತು ಕೆಲಸ ಮಾಡುವವರಿಗೆ ನಿದ್ದೆ ಮಾಡಲು ತೊಂದರೆಯಾಗುತ್ತದೆ. ಈ ಸಮಯದಲ್ಲಿ, ಆಯಾಸವನ್ನು ನಿವಾರಿಸಲು ಮಧ್ಯಾಹ್ನ ಸ್ವಲ್ಪ ಸಮಯ ಮಲಗಬಹುದು. ಆದುದರಿಂದಲೇ ಮುಂಜಾನೆ ಬೇಗ ಏಳುವ ಗೃಹಿಣಿಯರು ಮನೆಗೆಲಸವನ್ನು ಮಾಡಿಕೊಂಡು, ಮಧ್ಯಾಹ್ನದ ಹೊತ್ತಿನಲ್ಲಿ ಮಲಗುವ ಅಭ್ಯಾಸ ಮಾಡಿಕೊಳ್ಳುತ್ತಾರೆ.

ಮಧ್ಯಾಹ್ನ ನಿದ್ದೆ ಮಾಡುವಾಗ ಏನು ಮಾಡಬಾರದು..? : ಅರ್ಧ ಗಂಟೆಗಿಂತ ಹೆಚ್ಚು ನಿದ್ದೆ ಮಾಡಬೇಡಿ. ಇದಕ್ಕಿಂತ ಹೆಚ್ಚು ಸಮಯ ನಿದ್ರಿಸುವುದು ನಿಮ್ಮ ದೇಹದ ಜೈವಿಕ ಗಡಿಯಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ರಾತ್ರಿಯು ಸ್ವಾಭಾವಿಕವಾಗಿ ನಿದ್ರೆಗೆ ಇದು ಅಡ್ಡಿಯಾಗುತ್ತದೆ..  

ಇದನ್ನೂ ಓದಿ:ಜ್ವರ ಬಂದಾಗ ಸ್ನಾನ ಮಾಡಬೇಕೆ ಅಥವಾ ಬೇಡವೇ..? ಉತ್ತರ ತಿಳಿದ್ರೆ ನೀವು ಅಚ್ಚರಿಗೊಳ್ಳುತ್ತೀರಾ..

(ಸೂಚನೆ : ಈ ವಿವರಗಳನ್ನು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ನೀಡಲಾಗಿದೆ. ಈ ವಿಷಯಗಳು ಮಾಹಿತಿಗಾಗಿ ಮಾತ್ರ. ಪ್ರಯತ್ನಿಸುವ ಮೊದಲು ಸಂಬಂಧಿತ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ಯಾವುದೇ ಅಡ್ಡ ಪರಿಣಾಮಗಳಿಗೆ Zee Kannada News ಜವಾಬ್ದಾರನಾಗಿರುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News