ಹೀಗೆ ಮಾಡಿ ನೋಡಿ ಮಂಡಿ ನೋವಿನಿಂದ ಶಾಶ್ವತ ಪರಿಹಾರ ಸಿಗುತ್ತದೆ !

ಹವಾಮಾನ ಬದಲಾಗುತ್ತಿದ್ದಂತೆಯೇ ಈ ಸಮಸ್ಯೆ ಹೆಚ್ಚು ಉಲ್ಬಣಿಸದಂತೆ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲಿ ನಾವು ಮಾಡುವ ಸಣ್ಣ ಸಣ್ಣ ಪ್ರಯತ್ನಗಳು ಕೂಡಾ ಪ್ರಯೋಜನಕ್ಕೆ ಬರುತ್ತದೆ.   

Written by - Ranjitha R K | Last Updated : Feb 19, 2024, 03:29 PM IST
  • ಮಂಡಿ ನೋವಿದ್ದಾಗ ಕಾಲು ನೆಲಕ್ಕೆ ಊರುವುದು ಕೂಡಾ ಕಷ್ಟ
  • ಚಳಿಗಾಲ, ಮಳೆಗಾಲದಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚುತ್ತದೆ
  • ಮಂಡಿ ನೋವು ಕಾಣಿಸಿಕೊಂಡರೆ ಅದನ್ನು ಸಹಿಸುವುದು ಬಹಳ ಕಷ್ಟ.
ಹೀಗೆ ಮಾಡಿ ನೋಡಿ ಮಂಡಿ ನೋವಿನಿಂದ ಶಾಶ್ವತ ಪರಿಹಾರ ಸಿಗುತ್ತದೆ ! title=

ಬೆಂಗಳೂರು : ಮಂಡಿ ನೋವಿದ್ದಾಗ ಕಾಲು ನೆಲಕ್ಕೆ ಊರುವುದು ಕೂಡಾ ಒಮ್ಮೊಮ್ಮೆ ಭಾರೀ ಕಷ್ಟವಾಗುತ್ತದೆ. ಚಳಿಗಾಲ, ಮಳೆಗಾಲದಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚುತ್ತದೆ. ಮಂಡಿ  ನೋವು ಕಾಣಿಸಿಕೊಂಡರೆ ಅದನ್ನು ಸಹಿಸುವುದು ಬಹಳ ಕಷ್ಟ. ಈ ನೋವು  ಪ್ರಾಣವನ್ನೇ ಹಿಂಡಿ ಬಿಡುತ್ತದೆ. ಮಂಡಿ ನೋವು ವಯಸ್ಸಾದವರಿಗೆ ಮಾತ್ರವಲ್ಲ ಮಧ್ಯ ವಯಸ್ಕರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಹವಾಮಾನ ಬದಲಾಗುತ್ತಿದ್ದಂತೆಯೇ ಈ ಸಮಸ್ಯೆ ಹೆಚ್ಚು ಉಲ್ಬಣಿಸದಂತೆ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲಿ ನಾವು ಮಾಡುವ ಸಣ್ಣ  ಸಣ್ಣ ಪ್ರಯತ್ನಗಳು ಕೂಡಾ ಪ್ರಯೋಜನಕ್ಕೆ ಬರುತ್ತದೆ. 

1. ನಿಮ್ಮನ್ನು ಬೆಚ್ಚಗಾಗಿರಿಸಿಕೊಳ್ಳಿ :
 ಮಂಡಿ ಸೆಳೆಯುವುದು, ಮಂಡಿ ನೋವಿನ ಸಮಸ್ಯೆಯಿಂದ ಪರಿಹಾರಕ್ಕಾಗಿ ನಿಮ್ಮ ದೇಹವನ್ನು ಸದಾ ಬೆಚ್ಚಗಿರಿಸಬೇಕು. ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು. ಬಿಗಿಯಾದ ಬಟ್ಟೆಗಳನ್ನು ಧರಿಸುವುದು ನಿಮ್ಮ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ, ಇದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : ಈ ಕಾಯಿಲೆ ಇರುವವರಿಗೆ ಪಪ್ಪಾಯಿ ವಿಷಕ್ಕೆ ಸಮ.. ಎಂದಿಗೂ ತಿನ್ನುವ ಸಾಹಸ ಮಾಡಬೇಡಿ!

2. ಹೀಟ್ ಪ್ಯಾಕ್‌ಗಳು : 
ಇತ್ತೀಚಿನ ದಿನಗಳಲ್ಲಿ, ಅನೇಕ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.  ಇವುಗಳ ಸಹಾಯದಿಂದ ಕೀಲುಗಳನ್ನು ಮಸಾಜ್ ಮಾಡಬಹುದು.ಹೀಟ್ ಪ್ಯಾಡ್, ಬಿಸಿನೀರಿನ ಬಾಟಲ್ ಅಥವಾ ಬಿಸಿ ಟವೆಲ್ ಅನ್ನು ಬಳಸಿ ಮಸಾಜ್ ಮಾಡಬಹುದು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸಿ, ನೋವನ್ನು ಕಡಿಮೆ ಮಾಡುತ್ತದೆ. 

3. ಲಘು ವ್ಯಾಯಾಮ :
ಮಂಡಿ ನೋವಿನಿಂದ ಪರಿಹಾರ ಪಡೆಯಲು ನಿಯಮಿತವಾಗಿ ಲಘು ವ್ಯಾಯಾಮ ಮಾಡಬೇಕು. ವಾಕಿಂಗ್ ಮತ್ತು ಯೋಗ ಮಾಡುವುದು ಹೆಚ್ಚು ಪ್ರಯೋಜನಕಾರಿಯಾಗಬಹುದು. ಕೀಲುಗಳಲ್ಲಿ ನೋವು ಇದ್ದರೆ, ಎಂದಿಗೂ ತೀವ್ರವಾದ ವ್ಯಾಯಾಮವನ್ನು ಮಾಡಬಾರದು.

4. ಸಕ್ರಿಯರಾಗಿರಿ : 
ಚಳಿಗಾಲದಲ್ಲಿ ಜನರು ಸಾಮಾನ್ಯವಾಗಿ ಚಟುವಟಿಕೆಯನ್ನು ಕಡಿಮೆ ಮಾಡುತ್ತಾರೆ. ಕುಳಿತಲ್ಲೇ ಕುಳಿತು ಕೊಳ್ಳುವುದು, ಹೆಚ್ಚಿಗೆ ನಡೆದಾಡದೆ ಇರುವುದು ಹೀಗೆ ಆರಾಮಾಗಿ ಇರಲು ಪ್ರಯತ್ನಿಸುತ್ತಾರೆ. ಇದರ ಬದಲು ಸಕ್ರಿಯವಾಗಿರಲು ಪ್ರಯತ್ನಿಸಿ. ದೈನಂದಿನ ಕಾರ್ಯಗಳನ್ನು ನೀವೇ ಮಾಡಿ ಮುಗಿಸಿ. 

ಇದನ್ನೂ ಓದಿ : ದಿನನಿತ್ಯ ಕಿವಿ ಶುಚಿಗೊಳಿಸುವುದು ಅಗತ್ಯವೇ ? ಈ ಬಗ್ಗೆ ತಜ್ಞರ ಸಲಹೆಯೇನು?

5.ತೂಕವನ್ನು ನಿಯಂತ್ರಿಸಿ : 
ನಿಮ್ಮ ದೇಹ ತೂಕವೇ ಮಂಡಿಯನ್ನು ಹೆಚ್ಚು ಬಾಧಿಸುವುದು. ಹೀಗಾಗಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ. ತೂಕ ಹೆಚ್ಚಾದರೆ ಕೀಲುಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಆದ್ದರಿಂದ, ಯಾವಾಗಲೂ ಸಮತೋಲಿತ ಆಹಾರವನ್ನು ಸೇವಿಸುವ ಮೂಲಕ ತೂಕವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿ. 

6. ಊತ ಕಡಿಮೆ ಮಾಡುವ ಆಹಾರಗಳನ್ನು ಸೇವಿಸಿ : 
ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ, ಕೀಲು ನೋವು ಮತ್ತು ಊತದಿಂದ ಪರಿಹಾರವನ್ನು ಪಡೆಯಬಹುದು. ನಿತ್ಯದ ಆಹಾರದಲ್ಲಿ ಒಣ ಹಣ್ಣುಗಳು, ಹಸಿರು ಎಲೆಗಳ ತರಕಾರಿಗಳು, ತಾಜಾ ಹಣ್ಣುಗಳು ಮತ್ತು ಕೊಬ್ಬಿನ ಅಂಶ ಇರುವ ಮೀನುಗಳನ್ನು ಸೇವಿಸುವ ಮೂಲಕ ಮಂಡಿ ಸೆಳೆತ ಮತ್ತು ಊತವನ್ನು ಕಡಿಮೆ ಮಾಡಬಹುದು. 

7. ಹೆಚ್ಚು ಹೆಚ್ಚು ನೀರು ಸೇವಿಸಿ : 
ಚಳಿಗಾಲದಲ್ಲಿ, ಜನರು ಸಾಮಾನ್ಯವಾಗಿ ಕಡಿಮೆ ನೀರನ್ನು ಕುಡಿಯುತ್ತಾರೆ. ಇದು ಕೀಲು, ಮಂಡಿಗಳಲ್ಲಿನ ನೋವನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ನಿಮ್ಮ ದೇಹಕ್ಕೆ ಅಗತ್ಯ ಇರುವಷ್ಟು ನೀರನ್ನು ಸೇವಿಸಿ.  

ಇದನ್ನೂ ಓದಿ : Guava Leaves: ಈ ಐದು ಆರೋಗ್ಯ ಸಮಸ್ಯೆಗಳನ್ನು ಬುಡದಿಂದಲೇ ನಾಶ ಮಾಡುತ್ತದೆ ಪೇರಳೆ ಎಲೆ !

 (ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News