Rose tea for Weight loss : ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ..? ಹಾಗಿದ್ರೆ ಖಂಡಿತವಾಗಿಯೂ ನೀವು ರೋಸ್ ಟೀ ಬಗ್ಗೆ ತಿಳಿದುಕೊಳ್ಳಬೇಕು. ಅಲ್ಲದೆ, ಈ ಚಹ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಇದು ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕ ಸದೃಢಗೊಳಿಸುತ್ತದೆ. ಬನ್ನಿ ರೋಸ್ ಟೀ ಮಾಡುವುದು ಹೇಗೆ ಅಂತ ತಿಳಿಯೋಣ..
ಗುಲಾಬಿ ಚಹಾ ಮಾಡುವುದು ತುಂಬಾ ಸುಲಭ. ಇದಕ್ಕೆ ಹೆಚ್ಚಿನ ಪದಾರ್ಥಗ ಬೇಕಿಲ್ಲ. ಗುಲಾಬಿ ದಳಗಳನ್ನು ನೀರಿನಲ್ಲಿ ಕುದಿಸಿ ನೇರವಾಗಿ ಕುಡಿಯಬಹುದು. ಇಲ್ಲವೇ.. ಟೀ ಪುಡಿ ಮತ್ತು ಗುಲಾಬಿ ದಳಗಳನ್ನು ಸೇರಿಸಿ ಸೋಸಿ ಬೆಳಗ್ಗೆ ಸೇವನೆ ಮಾಡಬಹುದು. ಸಾಮಾನ್ಯ ಚಹಾಗಳಿಗಿಂತ ಇದರು ಭಿನ್ನವಾಗಿದ್ದು, ಆರೋಗ್ಯಕರವಾಗಿರುತ್ತದೆ.
ಇದನ್ನೂ ಓದಿ: ಹೂಸು ಬಿಡೋದು ಆರೋಗ್ಯಕ್ಕೆ ಒಳ್ಳೆದಾ, ಕೆಟ್ಟದ್ದಾ? ವೈದ್ಯರು ಈ ಬಗ್ಗೆ ಹೇಳೋದೇನು?
ಈ ಚಹ ತೂಕ ನಷ್ಟ ಮಾಡುವಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಲ್ಲದೆ, ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮ ಮತ್ತು ಕೂದಲು ಆರೋಗ್ಯಕರವಾಗಿರುತ್ತದೆ ಎಂದು ಹೇಳಲಾಗುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು ಜೀರ್ಣಕ್ರಿಯೆಗೂ ಸಹಕಾರಿ.
ತೂಕ ನಷ್ಟಕ್ಕೆ ಸಹಾಯಕಾರಿ : ಗುಲಾಬಿ ಚಹಾದಲ್ಲಿರುವ ಉತ್ಕರ್ಷಣ ರೋಗ ನಿರೋಧಕಗಳು, ಉರಿಯೂತದ ಗುಣಲಕ್ಷಣಗಳು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದ ತೂಕ ನಷ್ಟವಾಗುತ್ತದೆ. ಅಲ್ಲದೆ, ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಮೂತ್ರನಾಳದ ಸೋಂಕನ್ನು ಸಹ ತಡೆಯುತ್ತದೆ.
ಇದನ್ನೂ ಓದಿ: ದೇಹದಲ್ಲಿ ಹೆಚ್ಚಾಗಿದೆಯಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ? ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ!
ಕೆಫೀನ್ ಚಹಾಗಳಿಗಿಂತ ರೋಸ್ ಟೀ ಆರೋಗ್ಯಕರ. ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ವಿವಿಧ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಈ ಗುಲಾಬಿ ಚಹಾ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ